ಮಂಡ್ಯ,ಮೇ 5- ಬೀದಿ ನಾಯಿಗಳ ಗುಂಪೊಂದು ದಾಳಿ ನಡೆಸಿದ್ದು ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ನಗರದ 5ನೇ ವಾರ್ಡ್, ಮುಸ್ಲಿಂ ಬ್ಲಾಕ್ನ ನಿವಾಸಿ ನಜಿಜಾನಾಜ್ (9) ನಿನ್ನೆ ಸಂಜೆ ನಡೆದು ಹೋಗುತ್ತಿದ್ದಾಗ ನಾಯಿಗಳ ಗುಂಪು ಬಾಲಕನ ಮೇಲೆ ದಾಳಿ ನಡೆಸಿವೆ.
ಇದೇ ಮಾರ್ಗದಲ್ಲಿ ತೆರಳುತ್ತಿದ್ದ ನಹೀಮ್ ಇದನ್ನು ಕಂಡು ಆತನನ್ನು ಬಿಡಿಸಲು ಮುಂದಾಗಿದ್ದಾನೆ. ಈ ವೇಳೆ ನಾಯಿಗಳ ಗುಂಪು ಇಬ್ಬರ ಮೇಲೂ ದಾಳಿ ನಡೆಸಿದೆ.
ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದರ ಬಗ್ಗೆ ಯಾರು ಕೂಡ ಗಮನಹರಿಸದೆ ಇರುವುದರಿಂದ ಜನರು ಬೇಸರಗೊಂಡಿದ್ದಾರೆ. ತಕ್ಷಣ ಇದಕ್ಕೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.