ಇಂಡೋ-ವಿಂಡೀಸ್​​ ಫೈಟ್​ಗೆ ಕೌಂಟ್​ಡೌನ್ ಶುರು: ಕೊಹ್ಲಿ ಸೈನ್ಯಕ್ಕೆ ಸವಾಲು ಹಾಕಿದ  ಕೆರೆಬಿಯನ್​  ದೈತ್ಯರು 

ಆಂಗ್ಲರ  ನಾಡಲ್ಲಿ ನಡೆಯುತ್ತಿರುವ  ವಿಶ್ವಯುದ್ದ  ಹಲವಾರು  ರೋಚಕ ಕದನಗಳಿಗೆ ಸಾಕ್ಷಿಯಾಗಿದೆ. ಇಂದು  ಮ್ಯಾಂಚೆಸ್ಟರ್  ಅಂಗಳದಲ್ಲಿ  ವಿಶ್ವ ಕ್ರಿಕೆಟ್ನ ಬಲಿಷ್ಠ  ತಂಡಗಳಾದ  ಟೀಂ  ಇಂಡಿಯಾ ಮತ್ತು  ವೆಸ್ಟ್  ಇಂಡೀಸ್  ತಂಡಗಳು ಗೆಲುವಿಗಾಗಿ   ಫೈಟ್  ನಡೆಸಲಿವೆ. ದಶಕಳ ಹಿಂದೆ  ವಿಶ್ವಕಪ್​ನಲ್ಲಿ   ಭಾರತ ಮತ್ತು  ವೆಸ್ಟ್ ಇಂಡೀಸ್  ತಂಡಗಳು  ರಣಾಂಗಣದಲ್ಲಿ  ವೀರ ಸೇನಾನಿಗಳಂತೆ  ಹೋರಾಡಿವೆ. ಇತ್ತಿಚಿನ  ವಷಗಳಲ್ಲಿ  ಟೀಂ  ಇಂಡಿಯಾ ಮತ್ತು  ವೆಸ್ಟ್  ಇಂಡೀಸ್  ತಂಡಗಳು  ಮದಗಜಗಳಂತೆ  ಹೋರಾಡಿವೆ. ಈ ಕಾರಣಕ್ಕಾಗಿ  ಇಂದು  ನಡೆಯುವ  ಇಂಡೋ  ವಿಂಡೀಸ್ ಫೈಟ್  ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ  ಉಭಯ ತಂಡಗಳಲ್ಲಿರುವ ಸ್ಟಾರ್  ಆಟಗಾರರ  ನಡುವೆ  ಬಿಗ್ ವಾರ್  ನಡೆಯಲಿದೆ. ಹಾಗಾದ್ರೆ  ಬನ್ನಿ  ಯಾರ್ಯಾರ ನಡುವೆ  ವಾರ್  ನಡೆಯಲಿದೆ ಅನ್ನೋದನ್ನ   ತೋರಿಸ್ತೀವಿ  ನೋಡಿ.

ರೋಹಿತ್​​ ಶರ್ಮಾ Vs ಶೆಲ್ಡನ್ ಕಾಟ್ರೆಲ್

ವಿಂಡೀಸ್‌ನ 29ರ ಹರೆಯದ ಎಡಗೈ ವೇಗಿ ಶೆಲ್ಡನ್ ಕಾಟ್ರೆಲ್, ಪ್ರತಿ ಬಾರಿಯೂ ವಿಕೆಟ್ ಪಡೆದಾಗ ಸೆಲ್ಯೂಟ್ ಸೆಲೆಬ್ರೇಷನ್ ಮೂಲಕ ಟೂರ್ನಿಯಲ್ಲಿ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ ವಿಂಡೀಸ್​​ನ ಪ್ರಮುಖ ಅಸ್ತ್ರವಾಗಿರುವ ಕಾಟ್ರೆಲ್, ಎದುರಾಳಿಗೆ ಕಂಟಕವಾಗಿ ಕಾಡಬಲ್ಲರು. ಆರಂಭದಲ್ಲಿಯೇ ತಂಡಕ್ಕೆ ಯಶಸ್ಸು ತಂದುಕೊಡಬಲ್ಲ ಬೌಲರ್​ ಆಗಿದ್ದಾರೆ.ಹೀಗಾಗಿ ವಿಂಡಿಸ್​​ನ ಶೆಲ್ಡನ್ ಕಾಟ್ರೆಲ್ ಹಾಗೂ  ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ನಡುವೆ ಫೈಟ್ ನಡೆಯಲಿದೆ. ರೋಹಿತ್ ಶರ್ಮಾ ತಂಡಕ್ಕೆ ಉತ್ತಮ ಸ್ಟಾರ್ಟ್ ಉತ್ಸಾಹದಲ್ಲಿದ್ರೆ. ಶೆಲ್ಡನ್ ಕಾಟ್ರೆಲ್ ತಂಡಕ್ಕೆ ಬ್ರೇಕ್ ನೀಡೋ ವಿಶ್ವಾಸದಲ್ಲಿದ್ದಾರೆ. ಆದ್ರೆ, ಹಿಟ್​ಮ್ಯಾನ್ ರೋಹಿತ್​ ಶರ್ಮಾ​ ಅಬ್ಬರಿಸಿದ್ರೆ, ಕಾಟ್ರೆಲ್ ಬೌಲಿಂಗ್​​​ ದಾಳಿ ಧೂಳಿಪಟ ಆಗೋದು ಗ್ಯಾರಂಟಿ… ಇನ್ನೂ ಈ ಇಬ್ಬರ ನಡುವಿನ ಚೆಂಡು-ದಾಂಡಿನ ನಡುವಿನ ಪೈಪೋಟಿ ಯಾವ ರೀತಿ ಇರುತ್ತೆ ಅನ್ನೋದು ಕಾದು ನೋಡಬೇಕಿದೆ.

ವಿರಾಟ್​ ಕೊಹ್ಲಿ Vs  ಒಶಾನೆ ಥಾಮಸ್ 

ವಿರಾಟ್​ ಕೊಹ್ಲಿ, ವಿಶ್ವದ ನಂಬರ್​ 01 ಬ್ಯಾಟ್ಸ್​​ಮನ್​. ಟೀಮ್ ಇಂಡಿಯಾ ಆಧಾರಸ್ಥಂಭ.. ಯಾವುದೇ ಬೌಲರ್​​ನ  ಎಸೆತಗಳನ್ನ ಲೀಲಾಜಾಲವಾಗಿ ಬೌಂಡರಿಗೆ ಅಟ್ಟುವಲ್ಲಿ ವಿರಾಟ್​ ಎತ್ತಿದ ಕೈ.. ಸದ್ಯ ಉತ್ತಮ ಫಾರ್ಮ್​ನಲ್ಲಿರುವ ವಿರಾಟ್​ ಕೊಹ್ಲಿಗೆ ವಿಂಡೀಸ್​ ಸ್ಪೀಡ್​ ಸ್ಟಾರ್​​​​​​​​​​​​ ಒಶಾನೆ ಥಾಮಸ್​ ಬ್ರೇಕ್​ ಹಾಕುವ ಕನಸಿನಲ್ಲಿದ್ದಾರೆ.. ವಿಂಡಿಸ್​ನ ಪ್ರಮುಖ ಬೌಲರ್​ ಆಗಿರುವ ಥಾಮಸ್​​ ಟೀಮ್ ಇಂಡಿಯಾದ ಅಗ್ರಕ್ರಮಾಂಕಕ್ಕೆ ಶಾಕ್ ನೀಡುವ ಉತ್ಸಾಹದಲ್ಲಿದ್ದಾರೆ. ಆದ್ರೆ ಥಾಮಸ್​ ಬೌಲಿಂಗ್​ ದಾಳಿಯನ್ನ ಛಿದ್ರಗೊಳಿಸಲು ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಟೊಂಕಕಟ್ಟಿ ನಿಂತಿದ್ದಾರೆ..

ಹಾರ್ದಿಕ್ ಪಾಂಡ್ಯಾ Vs​ ಜೆಸನ್ ಹೋಲ್ಡರ್​

ಟೀಮ್​ ಇಂಡಿಯಾದ ಪ್ರಮುಖ ಆಲ್​ರೌಂಡರ್​​​ ಹಾರ್ದಿಕ್ ಪಾಂಡ್ಯ ಹಾಗೂ ವಿಂಡಿಸ್​ ನಾಯಕ ಜೆಸನ್ ಹೋಲ್ಡರ್​ ನಡುವಿನ ಕಾಳಗ ತೀವ್ರ ಕುತೂಹಲ ಮೂಡಿಸಿದೆ. ಬ್ಯಾಟಿಂಗ್​ ಅಲ್ಲದೆ ಬೌಲಿಂಗ್​ನಲ್ಲಿ ಗಮನ ಸೆಳೆಯುತ್ತಿರುವ ಪಾಂಡ್ಯಾ ಟೀಮ್ ಇಂಡಿಯಾದ ಟ್ರಂಪ್​ ಕಾರ್ಡ್. ಸ್ಲಾಗ್​ ಓವರ್​​ಗಳಲ್ಲಿ ಅಬ್ಬರಿಸುವ ಪಾಂಡ್ಯ ತಂಡದ ದಿಕ್ಕನ್ನೇ ಬದಲಿಸಬಲ್ಲರು.. ಹೀಗಾಗಿ ಹಾರ್ದಿಕ್ ಪಾಂಡ್ಯ ಸಿಡಿದೆದ್ರೆ, ಕೆರಿಬಿಯನ್​ ದೈತ್ಯರು ಉಡೀಸ್​ ಆಗೋದು ಪಕ್ಕ.. ಪಾಂಡ್ಯಾಗೆ ಸರಿಸಾಟಿಯಾಗಿ ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಕಮಾಲ್ ಮಾಡಬಲ್ಲ ಆಟಗಾರ ಅಂದ್ರೆ ಅದು ವಿಂಡಿಸ್​ ನಾಯಕ ಜೆಸನ್ ಹೋಲ್ಡರ್, ಹೀಗಾಗಿ ಇಂದಿನ ಪಂದ್ಯದಲ್ಲಿ ಯಾರ್​ ಕೈ ಮೇಲಾಗುತ್ತೆ ಅನ್ನೋ ಕುತೂಹಲ ಕ್ರಿಕೆಟ್​ ಪ್ರೇಮಿಗಳಲ್ಲಿ ಮನೆ ಮಾಡಿದೆ.​

ಕ್ರಿಸ್​ ಗೇಲ್ Vs​ ಜಸ್ಪ್ರೀತ್ ಬೂಮ್ರಾ

ವಿಂಡೀಸ್​ನ ದೈತ್ಯ ಕ್ರಿಸ್​​ ಗೇಲ್ ಹಾಗೂ ಟೀಮ್ ಇಂಡಿಯಾ ಕನ್ಸಿಸ್ಟೆಂಟ್ ಬೌಲರ್ ಜಸ್ಪ್ರೀತ್​ ಬೂಮ್ರಾ ನಡುವೆ ಬಿಗ್​​ ಫೈಟ್​ ನಡೆಯಲಿದೆ. ವಿಂಡಿಸ್​​ನ ಡೇಂಜರಸ್ ಬ್ಯಾಟ್ಸ್​ಮನ್ ಕ್ರಿಸ್​​ ಗೇಲ್, ಆರಂಭದಿಂದಲೇ ಎದುರಾಳಿ ಮೇಲೆ ಆಕ್ರಮಣಕಾರಿ ಆಟ ಪ್ರದರ್ಶಿಸುವ ಕ್ರಿಸ್​ ಗೇಲ್​ ಕ್ರೀಸ್​​ನಲ್ಲಿನಲ್ಲಿ ಇದ್ದಷ್ಟು ಎದುರಾಳಿ ತಂಡಕ್ಕೆ ಅಪಾಯ ಗ್ಯಾರಂಟಿ. ಹೀಗಾಗಿ ಕ್ರಿಸ್​ ಗೇಲ್​ನ ಆರ್ಭಟಕ್ಕೆ ಬ್ರೇಕ್​ ಹಾಕೋಕೆ ಟೀಮ್ ಇಂಡಿಯಾದ ಯಾರ್ಕರ್​ ಕಿಂಗ್​​ ಬೂಮ್ರಾ ಸಜ್ಜಾಗಿದ್ದಾರೆ. ಈ ಮೂಲಕ ವಿಂಡೀಸ್​ ತಂಡಕ್ಕೆ ಆರಂಭದಲ್ಲೇ ಶಾಕ್ ನೀಡೋಕೆ ಸಜ್ಜಾಗಿದ್ದಾರೆ..

ಶಿಮ್ರಾನ್ ಹೇಟ್ಮಾರ್ Vs​ ಕುಲ್ಚಾ ಗ್ಯಾಂಗ್

ವಿಂಡೀಸ್​ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ ಶಕ್ತಿಯೇ  ಶಿಮ್ರಾನ್ ಹೇಟ್ಮಾರ್, ವಿಂಡೀಸ್​ ಪಾಳೆಯದ ಮತ್ತೊಬ್ಬ ಡೇಜಂರಸ್​​ ಬ್ಯಾಟ್ಸ್​ಮನ್​​ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ.. ಈ ಆಟಗಾರನಿಗೆ ಬಂದಷ್ಟೇ ವೇಗವಾಗಿ ಪೆವಿಲಿಯನ್​ಗೆ ಕಳುಹಿಸದಿದ್ರೆ, ಟೀಮ್ ಇಂಡಿಯಾಕ್ಕೆ ಕಂಟಕವಾಗಬಲ್ಲರು. ನಿರಾಯಾಸವಾಗಿ ರನ್ ಕಲೆಹಾಕುವ ಶಿಮ್ರಾನ್​ಗೆ ಟೀಮ್ ಇಂಡಿಯಾದ ಕುಲ್ಚಾ ಗ್ಯಾಂಗ್​ ಯೋಜನೆ  ರೂಪಿಸಿದೆ. ಮಿಡಲ್​  ಓವರ್​ನಲ್ಲಿ ಅಟ್ಯಾಕ್​ಗಿಳಿಯುವ ಕುಲ್ದೀಪ್ ಯಾದವ್, ಚಾಹಲ್ ಎದುರಾಳಿ  ತಂಡದ  ಸ್ಕೋರ್​ಗೆ  ಕಡಿವಾಣ ಹಾಕಿ ಹೆಡೆಮುರಿ ಕಟ್ತಾರೆ. ಇನ್ನೂ ಈ ಜೋಡಿ ಮ್ಯಾಜಿಕ್ ಮಾಡಿದ್ರೆ.. ವಿಂಡೀಸ್​ನ ಮಧ್ಯಮ ಕ್ರಮಾಂಕ ಪಲ್ಟಿಹೊಡೆಯೋದ್ರಲ್ಲಿ ಅನುಮಾನವೇ ಇಲ್ಲ.. ಆದ್ರೆ, ಕುಲ್ಚಾ ಜೋಡಿಯ​​​ ಮೋಡಿ ಎಷ್ಟರ ಮಟ್ಟಿಗೆ ವರ್ಕೌಟ್​ ಆಗುತ್ತೆ ಅನ್ನೋದನ್ನ ಜಸ್ಟ್​ ವೇಯ್ಟ್​ ಅಂಡ್​ ಸಿ…ಒಟ್ಟಾರೆ  ಇಂದು  ನಡೆಯುವ  ಇಂಡೋ ವಿಂಡೀಸ್ ವಾರ್​ನಲ್ಲಿ   ಯಾರು   ಯಾರ ಮೇಲೆ  ಸವಾರಿ  ಮಾಡ್ತಾರೆ ಅನ್ನೋದನ್ನ  ಕಾದು ನೋಡಬೇಕಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ