ರಾಜಗುರು ಮಾತು ಕೇಳಿ ಸಿಎಂ ಫುಲ್ ಟೆನ್ಷನ್!

ಬೆಂಗಳೂರು: ರಾಜಗುರು ದ್ವಾರಕನಾಥ್ ಗುರೂಜಿ ಮಾತು ಕೇಳಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಫುಲ್ ಟೆನ್ಷನ್ ಆಗಿದ್ದಾರೆ. ಈ ಬಾರಿ ರಾಜ್ಯದಲ್ಲಿ ಬರದ ಛಾಯೆ ಕಾಣಿಸಲಿದೆ ಎಂದು ದ್ವಾರಕನಾಥ್ ಗುರೂಜಿ ಭವಿಷ್ಯ ನುಡಿದಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವಧಿಯಲ್ಲಿ ಬರದ ಕಪ್ಪು ಚುಕ್ಕೆ ತಪ್ಪಿಸಲು ಸಿಎಂಗೆ ರಾಜಗುರು ಸಲಹೆಯೊಂದನ್ನು ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಗುರೂಜಿ, ಈ ವರ್ಷ ಮಳೆಯ ಅಭಾವ ಕಾಡಲಿದೆ. ಹನಿ ನೀರಿಗೂ ಕಷ್ಟಪಡುವ ಪರಿಸ್ಥಿತಿ ಎದುರಾಗುವ ಸಾಧ್ಯತೆಗಳು ಹೆಚ್ಚಿವೆ. ರಾಜ್ಯ ಈ ವರ್ಷ ಭೀಕರ ಬರಗಾಲಕ್ಕೆ ತುತ್ತಾಗಲಿದೆ ಎಂದು ಗುರೂಜಿ ಹೇಳಿದ್ದಾರೆ. ಬರಗಾಲವನ್ನು ತಪ್ಪಿಸಲು ಸಿಎಂಗೆ ಕೆಲವು ಸಲಹೆ ನೀಡಿದ್ದು, ಶೃಂಗೇರಿ ಋಷ್ಯಶೃಂಗದಲ್ಲಿ ಮಹಾ ಪೂಜೆ ಕೈಗೊಳ್ಳಲು ಸೂಚಿಸಿರುವುದಾಗಿ ಹೇಳಿದರು.

ಶೃಂಗೇರಿ ಜೊತೆ ರಾಜ್ಯದ ಎಲ್ಲ ಮುಜರಾಯಿ ದೇಗುಲದಲ್ಲಿ ಈಗಿನಿಂದಲೇ ವಿಶೇಷ ವರುಣನ ಪೂಜೆ ಆರಂಭಿಸಬೇಕು. ಈಶ್ವರ ದೇಗುಲದಲ್ಲಿ ಶತರುದ್ರಾಭಿಷೇಕ ನಡೆಸಬೇಕೆಂದು ರಾಜಗುರುಗಳು ಸೂಚಿಸಿದ್ದಾರೆ. ರಾಜ್ಯದಲ್ಲೂ ಕಲಹ, ರಾಜಕೀಯದ ವೈಷಮ್ಯದಿಂದಾಗಿ ವಿಕೃತಿ ಮನೋಭಾವ ಬಂದಿದೆ. ಇದೆಲ್ಲದರ ನಿವಾರಣೆಗಾಗಿ ದೇವರ ಪೂಜೆ ನಡೆಸಬೇಕೆಂದು ತಿಳಿಸಿರುವುದಾಗಿ ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ