12ನೇ ವಿಶ್ವಕಪ್ ಮಹಾಸಮರದಲ್ಲಿ ಇಂದು ನಾಲ್ಕು ತಂಡಗಳು ಮುಖಾಮುಖಿಯಾಗುತ್ತಿವೆ. ಕಾರ್ಡಿಯಫ್ನ ಸೊಫಿಯಾ ಗಾರ್ಡನ್ಸ್ ಅಂಗಳದಲ್ಲಿ ಬ್ಲ್ಯಾಕ್ ಹಾರ್ಸ್ ಖ್ಯಾತಿಯ ನ್ಯೂಜಿಲೆಂಡ್-ಶ್ರೀಲಂಕಾ ತಂಡಗಳು ಕಾದಾಟ ನಡೆಸಲಿವೆ.
ವಿಶ್ವಕಪ್ ಶುಭಾರಂಭದ ಕನಸಿನಲ್ಲಿ ಕಿವೀಸ್
ವಿಶ್ವಕಪ್ ಮಹಾಸಂಗ್ರಾಮದಲ್ಲಿ ಇಲ್ಲಿಯವರೆಗೆ ಪ್ರಶಸ್ತಿ ಜಯಿಸಲು ಸಾಧ್ಯವಾಗದ ತಂಡದಲ್ಲಿ ನ್ಯೂಜಿಲೆಂಡ್ ಒಂದು.. 2015ರಲ್ಲಿ ಅಜೇಯವಾಗಿ ಫೈನಲ್ ತಲುಪಿದ್ರು, ವಿಶ್ವಕಪ್ ಗೆಲ್ಲಲು ವಿಫಲವಾಯಿತು. ಹೀಗಾಗಿಯೇ ಈ ಬಾರಿ ವಿಶ್ವಕಪ್ ಗೆಲ್ಲಬೇಕೆಂಬ ಮಹಾದಾಸೆಯೊಂದಿಗೆ ಕೇನ್ ವಿಲಿಯಮ್ಸನ್ ಪಡೆ ಕಣಕ್ಕಿಳಿಯುತ್ತಿದೆ.. ಇನ್ನುಳಿದಂತೆ ಮಾರ್ಟಿನ್ ಗಪ್ಟಿಲ್, ಟಾಮ್ ಬ್ಲಂಡೆಲ್, ರಾಸ್ ಟೇಲರ್, ಟಾಮ್ ಲಾಥಂ, ಕಾಲಿನ್ ಮನ್ರೋ ನ್ಯೂಜಿಲೆಂಡ್ ತಂಡದ ಪ್ರಮುಖ ಬ್ಯಾಟ್ಸ್ಮನ್ಸ್ಗಳು ಇದ್ದಾರೆ.
ನ್ಯೂಜಿಲೆಂಡ್ ತಂಡದ ಬೌಲಿಂಗ್ ಡಿಪಾರ್ಟ್ಮೆಂಟ್ ಅನುಭವಿ ಬೌಲರ್ಸ್ಗಳಿಂದ ಕೂಡಿದೆ. ಟ್ರೆಂಟ್ ಬೌಲ್ಟ್, ಲೂಕಿ ಫರ್ಗೂಸನ್, ಟೀಮ್ ಸೌಥಿ ಸ್ಪೀಡ್ ಸ್ಟಾರ್ಗಳಾಗಿದ್ದಾರೆ. ಇವ್ರ ಜೊತೆಗೆ ಸ್ಪಿನ್ನರ್ಸ್ಗಳಾಗಿ ಇಶ್ ಸೋಧಿ, ಮಿಚೆಲ್ ಸಾಂಟ್ನರ್ ತುದಿಗಾಲಿನಲ್ಲಿ ನಿಂತಿದ್ದಾರೆ.
ಬ್ಲಾಕ್ ಹಾರ್ಸ್ ವಿರುದ್ಧ ಘರ್ಜಿಸುತ್ತಾರಾ ಸಿಂಹಳೀಯರು..?
ಶ್ರೀಲಂಕಾ ದ್ವೀಪ ರಾಷ್ಟ್ರವಾದರೂ ವಿಶ್ವಕ್ರಿಕೆಟ್ಗೆ ಅವರ ಕೊಡುಗೆ ಅಪಾರ.. ಇತ್ತೀಚಿನ ದಿನಗಳಲ್ಲಿ ಕೂಡ ಶ್ರೀಲಂಕಾ ಹೇಳಿಕೊಳ್ಳುವಂತಾ ಪ್ರದರ್ಶನವನ್ನೇನು ನೀಡಿಲ್ಲ. ಆದ್ರೆ, ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ. . ನಾಯಕ ದಿಮುತ ಕರುಣರತ್ನೆ ನೇತೃತ್ವದಲ್ಲಿ ವಿಶ್ವಕಪ್ ಹೋರಾಟಕ್ಕೆ ಸಂಹಳೀಯರು ಸಜ್ಜಾಗಿದ್ದಾರೆ. ಲಹಿರು ತಿರುಮನೆ, ಆಂಜೆಲೋ ಮ್ಯಾಥ್ಯೂಸ್, ತಿಸಾರ ಪೆರಾರಾ ಶ್ರೀಲಂಕಾದ ಪ್ರಮುಖ ಬ್ಯಾಟ್ಸ್ಮನ್ಸ್ ಆಗಿದ್ದಾರೆ. ಲಸಿತ್ ಮಲಿಂಗಾ, ಸುರಂಗ ಲಕ್ಮಲ್, ನುವಾನ್ ಪ್ರದೀಪ್ ತಂಡದ ಪ್ರಮುಖ ಬೌಲರ್ಗಳಾಗಿದ್ದು ಯಾವ ರೀತಿ ಪ್ರದರ್ಶನ ನೀಡ್ತಾರೆ ಕಾದು ನೋಡಬೇಕಿದೆ…