12ನೇ ಸೀಸನ್ನ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡ ಟೂರ್ನಿಯಿಂದ ಅಧಿಕೃತವಾಗಿ ಹೊರ ಬಿದ್ದಿದೆ. ಈ ಸಲ ಕಪ್ ನಮ್ದೆ ಎಂದು ಹೇಳಿಕೊಂಡು ಬಂದಿದ್ದ ಆರ್ಸಿಬಿಯ ಕನಸು ನುಚ್ಚು ನೂರಾಗಿದೆ.
ಟೂರ್ನಿಯ ಆರಂಭದಲ್ಲಿ ಸತತ ಆರು ಪಂದ್ಯಗಳ ಸೋಲಿನ ಹಣೆಪಟ್ಟಿ ಹೊತ್ತಿತ್ತು. ವಿರಾಟ್ ಸೈನ್ಯದ ಆಟವನ್ನೆಲ್ಲ ನೋಡಿದವರೆಲ್ಲ ಈ ಸಲ ಕಪ್ ಗೆಲ್ಲೊದಿರಲಿ ಪ್ಲೀಸ್ ಒಂದು ಮ್ಯಾಚ್ ಆದ್ರು ಗೆದ್ದು ಬನ್ನಿ ಅಂತ ಪರಿಪರಿಯಾಗಿ ಬೇಡಿಕೊಂಡಿದ್ರು. ಕ್ಯಾಪ್ಟನ್ ಕೊಹ್ಲಿ ಗೆಲುವಿನ ಖಾತೆ ತೆರೆಯುವುದಕ್ಕಾಗಿ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ರು ಯಾವುದೆ ಪ್ರಯೋಜವಾಗಲಿಲ್ಲ.
ಪಂಜಾಬ್ ವಿರುದ್ಧ ಗೆಲುವಿನ ಖಾತೆ ತೆರೆದ ಆರ್ಸಿಬಿ
ಸತತ ಆರು ಸೋಲುಗಳನ್ನ ಕಂಡ ಆರ್ಸಿಬಿ ಕೊನೆಗೂ ಸೋಲಿನ ದಂಡಯಾತ್ರೆಗೆ ಅಂತ್ಯ ಆಡಿತು. ಮೊಹಾಲಿಯಲ್ಲಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಚೇಸಿಂಗ್ ಮಾಡಿ 8 ವಿಕೆಟ್ಗಳ ಅಂತರದಿಂದ ಗೆದ್ದುಕಂಡಿತ್ತು. ಸದ್ಯ ಗೆದ್ರಲಪ್ಪ ಅಂತಾ ನಿಟ್ಟುಸಿರು ಬಿಡುತ್ತಿರುವಾಗಲೇ ನಂತರ ಮುಂಬೈ ವಿರುದ್ಧ ಪಂದ್ಯದಲ್ಲಿ ಐದು ವಿಕೆಟ್ ಅಂತರದಿಂದ ಸೋಲು ಕಂಡಿತ್ತು.
ಹ್ಯಾಟ್ರಿಕ್ ಗೆಲುವು ಪಡೆದ ವಿರಾಟ್ ಸೈನ್ಯ
ಸೋಲಿನ ಸರಪಳಿಯಲ್ಲಿ ಸಿಲುಕಿದ ಆರ್ಸಿಬಿ ನಂತರ ಬ್ಯಾಕ್ ಟು ಬ್ಯಾಕ್ ಮೂರು ಪಂದ್ಯಗಳನ್ನ ಗೆದ್ದು ಹ್ಯಾಟ್ರಿಕ್ ಗೆಲುವು ದಾಖಲಿಸಿತು. ಕೋಲ್ಕತ್ತಾ ವಿರುದ್ಧ 10 ರನ್ಗಳ ಗೆಲುವು ಪಡೆದರೆ , ತವರಿನಲ್ಲಿ ಚೆನ್ನೈ ವಿರುದ್ಧಧ ಹೈವೋಲ್ಟೇಜ್ ಪಂದ್ಯದಲ್ಲಿ 1 ರನ್ಗಳ ರೋಚಕ ಗೆಲುವು ಪಡೆಯಿತು. ಇದಾದ ನಂತರ ಪಂಜಾಬ್ ತಂಡವನ್ನ ಮತ್ತೊಮ್ಮೆ ಪಂಕ್ಚರ್ ಮಾಡಿ ಪ್ಲೇ ಆಫ್ ಕನಸಿಗೆ ಚಿಗೊರೊಡೆಸಿತು.
ಡೆಲ್ಲಿ ಹುಡುಗರೆದುರು ತಲೆ ಬಾಗಿದ ಕೊಹ್ಲಿ ಸೈನ್ಯ
ಹ್ಯಾಟ್ರಿಕ್ ಗೆಲುವುಗಳನ್ನ ದಾಖಲಿಸಿ ಪ್ಲೇ ಆಫ್ ಕನಸಿಗೆ ಜೀವ ತುಂಬಿದ್ದ ಆರ್ಸಿಬಿ ಡೆಲ್ಲಿ ವಿರುದ್ಧಧ ಪಂದ್ಯದಲ್ಲಿ ಮತ್ತೊಮ್ಮೆ ಮುಗ್ಗರಿಸಿ ಬಿತ್ತು. ಕೋಟ್ಲಾ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಚೇಸಿಂಗ್ ವಿರಾಟ್ ಪಡೆ ಎಡವಿ ಬಿದ್ದು 16 ರನ್ಗಳ ಸೋಲು ಕಂಡಿತ್ತು. ಇದರೊಂದಿಗೆ ಆರ್ಸಿಬಿಯ ಪ್ಲೇಅಫ್ ತುಗೂಯ್ಯಲೆಯಲ್ಲಿ ಸಿಕ್ಕಿಹಾಕಿಕೊಂಡಿತ್ತು.
ಮಳೆಯ ಆಟಕ್ಕೆ ಆರ್ಸಿಬಿ ಆಟ ಪ್ಲೇ “ಆಫ್”
ಡೆಲ್ಲಿ ವಿರುದ್ಧ ಸೋತ ನಂತರವೂ ಆರ್ಸಿಬಿಗೆ ಅದೃಷ್ಟದ ಬಲದ ಮೇಲೆ ಪ್ಲೇ ಆಫ್ಗೆ ಹೋಗುವ ಅವಕಾಶವಿತ್ತು. ಆದರೆ ಉಳಿದಿದ್ದ ರಾಜಸ್ತಾನ ಮತ್ತು ಸನ್ರೈಸರ್ಸ್ ಪಂದ್ಯವನ್ನ ಗೆಲ್ಲಲ್ಲೇಬೇಕಿತ್ತು.
ಆದರೆ ಮೊನ್ನೆ ರಾಜಸ್ತಾನ ವಿರುದ್ಧದ ಪಂದ್ಯದಲ್ಲಿ ಪಂದ್ಯದುದಕ್ಕೂ ವರುಣನೇ ಆಟ ಆಡಿಬಿಟ್ಟ ಇದರ ಪರಿಣಾಮ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕ ಕೊಡಲಾಯಿತು. ಆರ್ಸಿಬಿ 12 ಪಂದ್ಯಗಳಿಂದ 13 ಪಂದ್ಯಗಳಿಂದ 9 ಅಂಕ ಸಂಪಾದಿಸಿದೆ. ಒಂದು ವೇಳೆ ರಾಜಸ್ತಾನ ವಿರುದ್ಧ ಗೆದ್ದಿದ್ದರೇ 10 ಅಂಕ ಆಗುತ್ತಿತ್ತು.
ನಂತರ ಸನ್ರೈಸರ್ಸ್ ವಿರುದ್ಧ ಗೆದ್ದಿದ್ರೆ 12 ಅಂಕ ಆಗುತ್ತಿತ್ತು. ಲೀಗ್ ಪಂದ್ಯಗಳು ಮುಗಿದಾಗ ಮೂರು ತಂಡಗಳು ಮಾತ್ರ ಹೋಗಿದ್ರೆ ಆರ್ಸಿಬಿ ರನ್ರೇಟ್ ಆಧಾರದ ಮೇಲೆ ಪ್ಲೇ ಆಫ್ ಪ್ರವೇಶಿಸಬಹುದತ್ತು.
ಒಟ್ಟಿನಲ್ಲಿ ಈ ಸಲ ಕಪ್ ನಮ್ದೆ ಅಂತ ಬೀಗಿದ್ದ ವಿರಾಟ್ ಸೈನ್ಯಕ್ಕೆ ಸತತ ಸೋಲುಗಳೇ ಮುಳುವಾಗಿ ಲೀಗ್ ಹಂತದಲ್ಲೆ ಪ್ಲೇ ಆಫ್ ಆಯಿತು.