ಸ್ಟಾರ್ಕ್ ಮಿಂಚು, ಕೌಲ್ಟರ್ ಕೌಂಟರ್ ಅಟ್ಯಾಕ್ ಆಸಿಸ್‍ಗೆ ರೋಚಕ ಗೆಲುವು

ನಾಟಿಂಗ್ಯಾಮ್‍ನಲ್ಲಿ ವಿಶ್ವಕಪ್ ಪಂದ್ಯದಲ್ಲಿ ಹಾಲಿಚಾಂಪಿಯನ್ ಆಸ್ಟ್ರೇಲಿಯಾ ವೆಸ್ಟ್‍ಇಂಡೀಸ್ ವಿರುದ್ಧ ರೋಚಕ 15 ರನ್‍ಗಳ ಗೆಲುವು ದಾಖಲಿಸಿದೆ.

ಟಾಸ್ ಗೆದ್ದ ವೆಸ್ಟ್‍ಇಂಡೀಸ್ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ವಿಂಡೀಸ್ ವೇಗಿಗಳ ದಾಳಿಗೆ ತತ್ತರಿಸಿಹೋಯ್ತು. ಏಕಾಂಗಿ ಹೋರಾಟ ಮಾಡಿದ ಸ್ಟೀವ್ ಸ್ಮಿತ್ 73, ಅಲೆಕ್ಸ್ ಕ್ಯಾರಿ 45 ರನ್ ಕಲೆ ಹಾಕಿದ್ರು. 147 ರನ್‍ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕ್ಷದಲ್ಲಿದ್ದ ಆಸಿಸ್‍ಗೆ 8ನೇ ಕ್ರಮಾಂಕದಲ್ಲಿ ಬಂದ ಕೌಲ್ಟರ್ ನೈಲ್ ನೆರವಾದರು. ವಿಂಡೀಸ್ ದಾಳಿಯನ್ನ ಸರಿಯಾಗಿ ಕೌಂಟರ್ ಮಾಡಿದ ನೈಲ್ 60 ಎಸೆತದಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್‍ಗಳನ್ನ ಸಿಡಿಸಿ 92 ರನ್ ಗಳಿಸಿ ಪಂದ್ಯದ ಗತಿಯನ್ನೆ ಬದಲಿಸಿದ್ರು.

ಕೊನೆಯಲ್ಲಿ ಆಸಿಸ್ 49 ಓವರ್‍ಗಳಲ್ಲಿ 288 ರನ್‍ಗಳಿಗೆ ಸರ್ವ ಪತನ ಕಂಡಿತು. ಆಲ್‍ರೌಂಡರ್ ಬ್ರಾಥ್‍ವೈಟ್ 3, ರಸ್ಸೆಲ್,ಕಟ್ರಲ್ ಮತ್ತು ಓಶನೆ ಥಾಮಸ್ ತಲಾ 2 ವಿಕೆಟ್ ನಾಯಕ ಜಾಸನ್ ಹೋಲ್ಡರ್ 1 ವಿಕೆಟ್ ಪಡೆದರು.

289 ರನ್‍ಗಳ ಸವಾಲಿನ ಮೊತ್ತ ಬೆನ್ನತ್ತಿದ ವಿಂಡೀಸ್ ವೇಗಿಗಳಾದ ಸ್ಟಾರ್ಕ್ ಮತ್ತು ಕಮಿನ್ಸ್ ದಾಳಿಗೆ ಧೂಳಿಪಟವಾಯ್ತು. ಎವಿನ್ ಲಿವೀಸ್ 1, ಕ್ರಿಸ್ ಗೇಲ್ 21, ನಿಕೊಲೊಸ್ ಪೂರ್‍ನ್ 40, ಶಿಮ್ರಾನ್ ಹೇಟ್ಮರ್ 21, ಆಂಡ್ರಿವ್ ರಸ್ಸೆಲ್ 15, ಬ್ರಾಥ್‍ವೈಟ್ 16 ಮತ್ತು ಆಶ್ಲೆ ನಸ್ 19 ರನ್ ಗಳಿಸಿದ್ರು.

ಆಸಿಸ್ ಪರ ಮಿಶೆಲ್ ಸ್ಟಾರ್ಕ್ 5 ವಿಕೆಟ್ ಪಡೆದು ಮಿಂಚಿದ್ರು. ಕೊನೆಗೆ ಆಸ್ಟ್ರೇಲಿಯಾ ತಂಡ 15 ರನ್‍ಗಳ ರೋಚಕ ಗೆಲುವು ಸಾಧಿಸಿ ಟೂರ್ನಿಯಲ್ಲಿ ಸತತ ಎರqನೆ ಗೆಲುವು ದಾಖಲಿಸಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ