ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೊ) ಹೊಸ ಮುಕುಟ ಸೇರ್ಪಡೆಯಾಗಿದೆ. ಬುಧವಾರ ಮುಂಜಾನೆ ಭೂ ಪರಿವೀಕ್ಷಣೆ ಉಪಗ್ರಹ ರಿಸ್ಯಾಟ್-2ಬಿಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಬುಧವಾರ ಬೆಳಗ್ಗೆ 5.30ಕ್ಕೆ ಉಪಗ್ರಹವನ್ನು ಶ್ರೀಹರಿಕೋಟಾದಿಂದ ಹಾರಿಸಲಾಗಿದೆ. 615 ಕೆಜಿ ತೂಕ ಇರುವ ಈ ಉಪಗ್ರಹ ರಕ್ಷಣೆಗೆ ಸಂಬಂಧಿಸಿದ್ದಾಗಿದೆ.
ಭಾರತೀಯ ಗಡಿ ಮೇಲೆ ಸೆಟಲೈಟ್ ಕಣ್ಗಾವಲು ಇಡಲಿದೆ. ಇದರಿಂದ ದೇಶದ ಭದ್ರತೆಗೆ ಪುಷ್ಟಿ ಸಿಕ್ಕಂತಾಗಿದೆ.
ಈ ಮೊದಲು ರಿಸ್ಯಾಟ್-1 ಹಾಗೂ ರಿಸ್ಯಾಟ್-2 ಉಪಗ್ರಹಗಳನ್ನು ಇಸ್ರೋ ಹಾರಿಬಿಟ್ಟಿತ್ತು. ಇವುಗಳಿಗಿಂತ ಈ ಉಪಗ್ರಹ ಹೆಚ್ಚು ಶಕ್ತಿಶಾಲಿಯಾಗಿದೆ. ರಿಸ್ಯಾಟ್-2ಬಿ ಹೆಚ್ಚು ನಿಖರವಾಗಿ ಫೋಟೋ ತೆಗೆಯುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ.
“ಪ್ರಮುಖ ಸೆಟಲೈಟ್ಗಳಲ್ಲಿ ಇದು ಕೂಡ ಒಂದು. ಭಾರತದ ಪಾಲಿಗೆ ಈ ಯೋಜನೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಕರಾರುವಕ್ಕಾಗಿ ಭೂ ವೀಕ್ಷಣೆ ಮಾಡುವ ಸಾಮರ್ಥ್ಯ ಇದಕ್ಕಿದೆ,” ಎಂದು ಈ ಮೊದಲು ಇಸ್ರೊದ ಮುಖ್ಯಸ್ಥ ಕೆ ಶಿವನ್ ಈ ಮೊದಲು ಹೇಳಿದ್ದರು.