ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ-ಪ್ರಧಾನಿ ಮೋದಿ

ನವದೆಹಲಿ, ಜೂ.5-ಪ್ರಕೃತಿ ಮತ್ತು ಪರಿಸರದ ಜತೆ ಸೌಹಾರ್ದವಾಗಿ ಬದುಕುವುದರಿಂದ ಭವಿಷ್ಯಕ್ಕೆ ಉತ್ತಮ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಇದು ವಿಶ್ವ ಪರಿಸರ ದಿನಾಚರಣೆ. ಈ ಸಂದರ್ಭದಲ್ಲಿ ಸಂದೇಶ ನೀಡಿರುವ ಅವರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವೂ ಆಗಿದೆ ಎಂದು ಸಲಹೆ ಮಾಡಿದರು.

ನಮ್ಮ ಭೂಮಂಡಲ ಮತ್ತು ಪರಿಸರವು ಅತ್ಯಂತ ಮಹತ್ವವಾದುದು. ಇದನ್ನು ನಾವೆಲ್ಲರೂ ಸಂರಕ್ಷಿಸಬೇಕು. ಇಂದು ವಿಶ್ವ ಪರಿಸರ ದಿನಾಚರಣೆ. ಸ್ವಚ್ಛ ಭೂಮಂಡಲಕ್ಕಾಗಿ ನಮ್ಮೆಲ್ಲರ ಬದ್ಧತೆಯನ್ನು ನಾವು ಪುನರುಚ್ಚರಿಸಬೇಕು. ಪರಿಸರ ರಕ್ಷಣೆಗೆ ಎಲ್ಲರೂ ದೃಢಸಂಕಲ್ಪ ಮಾಡಿ ಅದನ್ನು ಉಳಿಸಬೇಕು ಎಂದು ಮೋದಿ ಟ್ವಿಟ್ ಮಾಡಿದ್ದಾರೆ.

ಈ ಸಂಬಂಧ ಕಿರು ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಪ್ರಧಾನಿ, ನಾವು ನಿಸರ್ಗದಲ್ಲಿ ಉತ್ತಮವಾಗಿ ಸಹಬಾಳ್ವೆ ನಡೆಸಿದರೆ ಅದು ನಮ್ಮ ಉತ್ತಮ ಭವಿಷ್ಯಕ್ಕೆ ಸಹಕಾರಿ ಎಂದು ಪ್ರಧಾನಿ ಕರೆ ನೀಡಿದ್ದಾರೆ.

ಕೇವಲ ಸಸಿಗಳನ್ನು ನೆಟ್ಟರಷ್ಟೇ ಸಾಲದು, ಅದು ಬೆಳೆದು ಹೆಮ್ಮರವಾಗುವ ತನಕ ಜನರು ಅದನ್ನು ಆರೈಕೆ ಮಾಡಬೇಕೆಂದು ಮೋದಿ ಸಲಹೆ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ