ಚಾರ್ಜ್ ಹಾಕಿ ಮೊಬೈಲ್ ಬಳಸುವ ಮುನ್ನ ಎಚ್ಚರ; ಬೆಂಗಳೂರಿನಲ್ಲಿ ನಡೆಯಿತು ಭೀಕರ ಘಟನೆ!

ಬೆಂಗಳೂರು: ಮೊಬೈಲ್​ ಚಾರ್ಜ್​ಗೆ ಹಾಕಿ ದೂರವಾಣಿ ಕರೆ ಮಾಡುವವರಿದ್ದಾರೆ. ಆದರೆ ಇದು, ಎಷ್ಟು ಅಪಾಯಕಾರಿ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಘಟನೆಯೇ ಸಾಕ್ಷಿ. ಚಾರ್ಜ್ ಹಾಕಿ ಮೊಬೈಲ್​ನಲ್ಲಿ ಮಾತನಾಡುತ್ತಿದ್ದಾಗ ಮೊಬೈಲ್​ ದೀಢೀರನೆ ಸ್ಫೋಟಗೊಂಡಿದೆ. ಇದರಿಂದ ಬಳಕೆದಾರ ತೀವ್ರವಾಗಿ ಗಾಯಗೊಂಡಿದ್ದಾನೆ.

ಏಪ್ರಿಲ್ 11ರಂದು ಘಟನೆ‌ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಿಹಾರ ಮೂಲದ ಯುವಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಮೊಬೈಲ್ ಚಾರ್ಜ್ ಹಾಕಿ ತನ್ನ ಸಹೋದ್ಯೋಗಿಗೆ ವಿಡಿಯೋ ಕಾಲ್ ಮಾಡಿದ್ದ. ಈ ವೇಳೆ ಕೆಲ ಹೊತ್ತು ಮಾತನಾಡಿದ್ದಾನೆ ಕೂಡ. ಆದರೆ, ಇದಕ್ಕಿದ್ದಂತೆ ಮಾತನಾಡುತ್ತಿರುವಾಗಲೇ ಮೊಬೈಲ್​ ಬ್ಲಾಸ್ಟ್​ ಆಗಿದೆ.

ಮೊಬೈಲ್ ಬ್ಲಾಸ್ಟ್ ಆಗುತ್ತಿದ್ದಂತೆ ಯುವಕನ ಸ್ನೇಹಿತರು ಶಾಕ್ ಆಗಿದ್ದಾರೆ. ಈ ವೇಳೆ ಯುವಕನ ಕೈಗೆ ಗಾಯಗಳಾಗಿದ್ದವು. ಗಾಯಗೊಂಡ ಯುವಕನನ್ನು ವೈದೇಹಿ ಆಸ್ಪತ್ರಗೆ ದಾಖಲು‌ ಮಾಡಲಾಯಿತು. ಈ ವೇಳೆ ಶಸ್ತ್ರಚಿಕಿತ್ಸೆ ಮಾಡಲಾಯಿತಾದರೂ ಯುವಕ ಮೂರು ಬೆರಳು ಕಳೆದುಕೊಂಡಿದ್ದಾನೆ. ಸದ್ಯ, ಆತ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ