ಶೌಚಾಲಯದಲ್ಲಿ ಹೆಣ್ಣು ಶಿಶುವಿನ ಶವ ಪತ್ತೆ

ಬೆಂಗಳೂರು, ಮೇ 1- ಏನೂ ತಪ್ಪು ಮಾಡದ ಹೆಣ್ಣು ಶಿಶುವೊಂದು ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿದೆ.

ಆಗತಾನೆ ಜನಿಸಿದ ಹೆಣ್ಣು ಶಿಶುವನ್ನು ನಿರ್ದಯಿ ತಾಯಿ ಮೂರು ದಿನಗಳ ಹಿಂದೆ ಶೌಚಾಲಯವೊಂದರಲ್ಲಿಟ್ಟು ಬಾಗಿಲ ಚಿಲಕ ಹಾಕಿಕೊಂಡು ಹೋಗಿದ್ದಾಳೆ.

ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆಎಸ್‍ಎಫ್‍ಸಿ ಲೇಔಟ್‍ನ ಆಯಿಲ್‍ಮಿಲ್ ರಸ್ತೆಯಲ್ಲಿರುವ ಶೌಚಾಲಯದಲ್ಲಿ ನಿನ್ನೆ ಸಂಜೆ ನವಜಾತ ಶಿಶುವಿನ ಶವ ಪತ್ತೆಯಾಗಿದೆ.

ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಮಗುವನ್ನು ಎಎಂಸಿ ಆಸ್ಪತ್ರೆಯಲ್ಲಿ ತಪಾಸಣೆಗೊಳಪಡಿಸಿದಾಗ ವೈದ್ಯರು ಪರೀಕ್ಷಿಸಿ ಮೂರು ದಿನಗಳ ಹಿಂದೆ ಈ ಮಗು ಜನಿಸಿದ್ದು, ಉಸಿರುಗಟ್ಟಿ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ