ದಿಢೀರ್​ ಶ್ರೀಮಂತನಾದ ಆಟೋ ಡ್ರೈವರ್​ ಮನೆ ಮೇಲೆ ಐಟಿ ದಾಳಿ

ಬೆಂಗಳೂರು: ರಾಜಧಾನಿಯಲ್ಲಿ ಆಟೋ ಓಡಿಸುತ್ತಿದ್ದ ಸಾಮಾನ್ಯ ವ್ಯಕ್ತಿಯೊಬ್ಬ ದಿಢೀರ್​ ಶ್ರೀಮಂತನಾಗಿ ಐಷಾರಾಮಿ ಜೀವನ ನಡೆಸುತ್ತಿದ್ದವನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸುಬ್ರಮಣಿ ದಿಢೀರ್​ ಶ್ರೀಮಂತನಾದ ಆಟೋ ಡ್ರೈವರ್​. ನಗರದಲ್ಲಿ ಆಟೋ ಓಡಿಸಿಕೊಂಡಿದ್ದ ಸುಬ್ರಮಣಿ ವೈಟ್​​ ಫೀಲ್ಡ್​ನಲ್ಲಿ ವಿಲ್ಲಾ ಖರೀದಿಸಿದ್ದರು.  ಆಟೋ ಡ್ರೈವರ್​ ಆಗಿ ಲಕ್ಸುರಿಯಾಗಿ ಜೀವನ ನಡೆಸುತ್ತಿದ್ದ ಆಟೋ ಡ್ರೈವರ್​ ಮೇಲೆ ಕಣ್ಣಿಟ್ಟಿದ್ದ ಅಧಿಕಾರಿಗಳು ಏ.16ರಂದು ದಾಳಿ ನಡೆಸಿದರು.

ಏ.16ರಂದು ಬೆಳಗ್ಗೆ 11 ಕ್ಕೆ ‌ಬಂದ ಅಧಿಕಾರಿಗಳಿಂದ ಮಧ್ಯಾಹ್ನ 2:30 ರ ವರೆಗೆ ದಾಖಲೆಗಳ ಪರಿಶೀಲನೆ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ದಾಳಿ ವೇಳೆ ಸಿಕ್ಕಿರುವ ದಾಖಲೆಗಳ  ಬಗ್ಗೆ ವಿವರಣೆ ನೀಡುವಂತೆ ಸೂಚನೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ