ಬೆಂಗಳೂರು: ಮೊದಲ ಚಂದ್ರಯಾನವನ್ನು ಯಶಸ್ವಿಯಾಗಿ ನಿರ್ವಹಿಸಿದ ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೋ) ಈಗ ಚಂದ್ರಯಾನ 2 ಉಡಾವಣೆಗೆ ಸಜ್ಜಾಗಿದೆ.
ಚಂದ್ರನ ಅಂಗಳಕ್ಕೆ ಎರಡನೇ ಬಾರಿ ಉಪಗ್ರಹ ಉಡಾವಣೆಗೆ ಸಜ್ಜಾಗಿರುವ ಇಸ್ರೋ ಇದೇ ಜುಲೈ 9 ರಿಂದ 16ರ ಒಳಗೆ ಚಂದ್ರಯಾನ 2 ಉಡಾವಣೆ ಮಾಡಲು ಸಿದ್ದವಾಗಿದೆ. ಸೆಪ್ಟೆಂಬರ್ 6ರಂದು ಯಶಸ್ವಿಯಾಗಿ ತನ್ನ ಕಕ್ಷೆಗೆ ಸೇರಬಹುದು ಎಂಬ ನಿರೀಕ್ಷೆ ಇದೆ.
ಚಂದ್ರಯಾನ 2 ರಾಕೆಟ್ ಉಡಾವಣೆಗೂ ಮೊದಲು ಉಪಗ್ರಹದ ಮಾದರಿಯ ಬೆಂಗಳೂರಿನಲ್ಲಿ ಇಸ್ರೋದಲ್ಲಿ ಮೊದಲ ಬಾರಿಗೆ ಪ್ರದರ್ಶಿಸಿತು. ಆರ್ಬಿಟರಿ, ಲ್ಯಾಂಡೆರ್ (ವಿಕ್ತಮ್) ಮತ್ತು ರೋವರ್ (ಪ್ರಗ್ಯಾನ್) ಎಂಬ ಮೂರು ಮಾದರಿಯನ್ನು ಈ ಉಪಗ್ರಹ ಹೊಂದಿದೆ. ರೋವರ್ ಲ್ಯಾಂಡರ್ ಒಳಗಿನ ಮನೆಯಾಗಿದೆ ಎಂದು ಇಸ್ರೋ ತಿಳಿಸಿದೆ. ಆರ್ಬಿಟರಿಯಲ್ಲಿ 8 ಉಪಕರಣಗಳಿವೆ. ಇನ್ನು ಈ ಆರ್ಬಿಟರಿಯಲ್ಲಿ ವಿದೇಶಿ ಪ್ಲೆಲೋಡ್ ಎಂದರೆ ಅದು ನಾಸಾದ ಇನ್ಫ್ರಾ ರೆಡ್ ಸ್ಪೆಕ್ಟಂ. ವಿಕ್ರಮ್ನಲ್ಲಿ ಮೂರು ಉಪಕರಣ ಇರಲಿದೆ.
“ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಲಾಗುತ್ತದೆ. ಯಾವುದೇ ದೇಶ ಈವರೆಗೂ ಚಂದ್ರದ ದಕ್ಷಿಣ ಧ್ರುವದತ್ತ ಗಮನ ಹರಿಸಿಲ್ಲ. ಅಲ್ಲಿ ನಾವು ಲ್ಯಾಂಡರ್ ಮತ್ತು ರೋವರ್ ಇಳಿಸಿ ಇತಿಹಾಸ ಸೃಷ್ಟಿಸುವುದು ಖಚಿತ. ಈ ಭಾಗದಲ್ಲಿ ನೀರು ಇರುವ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ,” ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಈ ಹಿಂದೆ ಮಾಹಿತಿ ನೀಡಿದ್ದರು.
ಚಂದ್ರಯಾನ-2 ಯೋಜನೆಗಾಗಿ ಇಸ್ರೋ ಜಿಎಸ್ಎಲ್ವಿ ಎಂಕೆ 3 ಎಂಬ ಹೊಸ ಮಾದರಿಯ ರಾಕೆಟ್ ಒಂದನ್ನು ನಿರ್ಮಿಸಿದೆ. ಇದರ ಮೂಲಕ ಉಪಗ್ರಹವನ್ನು ಭೂ ಕಕ್ಷೆಯಿಂದ ಚಂದ್ರನ ಮೇಲ್ಮೈಗೆ ಉಡಾಯಿಸಲಾಗುವುದು.
ಸದ್ಯ ಈ ಉಪಗ್ರಹದ ಅಂತಿಮ ಹಂತದ ಪರೀಕ್ಷೆಯನ್ನು ಇಸ್ರೋ ವಿಜ್ಞಾನಿಗಳು ನಡೆಸಿದ್ದಾರೆ. ಜುಲೈನಲ್ಲಿ ಶ್ರೀಹರಿಕೋಟದಿಂದ ಇದನ್ನು ಉಡಾವಣೆ ಮಾಡಲಾಗುವುದು.