![sidilu](http://kannada.vartamitra.com/wp-content/uploads/2019/04/sidilu-573x381.jpg)
ಚಿಕ್ಕಮಗಳೂರು, ಏ.30-ಚಿಕ್ಕಮಗಳೂರು ಸೇರಿದಂತೆ ಜಿಲ್ಲೆಯ ಮೂಡಿಗೆರೆ, ಬಣಕಲ್, ಕೊಟ್ಟಿಗೆಹಾರ, ತರೀಕೆರೆ, ಬಾಳೆಹೊನ್ನೂರುಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು-ಸಿಡಿಲು ಸಹಿತ ಮಳೆ ಸುರಿದಿದೆ.
ಚಿಕ್ಕಮಗಳೂರು ಸುತ್ತಮುತ್ತ 4 ಗಂಟೆಗೆ ಶುರುವಾದ ಮಳೆ ಗುಡುಗು ಸಿಡಿಲಿನಿಂದಾಗಿ ನಗರದ ಹೊರವಲಯದಲ್ಲಿರುವ ತೇಗೂರು ಗ್ರಾಮದ ವಾಸಿ ಮಂಜುನಾಥ್ ಆಚಾರಿ (48), ಪತ್ನಿ ಭಾರತಿ(42) ಗದ್ದೆ ಕೆಲಸ ಮಾಡಿಕೊಂಡು ಕೆರೆ ಏರಿಯ ಮೇಲೆ ಬರುತ್ತಿದ್ದಾಗ ಇಬ್ಬರಿಗೂ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಒಂದೆಡೆ ಬಿಸಿಲ ಬೇಗೆಯಿಂದ ಬೇಸತ್ತಿದ್ದ ನಗರ ಸೇರಿದಂತೆ ಸುತ್ತಮುತ್ತಲ ಜನ ಸಂತಸಪಟ್ಟರೆ, ಮತ್ತೊಂದೆಡೆ ಗಾಳಿ ಮಳೆ, ಸಿಡಿಲಿನಿ ಆರ್ಭಟದಿಂದಾಗಿ ಜನರು ತತ್ತರಿಸುವಂತಾಯಿತು.
ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯ ಆಂಜನೇಯಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ಗಾಳಿಯಿಂದಾಗಿ ತೆಂಗಿನಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ಸಂಜೆವರೆಗೂ ವಿದ್ಯುತ್ ಕಡಿತಗೊಂಡಿತ್ತು. ಹಲವೆಡೆ ಮನೆಗಳ ಹೆಂಚು, ಶೀಟು ಹಾರಿಹೋಗಿದ್ದು, ಇನ್ನು ಕೆಲವು ಕಡೆ ರಸ್ತೆಬದಿಯ ಮರಗಳು ಧರೆಗುರುಳಿದ್ದವು.