ಪಟ್ನಾ : ಬಿಹಾರದ ಮುಜಫರಪುರ ಜಿಲ್ಲೆಯಲ್ಲಿ ಇಂದು ಶನಿವಾರ ತೀವ್ರ ಮೆದುಳು ಜ್ವರ ರೋಗಕ್ಕೆ ಮತ್ತೆ ಆರು ಮಕ್ಕಳು ಬಲಿಯಾಗಿದ್ದಾರೆ.
ಇದರೊಂದಿಗೆ ಬಿಹಾರದಲ್ಲಿ ಈ ತನಕ ತೀವ್ರ ಮೆದುಳು ಜ್ವರ ರೋಗಕ್ಕೆ ಬಲಿಯಾದವವರ ಸಂಖ್ಯೆ 83ಕ್ಕೇರಿದೆ.
ಮುಜಫುರಪುರ ಜಿಲ್ಲಾಡಳಿತೆ ಪ್ರಕಟನೆಯೊಂದನ್ನು ಹೊರಡಿಸಿ ಸರಕಾರಿ ಒಡೆತದ ಎಸ್ಕೆಎಂಸಿಎಚ್ ಆಸ್ಪತ್ರೆಯಲ್ಲಿ ಆರು ಮಕ್ಕಳು ಮತ್ತು ಕೇಜ್ರಿವಾಲ್ ಆಸ್ಪತ್ರೆಯಲ್ಲಿ ನಿನ್ನೆ ಶುಕ್ರವಾರ ಮೂವರು ಮಕ್ಕಳು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.
ಬಿಹಾರದಲ್ಲಿ ಮುಜಫರಪುರ ಜಿಲ್ಲೆಯು ಮೆದುಳು ಜ್ವರ ಕಾಯಿಲೆಯಿಂದ ತೀವ್ರವಾಗಿ ತತ್ತರಿಸಿರುವ ಜಿಲ್ಲೆಯಾಗಿದೆ.
ಇದೇ ವೇಳೆ ವೈಶಾಲಿಯಲ್ಲಿ ಮೆದುಳು ಜ್ವರದಿಂದ 10 ಮಕ್ಕಳು ಬಾಧಿತರಾಗಿರುವ ಹೊಸ ಪ್ರಕರಣಗಳು ವರದಿಯಾಗಿವೆ.
ರಾಜ್ಯ ಆರೋಗ್ಯ ಅಧಿಕಾರಿಗಳ ಪ್ರಕಾರ ಸಾವುಗಳು ಸಂಭವಿಸುತ್ತಿರುವುದು hypoglycemia ದಿಂದ . ರಕ್ತದಲ್ಲಿ ಸಕ್ಕರೆ ಅಂಶ ಅತ್ಯಂತ ಕಡಿಮೆ ಪ್ರಮಾಣಕ್ಕೆ ಇಳಿಯುವುದು ಮತ್ತು ಇಲೆಕ್ಟ್ರೋಲೈಟ್ ಅಸಮತೋಲನ ಉಂಟಾಗುವ ಸ್ಥಿತಿಯೇ ಇದರ ಲಕ್ಷಣವಾಗಿದೆ.