ಟೀಮ್ ಇಂಡಿಯಾ ಗೊಂದಲಕ್ಕೆ ಸಿಕ್ತು ಪರಿಹಾರ..!:ನಾಲ್ಕನೇ ಕ್ರಮಾಂಕಕ್ಕೆ ಕೆ.ಎಲ್.ರಾಹುಲ್ ಫಿಕ್ಸ್..!

ಕೊನೆಗೂ ಟೀಂ ಇಂಡಿಯಾ ನಿಟ್ಟುಸಿರು ಬಿಟ್ಟಿದೆ. ವಿಶ್ವಕಪ್ ಮಹಾ ಸಮರಕ್ಕೂ ಮುನ್ನ ಮೊನ್ನೆ ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಜಯ ಗಳಿಸುವ ಮೂಲಕ ನಿಟ್ಟಿಸಿರು ಬಿಟ್ಟಿತ್ತು. ಇದೆಲ್ಲದ್ಕಕಿಂತ ಮೂಕ್ಯವಾಗಿ ತಂಡಕ್ಕೆ ದೊಡ್ಡ ಸಮಸ್ಯೆಯಾಗಿದ್ದ ನಾಲ್ಕರ ಕಗ್ಗಂಟಿಗೆ ಒಂದು ಪರಿಹಾರ ಸಿಕ್ಕಿದೆ.

ಕಳೆದ 3 ವರ್ಷಗಳಿಂದ ಟೀಮ್ ಇಂಡಿಯಾವನ್ನ ನಾಲ್ಕನೆ ಸ್ಲಾಟ್ ಬಿಟ್ಟು ಕಾಡಿತ್ತು. ಕಳೆದ ಮೂರು ವರ್ಷಗಳಿಂದ ಈ ಸ್ಲಾಟ್ನಲ್ಲಿ ಬರೋಬ್ಬರಿ ಹನ್ನೊಂದು ಬ್ಯಾಟ್ಸ್ಮನ್ಗಳು ಆಡಿದ್ರು. ಆದರೆ ಈ ಯಾವ ಬ್ಯಾಟ್ಸ್ಮನ್ಗಳು ಗಟ್ಟಿಯಾಗಿ ನಿಲ್ಲಲ್ಲ. ಕಳೆದ ವರ್ಷ ಈ ಸ್ಲಾಟ್ನಲ್ಲಿ ಅಂಬಟಿ ರಾಯ್ಡು ಆದರೆ ವಿಶ್ವಕಪ್ ವೇಳೆ ಕಳೆಪೆ ಫಾರ್ಮ್ನಿಂದಾಗಿ ಲಂಡನ್ ಟಿಕೆಟ್ ಪಡೆಯುವ ಅವಕಾಶದಿಂದ ವಂಚಿತರಾದ್ರು.

ನಾಲ್ಕರ ಕಗ್ಗಂಟಿಗೆ ಉತ್ತರವಾಗಿ ಸಿಕ್ಕ ಕನ್ನಡಿಗ ರಾಹುಲ್
ಟೀಂ ಇಂಡಿಯಾವನ್ನ ಬಿಟ್ಟು ಬಿಡದೇ ಕಾಡಿದ ನಾಲ್ಕನೆ ಸ್ಲಾಟ್ಗೆ ಕೊನೆಗೂ ಪರಿಹಾರ ಸಿಕ್ಕಿದೆ. ಮೊನ್ನೆ ಬಾಂಗ್ಲಾ ದೇಶ ವಿರುದ್ಧ ಬೊಂಬಾಟ್ ಬ್ಯಾಟಿಂಗ್ ಮಾಡಿದ ಕನ್ನಡಿಗ ಕೆ.ಎಲ್. ರಾಹುಲ್ ನಾಲ್ಕನೆ ಸ್ಲಾಟ್ಗೆ ನಾನೇ ಆಡೋದು ಅಂತ ಬ್ಯಾಟ್ ಮೂಲಕ ಹೇಳಿದ್ದಾರೆ.

ಮೊನ್ನೆ ಬಾಂಗ್ಲಾ ವಿರುದ್ಧ ರಾಹುಲ್ ಜಬರ್ದಸ್ತ್ ಬ್ಯಾಟಿಂಗ್ ಮಾಡಿದ್ರು. ನ್ಯೂಜಿಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಫ್ಲಾಪ್ ಆಗಿದ್ದ ರಾಹುಲ್ ತಂಡ್ ಆತಂಕವನ್ನ ಹೆಚ್ಚಿಸಿದ್ದರು. ಆದರೆ ಬಾಂಗ್ಲಾ ವಿರುದ್ಧ ಅಡಿCrucial ಟೈಮ್ನಲ್ಲಿ ಬಂದು ತಂಡದ ಆಪಾದ್ಬಾಂಧರಾದ್ರು.

ಧೋನಿ ಜೊತೆಗೂಡಿದ ರಾಹುಲ್ ಬಾಂಗ್ಲಾ ಬೌಲರ್ಸ್ಗಳನ್ನ ಮನಬಂದಂತೆ ಚೆಂಡಾಡಿ ಬೌಂಡರಿಗಳ ಸುರಿಮಳೆಗೈದ್ರು. ರಾಹುಲ್ ಬ್ಯಾಟಿಂಗ್ ನೋಡಿದವರೆಲ್ಲ ರಾಹುಲ್ ನಾಲ್ಕನೆ ಸ್ಲಾಟ್ಗೆ ಫಿಕ್ಸ್ ಅಂತ ಮಾಡನಾಡಿಕೊಂಡಿದ್ರು.

99 ಎಸೆತಗಳನ್ನು ಎದುರಿಸಿದ ಕೆ.ಎಲ್.ರಾಹುಲ್ 108 ರನ್ ಗಳಿಸುವ ಮೂಲಕ ಗಮನ ಸೆಳೆದರು.. ಇದರಲ್ಲಿ 12 ಬೌಂಡರಿ 4 ಸಿಕ್ಸರ್ ಸಿಡಿಸಿದ್ರು.

ವಿಶ್ವಕಪ್ನಲ್ಲಿ ಕೆ.ಎಲ್.ರಾಹುಲ್ಗೆ ರಿಯಲ್ ಟೆಸ್ಟ್..!
ಬಾಂಗ್ಲಾದೇಶದ ವಿರುದ್ದದ ಅಬ್ಬರಿಸುವ ಮೂಲಕ ಕೆ.ಎಲ್. ರಾಹುಲ್ 4ನೇ ಕ್ರಮಾಂಕದ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ. ಆದ್ರೆ, ಕನ್ನಡಿಗ ಕೆ.ಎಲ್.ರಾಹುಲ್ಗೆ ವಿಶ್ವಕಪ್ನಲ್ಲಿ ರಿಯಲ್ ಟೆಸ್ಟ್ ಆರಂಭವಾಗಲಿದೆ. ಜೂನ್ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಸೆಣಸಲಿದ್ದು ಕೆ.ಎಲ್.ರಾಹುಲ್ಗೆ ಅಗ್ನಿಪರೀಕ್ಷೆಯಾಗಿದೆ. ಆದ್ರೆ, ಉತ್ತಮ ಲಯಕಂಡುಕೊಂಡಿರುವ ಕನ್ನಡಿಗ ಕೆ.ಎಲ್.ರಾಹುಲ್ ಆಫ್ರಿಕಾ ವಿರುದ್ಧದವೂ ಕಮಾಲ್ ಮಾಡೋ ವಿಶ್ವಾಸದಲ್ಲಿದ್ದಾರೆ..

ಒಟ್ಟಾರೆ ರಾಹುಲ್ ವಿಶ್ವಕಪ್ ಮುನ್ನ ಭರವಸೆ ಮೂಡಿಸಿದ್ದಾರೆ. ಈ ಭರವಸೆಯನ್ನ ಟೂರ್ನಿ ಮುಗಿಯುವವರೆಗೆ ಕಾಪಾಡಿಕೊಳ್ಳಲಿ ಅನ್ನೋದೇ ಅಭಿಮಾನಿಗಳ ಆಶಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ