
ಬೆಂಗಳೂರು: ರಾಜಧಾನಿಯಲ್ಲಿ ಆಟೋ ಓಡಿಸುತ್ತಿದ್ದ ಸಾಮಾನ್ಯ ವ್ಯಕ್ತಿಯೊಬ್ಬ ದಿಢೀರ್ ಶ್ರೀಮಂತನಾಗಿ ಐಷಾರಾಮಿ ಜೀವನ ನಡೆಸುತ್ತಿದ್ದವನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸುಬ್ರಮಣಿ ದಿಢೀರ್ ಶ್ರೀಮಂತನಾದ ಆಟೋ ಡ್ರೈವರ್. ನಗರದಲ್ಲಿ ಆಟೋ ಓಡಿಸಿಕೊಂಡಿದ್ದ ಸುಬ್ರಮಣಿ ವೈಟ್ ಫೀಲ್ಡ್ನಲ್ಲಿ ವಿಲ್ಲಾ ಖರೀದಿಸಿದ್ದರು. ಆಟೋ ಡ್ರೈವರ್ ಆಗಿ ಲಕ್ಸುರಿಯಾಗಿ ಜೀವನ ನಡೆಸುತ್ತಿದ್ದ ಆಟೋ ಡ್ರೈವರ್ ಮೇಲೆ ಕಣ್ಣಿಟ್ಟಿದ್ದ ಅಧಿಕಾರಿಗಳು ಏ.16ರಂದು ದಾಳಿ ನಡೆಸಿದರು.
ಏ.16ರಂದು ಬೆಳಗ್ಗೆ 11 ಕ್ಕೆ ಬಂದ ಅಧಿಕಾರಿಗಳಿಂದ ಮಧ್ಯಾಹ್ನ 2:30 ರ ವರೆಗೆ ದಾಖಲೆಗಳ ಪರಿಶೀಲನೆ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ದಾಳಿ ವೇಳೆ ಸಿಕ್ಕಿರುವ ದಾಖಲೆಗಳ ಬಗ್ಗೆ ವಿವರಣೆ ನೀಡುವಂತೆ ಸೂಚನೆ ನೀಡಿದ್ದಾರೆ.