ಮುಂಬೈ ಇಂಡಿಯನ್ಸ್ಗೆ ಸನ್ ರೈಸರ್ಸ್ ಸವಾಲು: ಇಬ್ಬರಲ್ಲಿ ಯಾರಿಗೆ ಪ್ಲೇ ಆಫ್ ಟಿಕೆಟ್ ?

ಇಂದಿನ ಐಪಿಎಲ್ ಟೂರ್ನಿಯ 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್-ಸನ್ ರೈಸರ್ಸ್ ಹೈದ್ರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ಮುಂಬೈನ ವಾಖೆಂಡೆ ಅಂಗಳ ಈ ಹೈವೋಲ್ಟೇಜ್ ಅಂಗಳ ವೇದಿಕೆಯಾಗಿದೆ. ಇನ್ನೂ ಮುಂಬೈ ವಿರುದ್ಧದ ಮೊದಲ ಲೀಗ್ ಪಂದ್ಯದಲ್ಲಿ ಶರಣಾಗಿದ್ದ ಸನ್ ರೈಸರ್ಸ್ ತಂಡಕ್ಕೆ ಪ್ರತೀಕಾರದ ಪಂದ್ಯದವಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುವ ಜೊತೆಗೆ ಪ್ಲೇ ಆಫ್ ಆಸೆ ಜೀವಂತವಾಗಿರಿಸಲು ಹೊಸ ಯೋಜನೆ ಹೆಣೆದಿದೆ..

ಇನ್ನೂ ಮುಂಬೈ ಇಂಡಿಯನ್ಸ್ ತವರಿನ ಅಂಗಳದ ಲಾಭ ಪಡೆದು ಸನ್ಗೆ ಶಾಕ್ ನೀಡೋ ಮೂಲಕ ತನ್ನ ಪ್ಲೇ ಆಫ್ಗೆ ಎಂಟ್ರಿ ಕೋಡೋಕೆ ಪ್ರತಿತಂತ್ರ ಹೆಣದಿದೆ.

ಸನ್ ರೈಸರ್ಸ್ ತಂಡವನ್ನ ಕಾಡಲಿದೆ ವಾರ್ನರ್ ಅನುಪಸ್ಥಿತಿ
ತಂಡಕ್ಕೆ ಸಾಲಿಡ್ ಪರ್ಫಾಮನ್ಸ್ಕೊಟ್ಟು ತಂಡಕ್ಕೆ ಟ್ರಂಪ್ ಕಾರ್ಡ್ ಆಗಿದ್ದ ಡ್ಯಾಶಿಂಗ್ ಓಪನರ್ ಡೇವಿಡ್ ವಾರ್ನರ್ ಈ ಬಾರಿಯ ಸೀಸನ್ನಲ್ಲಿ ರನ್ ಹೊಳೆಯನ್ನೆ ಹರಿಸಿದ್ದರು. ಮುಂಬಯ ವಿರುದ್ಧದ ಇಂದಿನ ಪಂದ್ಯದಲ್ಲಿ ಹೈದ್ರಾಬಾದ್ ತಂಡ ವಾರ್ನರ್ ಸೇವೆಯನ್ನ ಮಿಸ್ ಮಾಡಿಕೊಳ್ಳಲಿದೆ. ವಾರ್ನರ್ ಸ್ಥಾನದಲ್ಲಿ ನಾಯಕ ಕೇನ್ ವಿಲಿಯಮ್ಸನ್ ಆಡುವ ಸಾಧ್ಯತೆ ತುಂಬ ಇದೆ.

ಪ್ಲೇ ಆಫ್ ಮೇಲೆ ಸನ್ರೈಸರ್ಸ್ ಕಣ್ಣು
ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆಲುವು ಸಾಧಿಸಿರೋ ಖುಷಿಯಲ್ಲಿರೋ ಸನ್ ರೈಸರ್ಸ್ಗೆ ಇಂದಿನ ಪಂದ್ಯ ಡು ಆರ್ ಡೈ ಮ್ಯಾಚ್ ಆಗಿದೆ. ವಾರ್ನರ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿರುವ ಸನ್ ರೈಸರ್ಸ್ಗೆ ಇಂದಿನ ಪಂದ್ಯ ಮತ್ತಷ್ಟು ಸವಾಲಿನಿದ ಕೂಡಿದೆ. ಹೀಗಾಗಿ ವಾರ್ನರ್ ಸ್ಥಾನವನ್ನು ತುಂಬಬೇಕಾದ ಜವಾಬ್ದಾರಿ ಕೇನ್ ವಿಲಿಯಮ್ಸನ್ ಮೇಲಿದೆ. ಇನ್ನೂ ಉತ್ತಮ ಫಾರ್ಮ್ನಲ್ಲಿರುವ ಮನೀಶ್ ಪಾಂಡೆ, ವಿಜಯ್ ಶಂಕರ್, ದೀಪಕ್ ಹೂಡಾ, ವೃದ್ಧಿಮಾನ್ ಸಾಹಾ ಸಾಥ್ ನೀಡಬೇಕಿದೆ.

ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಕಟ್ಟಿಹಾಕುವ ಸಾಮರ್ಥ್ಯ ಸನ್‌ರೈಸರ್ಸ್ ಬೌಲರ್‌ಗಳಿಗಿದೆ. ಮೊನ್ನೆ ತವರಿನಲ್ಲಿ ಪಂಜಾಬ್ ವಿರುದ್ಧ ಸನ್ರೈಸರ್ಸ್ ಬೌಲರ್ಸ್ಗಳು ಮಿಂಚಿದ್ರು. ಆದರೆ ತಂಡದ ಸ್ಟಾರ್ ಬೌಲರ್ ಭುವನೇಶ್ವರ್‌ ಕುಮಾರ್‌ ಇತ್ತೀಚಿಗೆ ದುಬಾರಿಯಾಗುತ್ತಿರುವುದು ಸನ್‌ರೈಸರ್ಸ್ ತಲೆನೋವಿಗೆ ಕಾರಣವಾಗಿದೆ.

ಸ್ಪಿನ್ನರ್ ರಶೀದ್‌ ಖಾನ್‌ ಪ್ರಮುಖ ಅಸ್ತ್ರವೆನಿಸಿದ್ದಾರೆ. ಸಂದೀಪ್ ಶರ್ಮಾ ಎಂದಿನ ಲಯ ಕಾಯ್ದುಕೊಳ್ಳಬೇಕಿದೆ. ಇನ್ನೂ ಡೆತ್‌ ಓವರ್‌ಗಳಲ್ಲಿ ಸುಧಾರಿತ ಪ್ರದರ್ಶನ ತೋರುವ ಒತ್ತಡ ಸನ್‌ರೈಸರ್ಸ್ ಬೌಲರ್ಸ್ ಮೇಲಿದೆ.

ಇದುವರೆಗೂ ಐಪಿಎಲ್ನಲ್ಲಿ ಮುಂಬೈ ಮತ್ತು ಸನ್ರೈಸರ್ಸ್ ತಂಡಗಳು ಒಟ್ಟು 13 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ 7 ಬಾರಿ ಗೆಲುವು ಕಂಡಿದ್ರೆ ಸನ್ರೈಸರ್ಸ್ ತಂಡ 6 ಬಾರಿ ಗೆದ್ದಿದೆ.

ತವರಿನ ಲಾಭ ಪಡೆಯಲು ಅಂಬಾನಿ ಬ್ರಿಗೇಡಿಯರ್ಸ್ ಪ್ಲಾನ್
ಹಿಂದಿನ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋಲು ಅನುಭವಿಸಿದ್ದ ಮುಂಬೈ ಇಂಡಿಯನ್ಸ್, ತವರಿನ ಅಂಗಳದಲ್ಲಿ ಪಂದ್ಯ ಗೆಲ್ಲುವ ಆತ್ವವಿಶ್ವಾಸದಿಂದ ಕಣಕ್ಕಿಳಿಯುತ್ತಿದೆ. ಕೆಕೆಆರ್ ವಿರುದ್ದ ಉತ್ತಮ ಆರಂಭ ನೀಡಲು ವಿಫಲವಾಗಿದ್ದ ರೋಹಿತ್ ಶರ್ಮಾ, ಕ್ವಿಂಟನ್ ಡಿಕಾಕ್ ಇಂದು ಎಚ್ಚೆತ್ತು ಆಡಬೇಕಿದೆ. ಅಲ್ದೇ ಸೂರ್ಯ ಕುಮಾರ್ ಯಾದವ್, ಕೃನಾಲ್ ಪಾಂಡ್ಯಾ ಬಿಗ್ ಸ್ಕೋರ್ ಕಲೆಹಾಕಬೇಕಿದೆ. ಕೆಕೆಆರ್ವಿರುದ್ಧ ಅಬ್ಬರಿದ್ದ ಹಾರ್ದಿಕ್ ಪಾಂಡ್ಯಾ ಮತ್ತೆ ತಮ್ಮ ಪವರ್ ತೋರಿಸೋಕೆ ಸಜ್ಜಾಗಿದ್ದು, ಪೋಲಾರ್ಡ್ ಸಾಥ್ ನೀಡಿದ್ರೆ ಮುಂಬೈ ಪ್ಲೇ ಆಫ್ಗೆ ಎಂಟ್ರಿ ಕೋಡೋದ್ರಲ್ಲಿ ಯಾವ್ದೇ ಅನುಮಾನವಿಲ್ಲ.

ಇನ್ನೂ ಬಲಿಷ್ಠ ಬ್ಯಾಟ್ಸ್ಮನ್ಗಳಿಗೆ ನೀರು ಕುಡಿಸಬಲ್ಲ ಬುಮ್ರಾ ವಿಕೆಟ್ ಪಡೆಯೋಕೆ ಪರದಾಡ್ತಿರೋದು ತಂಡದ ಆತಂಕಕ್ಕೆ ಕಾರಣವಾಗಿದ್ದು, ಇಂದಿನ ಪಂದ್ಯದಲ್ಲಿ ಲಯ ಕಂಡುಕೊಳ್ಳಬೇಕಿದೆ.ಕೆಕೆಆರ್ ವಿರುದ್ಧ ದುಬಾರಿಯಾಗಿದ್ದ ಮಾಲಿಂಗ ನೈಜ ಆಟ ಪ್ರದರ್ಶಿಸಬೇಕಿದೆ. ರಾಹುಲ್ ಚಹರ್, ಕೃನಾಲ್ ಸ್ಪಿನ್ ಮ್ಯಾಜಿಕ್ ವರ್ಕೌಟ್ ಆದ್ರೆ ಎದುರಾಳಿ ತಂಡ ಉಡೀಸ್ ಆಗೋದು ಪಕ್ಕ.. ಆದ್ರೆ ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ಯಾರ ಕೈ ಮೇಲಾಗುತ್ತೆ ಕಾದು ನೋಡಬೇಕಿದೆ..

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ