ವಿಶ್ವಕಪ್ನಲ್ಲಿ ಆಲ್ರೌಂಡರ್ಗಳ ದರ್ಬಾರ್ :ಮಹಾ ಸಂಗ್ರಾಮದಲ್ಲಿ ಅಲ್ಲ್ರೌಂಡರ್ಗಳೇ ಮ್ಯಾಚ್ ವಿನ್ನರ್ಸ್

ಇಡೀ ಕ್ರಿಕೆಟ್ ಜಗತ್ತೆ ಕಾತರದಿಂದ ಕಾಯುತ್ತಿದ್ದ ವಿಶ್ವಕಪ್ ಟೂರ್ನಿಗೆ ಅದ್ದೂರಿ ಚಾಲನೆ ಸಿಕ್ಕಿದೆ. ಆಂಗ್ಲರ ನಾಡಲ್ಲಿ ನಡೆಯುತ್ತಿರುವ ಈ ಬಾರಿಯ ವಿಶ್ವಕಪ್ ಆಲ್ರೌಂಡ ರ್ಗಳ ವಿಶ್ವಕಪ್ ಅಂದ್ರೆ ತಪ್ಪಾಗಲ್ಲ.

ಟೂರ್ನಿಗೂ ಮುನ್ನ ಈ ಬಾರಿಯ ವಿಶ್ವಕಪ್ ಆಲ್ರೌಂಡರ್ಗಳ ಕಪ್ ಎಂದು ವಿಶ್ಲೇಶಿಸಲಾಗಿತ್ತು. ಇದೀಗ ಈ ಮಾತು ನಿಜ ಗಿದೆ. ವಿಶ್ವಕಪ್ನಲ್ಲಿ ಈಗಾಗಲೇ ಎರಡು ಪಂದ್ಯಗಳು ಮುಗಿದು ಹೋಗಿವೆ. ಈ ಎರಡೂ ಪಂದ್ಯಗಳಲ್ಲೂ ಆಲ್ರೌಂಡರ್ಗಳು ಮಿಂಚಿದ್ದಾರೆ. ಈ ಕಾರಣಕ್ಕಾಗಿ ಕ್ರಿಕೆಟ್ ಅಭಿಮಾನಿಗಳ ಚಿತ್ತ ಈಗ ಆಲ್ರೌಂಡಗಳ ಮೇಲೆ ನೆಟ್ಟಿದೆ.

ಪಾಕ್ ವಿರುದ್ಧ ಮಿಂಚಿದ ರಸ್ಸೆಲ್ , ಜೆಸನ್ ಹೋಲ್ಡರ್
ನಿನ್ನೆ ಟ್ರೆಂಟ್ ಬ್ರಿಡ್ಜ್ ಅಂಗಳದಲ್ಲಿ ನಡೆದ ಪಾಕ್ ವಿರುದ್ಧದ ಪಂದ್ಯದಲ್ಲಿ ರಸ್ಸೆಲ್ ಮತ್ತು ಜೆಸನ್ ಹೋಲ್ಡರ್ ಸೂಪರ್ ಸ್ಪೆಲ್ ಮಾಡಿ ಮಿಂಚಿದ್ದಾರೆ. ಬಿಗ್ ಟಾರ್ಗೆಟ್ ಲೆಕ್ಕಾಚಾರ ಇಟ್ಟುಕೊಂಡು ಬಂದಿದ್ದ ಪಾಕಿಸ್ತಾನ ಹೋಲ್ಡರ್ , ರಸ್ಸೆಲ್ ದಾಳಿಗೆ ತತ್ತಿರಿಸಿ ಹೋಯ್ತು. ವೆಸ್ಟ್ ಇಂಡೀಸ್ ಕ್ಯಾಪ್ಟನ್ ಜೆಸನ್ ಹೋಲ್ಡರ್ ಜಬರ್ದಸ್ತ್ ಬೌಲಿಂಗ್ ಮಾಡಿ ಮೂರು ವಿಕೆಟ್ ಪಡೆದ್ರು. ಇನ್ನು ತಂಡದ ಸ್ಟಾರ್ ಆಲ್ರೌಂಡರ್ ಆ್ಯಂಡ್ರೆ ರಸ್ಸೆಲ್ ಕೇವಲ ಓವರ್ಗಳಿಂದ ನಾಲ್ಕು ರನ್ ಕೊಟ್ಟು ಎರಡು ವಿಕೆಟ್ ಪಡೆದಿದ್ದಾರೆ.

ಉದ್ಘಾಟನಾ ಪಂದ್ಯದಲ್ಲಿ ಮಿಂಚಿದ ಆಲ್ರೌಂಡರ್ ಬೆನ್ ಸ್ಟೋಕ್ಸ್
ಮೊನ್ನೆ ಲಂಡನ್ನ ಒವೆಲ್ ಅಂಗಳದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 104 ರನ್ಗಳ ಭರ್ಜರಿ ಗೆಲುವು ದಾಖಲಿಸಿ ಶುಭಾರಂಭ ಮಾಡಿತು. ಇಯಾನ್ ಮಾರ್ಗನ್ ಭರ್ಜರಿ ಗೆಲುವು ದಾಖಲಿಸುವುದಕ್ಕೆ ಕಾರಣವಾಗಿದ್ದು ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ .

ಫಾಫ್ ಡುಪ್ಲೆಸಿಸ್ ಪಡೆಗೆ ಸ್ಟ್ರೋಕ್ ಕೊಟ್ಟ ಸ್ಟೋಕ್ಸ್
ಇಂಗ್ಲೆಂಡ್ ತಂಡ 111 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ 5ನೇ ಕ್ರಮಾಂಕದಲ್ಲಿ ಬಂದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಕ್ಯಾಪ್ಟನ್ ಇಯಾನ್ ಮಾರ್ಗನ್ ಜೊತೆಗೂಡಿ ಬೊಂಬಾಟ್ ಬ್ಯಾಟಿಂಗ್ ಮಾಡಿ ಆಫ್ರಿಕಾ ಬೌಲರ್ಸ್ಗಳ ಬೆವರಿಳಿಸಿದ್ರು.

ಫಾಫ್ ಡುಪ್ಲೆಸಿಸ್ ಪಡೆಯ ಲೆಕ್ಕಾಚಾರಗಳನ್ನೆಲ್ಲ ತಲೆಕೆಳಗೆ ಮಾಡಿದ ಸ್ಟೋಕ್ಸ್ 45 ಎಸೆತದಲ್ಲಿ ಅರ್ಧ ಶತಕ ಬಾರಿಸಿದ್ರು. ಒಟ್ಟು 79 ಎಸೆತ ಎದುರಿಸಿದ ಈ ಇಂಗ್ಲಿಷ್ ಆಲ್ರೌಂಡರ್ 9 ಬೌಂಡರಿಗಳನ್ನ ಬಾರಿಸಿ 89 ರನ್ ಕಲೆ ಹಾಕಿದ್ರು.

ಬೌಲಿಂಗ್ನಲ್ಲಿ ಕಮಾಲ್ ಮಾಡಿದ ಇಂಗ್ಲೀಷ್ ಆಲ್ರೌಂಡರ್
ಬರೀ ಬ್ಯಾಟಿಂಗ್ ಮಾತ್ರ ಅಲ್ಲ ಬೌಲಿಂಗ್ನಲ್ಲೂ ಸ್ಟೋಕ್ಸ್ ಕಮಾಲ್ ಮಾಡಿದ್ರು. ಕೇವಲ 2.5 ಓವರ್ಗಳನ್ನ ಬೌಲಿಂಗ್ ಮಾಡಿದ ಈ ಆಂಗ್ಲ ಆಲ್ರೌಂಡರ್ 2 ವಿಕೆಟ್ ಪಡೆದು ಮಿಂಚಿದ್ರು. ಇದರ ಜೊತೆಗೆ ಆಫ್ರಿಕಾ ಬ್ಯಾಟ್ಸ್ಮನ್ ಫೆಹ್ಲುಕುವಾಯೋ ನೀಡಿದ ಕ್ಯಾಚ್ನ್ನ ಸ್ಟೋಕ್ಸ್ ಮಿಡ್ವಿಕೆಟ್ನಲ್ಲಿ ಒಂದೇ ಕೈನಲ್ಲಿ ಕ್ಯಾಚ್ ಹಿಡಿದು ಮಿಂಚಿದ್ರು. ಆಲ್ರೌಂಡ್ ಪರ್ಫಾಮನ್ಸ್ ಕೊಟ್ಟ ಸ್ಟೋಕ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದ್ರು.

ಒಟ್ಟಿನಲ್ಲಿ ಈ ಬಾರಿಯ ವಿಶ್ವಕಪ್ ಆಲ್ರೌಂಡರ್ಗಳ ವಿಶ್ವಕಪ್ ಅಂದ್ರೆ ತಪ್ಪಾಗಲ್ಲ. ಇನ್ನು ಯಾವ ತಂಡಗಳ ಆಲ್ರೌಂಡರ್ಗಳು ಮಿಂಚುತ್ತಾರೆ ಅನ್ನೊದನ್ನ ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ