ಪ್ರತಿಯೊಬ್ಬ ವಿದ್ಯಾರ್ಥಿಯು ಜೀವನದಲ್ಲಿ ಜ್ಞಾನ ಮತ್ತು ಕೌಶಲ್ಯ ಅಳವಡಿಸಿಕೊಳ್ಳಬೇಕು-ಉಪಕುಲಪತಿ ಕೆ.ಆರ್.ವೇಣುಗೋಪಾಲ್

ಬೆಂಗಳೂರು, ಜೂ.29-ಜ್ಞಾನ ಮತ್ತು ಕೌಶಲ್ಯವನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಕೆ.ಆರ್.ವೇಣುಗೋಪಾಲ್ ಹೇಳಿದರು.

ಜಯನಗರದ ನ್ಯಾಷನಲ್ ಕಾಲೇಜಿನ ಎಚ್.ಎನ್.ಕಲಾಕ್ಷೇತ್ರದಲ್ಲಿ ಡಾಟಾ ಸೈನ್ಸ್, ಇಂಟರ್‍ನೆಟ್ ಆಫ್ ಥಿಂಗ್ಸ್ ಅಂಡ್ ಬಯೋ ಮೆಡಿಕಲ್ ಎಲೆಕ್ಟ್ರಾನಿಕ್ಸ್ ಪದವಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ವ್ಯಕ್ತಿ ಜೀವನದಲ್ಲಿ ಪರಿಣಿತರಾಗಿ ಬೆಳೆಯಲು ಜ್ಞಾನ ಮತ್ತು ಕೌಶಲ್ಯವೇ ಮೂಲ ಶಕ್ತಿ. ಜೀವನದಲ್ಲಿ ಬುದ್ಧಿಶಕ್ತಿ ಜೊತೆಗೆ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳುವ ಮೂಲಕ ನಾವು ಯಶಸ್ಸನ್ನು ಕಾಣಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು ಹೇಳಿದರು..

ವಿದ್ಯಾರ್ಥಿಗಳು ತಮ್ಮ ದಿನನಿತ್ಯ ಜೀವನದಲ್ಲಿ ಓದುವಿನ ಜೊತೆಗೆ ಕೆಲವು ಕಲೆ, ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು, ಈ ಸಮಯದಲ್ಲಿ ತಾವು ಯಾವುದೇ ದುಶ್ಟಗಳಿಗೆ ಒಳಗಾಗಬಾರದು ಎಂದು ಎಚ್ಚರಿಸಿದರು

ಪ್ರೊ.ಎಸ್.ಎನ್. ನಾಗರಾಜ್ ರೆಡ್ಡಿ ಮಾತನಾಡಿ, ಬುದ್ಧಿ ಮತ್ತು ಕೌಶಲ್ಯದೊಂದಿಗೆ ದೃಢವಾದ ವ್ಯಕ್ತಿತ್ವ ನಿರ್ಮಾಣ ಬಹಳ ಮುಖ್ಯ.ಸಮಾಜದಲ್ಲಿ ಒತ್ತಡ ಮತ್ತು ದುಶ್ವಟ ನಿವರಣೆ ಮಾಡುವ ಶಕ್ತಿ ನಿಮ್ಮಲ್ಲಿರಬೇಕು ಎಂದು ಕಿವಿಮಾತು ಹೇಳಿದರು.

ನೀತಿಶಾಸ್ತ್ರ, ಧರ್ಮಸಿದ್ದಾಂತಗಳೇ ನ್ಯಾಷನಲ್ ಕಾಲೇಜಿನ ತಳಹದಿಯಾಗಿದೆ. ಪೋಷಕರು, ಹಿರಿಯರು, ಕುಟುಂಬದ ಬಗ್ಗೆ ಗೌರವವಿರಬೇಕು ಎಂದು ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷ ಡಾ.ಎ.ಎಚ್.ರಾಮರಾವ್ ಅವರು ವಿದ್ಯಾರ್ಥಿಗಳಿಗೆ ಸೂಚಿಸಿದರು.

ಡಾ. ಸದಾನಂದ, ಡಾ.ಅನಿಲ್ ಕುಮಾರ್, ಡಾ.ಬಿ.ಆರ್.ಪರಿಣಿತಾ ಹಾಗೂ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ