ವಿಶ್ವಕಪ್ನಲ್ಲಿ ಗೆಲುನ ಓಟ ಮುಂದುವರೆಸಿರುವ ಕೊಹ್ಲಿ ಸೈನ್ಯ ಇಂದು ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನ ಎದುರಿಸಲಿದೆ. ಮ್ಯಾಂಚೆಸ್ಟರ್ ಅಂಗಳದಲ್ಲಿ ಗೆಲುವಿನ ನಾಗಲೋಟದಲ್ಲಿ ಮುಂದುವರಿಸದಿರುವ ಟೀಂ ಇಂಡಿಯಾ ಬಲಿಷ್ಠ ಕೆರೆಬಿಯನ್ನರನ್ನ ಎದುರಿಸಲಿದ್ದಾರೆ. ದಶಕಗಳಂದ ವಿಶ್ವಕಪ್ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ರಣಾಂಗಣದಲ್ಲಿ ವೀರ ಸೇನಾನಿಗಳಂತೆ ಹೋರಾಡಿವೆ. ಇತ್ತಿಚಿನ ವಷಗಳಲ್ಲಿ ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮದಗಜಗಳಂತೆ ಹೋರಾಡಿವೆ. ಇದೀಗ ವಿಶ್ವಕಪ್ನಲ್ಲಿ ಉಭಯ ತಂಡಗಳು ವಿಶ್ವಯುದ್ದದಲ್ಲಿ ಮುಖಾಮುಖಿಯಾಗುತ್ತಿವೆ.
ಗೆಲುವಿನ ಓಟ ಮುಂದುವೆಸಲು ಟೀಮ್ ಇಂಡಿಯಾ ಪ್ಲಾನ್
ಆಡಿದ ನಾಲ್ಕು ಪಂದ್ಯಗಳನ್ನ ಗೆದ್ದಿರುವ ಕೊಹ್ಲಿ ಸೈನ್ಯ ಇಂದು ವಿಂಡೀಸ್ ವಿರುದ್ಧ ನಡೆಯುವ ಪಂದ್ಯದಲ್ಲೂ ಗೆದ್ದು ಗೆಲುವಿನ ಓಟ ಮುಂದುವೆಸಲು ಟೀಂ ಇಂಡಿಯಾ ಪ್ಲಾನ್ ಮಾಡಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ರದ್ದಾಗಿದ್ದು ಬಿಟ್ಟರೇ ಟೀಂ ಇಂಡಿಯಾ ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ವಿರುದ್ಧ ಗೆಲುವು ದಾಖಲಿಸಿದೆ. ವಿಂಡೀಸ್ ವಿರುದ್ಧವೂ ಗೆಲುವಿನ ಕೇಕೆ ಹಾಕಲು ಟೀಂ ಇಂಡಿಯಾ ಸರ್ವ ಸನ್ನಧದ್ಧವಾಗಿದೆ.
ಸೆಮಿ ಫೈನಲ್ ಕನಸಲ್ಲಿ ವಿರಾಟ್ ಸೈನ್ಯ
ಮೊನ್ನೆ ಆಫ್ಘಾನಿಸ್ತಾನ ವಿರುದ್ಧ ತಿಣುಕಾಡಿ ಗೆದ್ದ ನಂತರ ಪಾಠ ಕಲಿತಿರುವ ವಿರಾಟ್ ಸೈನ್ಯ ಇದೀಗ ಕೆರೆಬಿಯನ್ ವಿರುದ್ಧ ಸೆಣಸಲು ಸಜ್ಜಾಗಿದೆ. ಇಂದು ವಿಂಡೀಸ್ ಮೇಲೆ ವಿರಾಟ್ ಪಡೆ ಸವಾರಿ ಮಾಡಿದ್ರೆ ಕೊಹ್ಲಿ ಸೈನ್ಯದ ಸೆಮಿಫೈನಲ್ ಕನಸು ಕಾಣುತ್ತಿದೆ.
ಇಂದು ವೀಂಡಿಸ್ ತಂಡವನ್ನ ಉಡೀಸ್ ಮಾಡಿದ್ರೆ ಟೀಂ ಇಂಡಿಯಾದ ಸೆಮಿಫೈನಲ್ ಕನಸು ಒಕ್ಕಾ ಆಗಲಿದೆ.
ಮರುಕಳಿಸುತ್ತಾ 36 ವರ್ಷದ ಹಿಂದಿನ ಇತಿಹಾಸ ?
ಟೀಂ ಇಂಡಿಯಾ ಇಂದು ಮ್ಯಾಂಚೆಸ್ಟರ್ ಅಂಗಳದಲ್ಲಿ ಜೆಸನ್ ಪಡೆಯನ್ನ ಎದುರಿಸಲಿದೆ. 36 ವರ್ಷದ ಹಿಂದೆ ಇದೇ ಅಂಗಳದಲ್ಲಿ ಕಪಿಲ್ ಡೆವಿಲ್ಸ್ ತಂಡ ಲೀಗ್ ಹಂತದಲ್ಲಿ ಕ್ಲೈವ್ ಲಾಯ್ಡ್ ತಂಡವನ್ನ ಎದುರಿಸಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 60 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 262 ರನ್ ಕಲೆ ಹಾಕಿತ್ತು. ಸವಾಲಿನ ಟಾರ್ಗೆಟ್ ಬೆನ್ನತ್ತಿದ ವಿಂಡೀಸ್ ರೋಜರ್ ಬಿನ್ನಿ ಮತ್ತು ರವಿ ಶಾಸ್ತ್ರಿ ದಾಳಿಗೆ ತತ್ತರಿಸಿ 34 ರನ್ ಗಳಿಂದ ಸೋತಿತ್ತು.
ಇದೀಗ ಅಂದಿನ ಇತಿಹಾಸವನ್ನ ಟೀಂ ಇಂಡಿಯಾ ಮತ್ತೆ ರಿಪೀಟ್ ಮಾಡುತ್ತಾ ಅನ್ನೊದನ್ನ ಕಾದು ನೋಡಬೇಕಿದೆ.
ಏಕದಿನ ಕ್ರಿಕೆಟ್ನಲ್ಲಿ ಭಾರತ- ವಿಂಡೀಸ್ ಫೈಟ್
ಭಾರತ ಮತ್ತು ವೆಸ್ಟ್ಇಂಡೀಸ್ ತಂಡಗಳು ಇದುವರೆಗೂ 126 ಏಕದಿನ ಪಂದ್ಯಗಳನ್ನ ಆಡಿವೆ. ಇದರಲ್ಲಿ ಭಾರತ 59 ಪಂದ್ಯಗಳನ್ನ ಗೆದ್ದಿದ್ರೆ ವೆಸ್ಟ್ ಇಂಡೀಸ್ 62 ಪಂದ್ಯಗಳನ್ನ ಗೆದ್ದಿದೆ. 2 ಪಂದ್ಯಗಳು ಟೈನಲ್ಲಿ ಅಂತ್ಯ ಕಂಡಿದೆ. ಮೂರು ಪಂದ್ಯಗಳು ಫಲಿತಾಂಶ ರಹಿತವಾಗಿದೆ.
ವಿಶ್ವಕಪ್ನಲ್ಲಿ ಇಂಡೋ – ವಿಂಡೀಸ್ ಫೈಟ್
ವಿಶ್ವಕಪ್ನಲ್ಲಿ ಭಾರತ ಮತ್ತು ವೆಸ್ಟ್ಇಂಡೀಸ್ ತಂಡಗಳು ಇದುವರೆಗೂ 8 ಪಂದ್ಯಗಳನ್ನಾಡಿವೆ. ಇದರಲ್ಲಿ 5 ಬಾರಿ ಗೆದ್ರೆ ವೆಸ್ಟ್ಇಂಡೀಸ್ ತಂಡ 3 ಬಾರಿ ಗೆದ್ದಿದೆ.
ಕೊಹ್ಲಿ ಸೈನ್ಯಕ್ಕೆ ಸವಾಲು ಹಾಕಿದ ಕೆರೆಬಿಯನ್ ದೈತ್ಯರು
ಸದ್ಯ ಟೂರ್ನಿಯಲ್ಲಿ ಜೆಸನ್ ಪಡೆ ಹೇಳಿಕೊಳ್ಳುವಂತಹ ಪರ್ಫಾಮನ್ಸ್ ಕೊಟ್ಟಿಲ್ಲ. ಅಡಿದ 6 ಪಂದ್ಯಗಳಲ್ಲಿ 1 ಪಂದ್ಯವನ್ನ ಮಾತ್ರ ಗೆದ್ದು 4 ಪಂದ್ಯಗಳಲ್ಲಿ ಸೋಲು ಕಂಡಿದ್ದು 1 ಪಂದ್ಯ ರದ್ದುಗೊಂಡಿದೆ. ಗೆಲುವಿನ ಓಟದಲ್ಲಿ ಮುಂದುವರೆದಿರುವ ಟೀಂ ಇಂಡಿಯಾದ ಗೆಲುವಿನ ಓಟಕ್ಕೆ ಕೆರಬಿಯನ್ನರು ಕಟ್ಟಿ ಹಾಕಲು ಪ್ಲಾನ್ ಮಾಡಿದೆ. ಇದಕ್ಕೆ ತಂಡದಲ್ಲಿರುವ ಸ್ಟಾರ್ ಆಟಗಾರರಾದ ಕ್ರಿಸ್ ಗೇಲ್, ಶಿಮ್ರಾನ್ ಹೇಟ್ಮರ್ , ಜಾಸನ್ ಹೋಲ್ಡರ್ ಕಾಲೊರ್ಸ್ ಬ್ರಾತ್ ವೈಟ್ ತಂಡದ ಟ್ರಂಪ್ ಕಾರ್ಡ್ಗಳಾಗಿದ್ದಾರೆ.ಕೊಹ್ಲಿ ಸೈನ್ಯ ಆಡಿರುವ ಎಲ್ಲ ಪಂದ್ಯಗನ್ನ ಗೆದ್ದಿರೋದು ಆತ್ಮವಿಶ್ವಾಸವನ್ನ ಹೆಚ್ಚಿಸಿದ್ರೆ ವಿಂಡೀಸ್ಗೆ ಭುಜ ಬಲ ಒಂದೇ ಶಕ್ತಿಯಾಗಿದೆ.
ಒಟ್ಟಾರೆ ಇಂದು ನಡೆಯುವ ಕಾದಾಟ ಸಾಕಷ್ಟು ಕೂತೂಹಲ ಕೆರೆಳಿಸಿದ್ದು ಯಾರು ಯಾರ ಮೇಲೆ ಸವಾರಿ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ .