ಆಂಗ್ಲರನ್ನ ಚೆಂಡಾಡಿದ ಹಿಟ್ಮ್ಯಾನ್ ರೋಹಿತ್ : ಶತಕ ಬಾರಿಸಿ ಅಬ್ಬರಿಸಿದ ಮುಂಬೈಕರ್

ಟೀಮ್ ಇಂಡಿಯಾದ ಹಿಟ್ಮ್ಯಾನ್ ರೋಹಿತ್ ಶರ್ಮಾ ವಿಶ್ವ ಯುದ್ದದ್ದಲ್ಲಿ ಮತ್ತೊಮ್ಮೆ ಅಬ್ಬರಿಸಿದ್ದಾರೆ. ನಿನ್ನೆ ಬರ್ಮಿಂಗ್ಹ್ಯಾಮ್ ಅಂಗಳದಲ್ಲಿ ಆಂಗ್ಲರ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ವೀರಾವೇಶದ ಬ್ಯಾಟಿಂಗ್ ಮಾಡಿದ್ರು.

ಕಳೆದ ಎರಡು ಪಂದ್ಯಗಳಿಂದ ಫ್ಲಾಪ್ ಆಗಿದ್ದ ರೋಹಿತ್ ನಿನ್ನೆ ಆಂಗ್ಲರ ಎದುರು ರನ್ ಮಳೆಯನ್ನೆ ಸುರಿಸಿದ್ರು. ಬನ್ನಿ ಹಾಗಾದ್ರೆ ರೋಹಿತ್ ಬ್ಯಾಟಿಂಗ್ ವೈಭವ ಹೇಗಿತ್ತು ಅನ್ನೋದನ್ನ ನೀವೆ ನೋಡಿ

 

 

 

 

 

 

 

 

 

 

 

 

 

ಜೀವದಾನ ಪಡೆದು ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ರೋಹಿತ್
ಕನ್ನಡಿಗ ರಾಹುಲ್ ಜೊತೆ ಕಣಕ್ಕಿಳಿದ ರೋಹಿತ್ ಆರಂಭದಲ್ಲಿ Slow  and Steady  ಇನ್ನಿಂಗ್ಸ್ ಕಟ್ಟಿದ್ರು. ಜೋಫ್ರಾ ಅರ್ಚರ್ ಅವರ ಎರಡನೇ ಓವರ್ನ ನಾಲ್ಕನೆ ಎಸೆತದಲ್ಲಿ ರೋಹಿತ್ ಸ್ಲಿಪ್ನಲ್ಲಿದ್ದ ರೋಟ್ಗೆ ಕ್ಯಾಚ್ ಕೊಟ್ರು. ಆದರೆ ರೂಟ್ ಕ್ಯಾಚ್ ಕೈಚೆಲ್ಲಿ ದೊಡ್ಡ ಯಡವಟ್ಟು ಮಾಡಿಕೊಂಡ್ರು..

ಕ್ಯಾಪ್ಟನ್ ಕೊಹ್ಲಿ ಜೊತೆ ರೋಹಿತ್ ಬೊಂಬಾಟ್ ಬ್ಯಾಟಿಂಗ್
ಎರಡನೇ ವಿಕೆಟ್ಗೆ ಕ್ಯಾಪ್ಟನ್ ಕೊಹ್ಲಿ ಸಾಥ್ ಪಡೆದ ರೋಹಿತ್ ಅಂಗ್ಲ ಬೌಲರ್ಸ್ಗಳನ್ನ ಮನಬಂದಂತೆ ಚೆಂಡಾಡಿದ್ರು. ರೋಹಿತ್ 59 ಎಸೆತದಲ್ಲಿ ಅರ್ಧ ಶತಕ ಬಾರಿಸಿದ್ರು. ಕೊಹ್ಲಿ ಜೊತೆ ಶತಕದ ಜೊತೆಯಾಟ ಆಡಿದ ಕ್ಯಾಪ್ಟನ್ ಕೊಹ್ಲಿ ಜೊತೆ ಒಟ್ಟು 138 ರನ್ ಗಳ ಜೊತೆಯಾಟ ನೀಡಿದ್ರು.

ರೋಹಿತ್ ಶತಕ ಆಂಗ್ಲರು ವಿಲ ವಿಲ
ಕ್ಯಾಪ್ಟನ್ ಕೊಹ್ಲಿ ಔಟಾದ ನಂತರ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ರೋಹಿತ್ 106 ಎಸೆತದಲ್ಲಿ ಶತಕ ಬಾರಿಸಿ ಸಂಭ್ರಮಿಸಿದ್ರು. ಇದರೊಂದಿಗೆ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ 25ನೇ ಶತಕ ಬಾರಿಸಿದ ಹಿರಿಮೆಗೆ ಪಾತ್ರರಾದ್ರು ಮತ್ತು ಟೂರ್ನಿಯಲ್ಲಿ ಮೂರನೇ ಶತಕ ಬಾರಿಸಿದ ಸಾಧೆನೆ ಮಾಡಿದ್ರು.

ಶತಕ ಬಾರಿಸಿ ಅಬ್ಬರಿಸಿದ ಹಿಟ್ಮ್ಯಾನ್
109 ಎಸೆತಗಳನ್ನ ಎಸೆತಗಳನ್ನ ಎದುರಿಸಿದ ರೋಹಿತ್ ಒಟ್ಟು 102 ರನ್ ಕಲೆ ಹಾಕಿದ್ರು. 15 ಬೌಂಡರಿಗಳನ್ನ ಬಾರಿಸಿದ ರೋಹಿತ್ 93.58 ಸ್ಟ್ರೈಕ್ ರೇಟ್ ಪಡೆದ್ರು.

ಒಟ್ಟಾರೆ ರೋಹಿತ್ ಶರ್ಮಾ ಆಂಗ್ಲರ ವರುದ್ಧ ಶತಕ ಬಾರಿಸುವ ಮೂಲಕ ಮತ್ತೆ ಫಾರ್ಮ್ಗೆ ಮರಳಿದ್ದು ಸೆಮಿಫೈನಲ್ನಲ್ಲೂ ಇದೇ ಪ್ರದರ್ಶನವನ್ನ ಮುಂದುವರೆಸಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ