ಚುಟುಕು ಕ್ರಿಕೆಟ್ ಅಂದ್ರೆ, ಥಟ್ ಅಂತ ನಮ್ ಕಣ್ಣೆದುರು ನಿಲ್ಲೋದು ಹೊಡಿಬಡಿ ಆಟ.. ಎದುರಾಳಿ ಬೌಲರ್ಗಳಿಗೆ ಒಂದಿಷ್ಟು ಕರುಣೆ ತೋರದೆ ಹಿಗ್ಗಾ ಮುಗ್ಗ ಬಾರಿಸುವುದೇ ಚುಟುಕು ಕ್ರಿಕೆಟ್ನ ಸ್ಪೆಷಾಲಿಟಿ. ಇಲ್ಲಿ ಏನಿದ್ರು ಬ್ಯಾಟ್ಸ್ಮನ್ಗಳದ್ದೇ ಕಾರುಬಾರು, ಸಿಕ್ಸರ್ ಬೌಂಡರಿಯದ್ದೇ ಮಾತು.. ಯಾಕಂದ್ರೆ ಇದು ಬ್ಯಾಟ್ಸ್ಮನ್ಗಳ ಗೇಮ್ ಅನ್ನೋದು ನೂರಕ್ಕೆ ನೂರರಷ್ಟು ಸತ್ಯ. ಇಲ್ಲಿ ಬ್ಯಾಟ್ಸ್ಮನ್ಗಳೇ ಮ್ಯಾಚ್ವಿನ್ನರ್ಗಳು. ಆದ್ರೆ, ಇಲ್ಲಿ ದಾಖಲೆ ಅನ್ನೋದು ಯಾರಪ್ಪನ ಸ್ವತ್ತು ಅಲ್ಲ.. ಅಂತಹ ದಾಖಲೆಯೊಂದನ್ನ ಕೆಕೆಆರ್ ವಿರುದ್ಧ ಅಲ್ರೌಂಡರ್ ಹಾರ್ದಿಕ್ ಪಾಂಡ್ಯಾ ನಿರ್ಮಿಸಿದ್ದಾರೆ..
ಮೊನ್ನೆ ಈಡನ್ ಗಾರ್ಡನ್ ಅಂಗಳದಲ್ಲಿ ರಗಡ್ ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಕೋಲ್ಕತ್ತಾ ಬೌಲರ್ಸ್ಗಳನ್ನ ಮನಬಂದಂತೆ ಚೆಂಡಾಡಿದ್ರು. ಆರನೇ ಕ್ರಮಾಂಕದಲ್ಲಿ ಬಂದ ಹಾರ್ದಿಕ್ ಮೈದಾನದ ಅಷ್ಟದಿಕ್ಕುಗಳಿಗೂ ಚೆಂಡಿನ ಪರಿಚೆಯ ಮಾಡಿಕೊಟ್ರು.
ಪಾಂಡ್ಯಾ ಅಬ್ಬರಕ್ಕೆ ಬೆಚ್ಚಿಬಿದ್ದಿದ್ದ ಕೋಲ್ಕತ್ತಾ ನೈಟ್ ರೈಡರ್ಸ್
ಮೊನ್ನೆ ಪಂದ್ಯದಲ್ಲಿ ಕೋಲ್ಕತ್ತಾ ಬ್ಯಾಟ್ಸ್ಮನ್ ಆ್ಯಂಡ್ರೆ ರಸ್ಸೆಲ್ ರಗಡ್ ಬ್ಯಾಟಿಂಗ್ ಮಾಡಿದ್ರೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪವರ್ಫುಲ್ ಬ್ಯಾಟಿಂಗ್ ಮಾಡಿ ಅಬ್ಬರಿಸಿದ್ರು.
ಬೌಂಡರಿ ಗೆರೆ, ಮೈದಾನ ಎಷ್ಟೇ ದೊಡ್ಡದಿರಲಿ, ತಮ್ಮ ಮಸಲ್ ಪವರ್ ಮೂಲಕವೇ ಸಿಕ್ಸರ್ ಅಟ್ಟೋದು ರಸ್ಸೆಲ್ ಮಾತ್ರವಲ್ಲ ತಾನು ಸಿಡಿಸಬಲ್ಲೇ ಅನ್ನೋದನ್ನ ಹಾರ್ದಿಕ್ ಪಾಂಡ್ಯಾ ಪ್ರೂವ್ ಮಾಡಿದ್ರು. ಕೆಕೆಆರ್ ನೀಡಿದ್ದ 233 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ್ದ ಮುಂಬೈ ಪಂದ್ಯ ಕೈಚೆಲ್ಲಿದ್ರು, ಹಾರ್ದಿಕ್ ಪಾಂಡ್ಯಾರ ಆ ಸ್ಪೋಟಕ ಬ್ಯಾಟಿಂಗ್ ಮಾತ್ರ ಭಾರತೀರಯರ ಹೃದಯ ಗೆದ್ದಿದೆ. ಯೆಸ್.. ಒಂದೆಡೆ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ಮನ್ಗಳ ವಿಕೆಟ್ ಉರುಳುತ್ತಿದ್ದರು ತಲೆಕೆಡಿಸಿಕೊಳ್ಳದ ಪಾಂಡ್ಯಾ, ಗೆಲುವೊಂದೆ ನನ್ನ ಗುರಿಯೆಂಬಂತೆ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್ಗಳನ್ನ ಸಿಡಿಸೋ ಮೂಲಕ ಕೋಲ್ಕತ್ತಾ ತಂಡಕ್ಕೆ ನಡುಕ ಹುಟ್ಟಿಸಿದ್ರೆ, ಅಭಿಮಾನಿಗಳಿಗೆ ಮಾತ್ರ ಭರ್ಜರಿ ರಸದೌತಣ ನೀಡಿದ್ರು. ಅಲ್ದೇ ಆಂಡ್ರೋ ರಸ್ಸೆಲ್ ಅರ್ಭಟಕ್ಕೆ ಹಾರ್ದಿಕ್ ಪಾಂಡ್ಯಾ ತಕ್ಕ ಪ್ರತ್ಯುತ್ತರ ನೀಡಿದಂತೆ ಇತ್ತು..
ಪಾಂಡ್ಯಾ ಅಬ್ಬರಕ್ಕೆ ರಿಷಭ್ ಪಂತ್ ದಾಖಲೆ ಉಡೀಸ್
ಪ್ರಸಕ್ತ ಟೂರ್ನಿಯಲ್ಲಿ ಮುಂಬೈ ವಿರುದ್ಧದ ಪಂದ್ಯದಲ್ಲಿ 18 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಫಾಸ್ಟೆಸ್ಟ್ ಫಿಫ್ಟಿ ದಾಖಲೆ ಬರೆದಿದ್ದ ರಿಷಭ್ ಪಂತ್, ಹಾರ್ದಿಕ್ ಪಾಂಡ್ಯಾರ ಅಬ್ಬರದ ಬ್ಯಾಟಿಂಗ್ಗೆ ಉಡೀಸ್ ಆಯ್ತು. ಹೌದು.. ಎದುರಾಳಿ ಕೆಕೆಆರ್ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಹಾರ್ದಿಕ್ ಪಾಂಡ್ಯಾ ಕೇವಲ 17 ಎಸೆತಗಳಲ್ಲಿ 6 ಬೌಂಡರಿ ಹಾಗೂ 9 ಸಿಕ್ಸರ್ಗಳ ನೆರವಿನಿಂದ ಅರ್ಧಶತಕ ಸಿಡಿಸೋ ಮೂಲಕ ಪಂತ್ ಹೆಸರಲ್ಲಿದ್ದ ಫಾಸ್ಟೆಸ್ಟ್ ಫಿಫ್ಟಿ ದಾಖಲೆಯನ್ನ ಅಳಿಸಿಹಾಕಿ ತಮ್ಮ ಹೆಸರಿಗೆ ಬರೆದುಕೊಂಡರು.. ಈ ಮೂಲಕ 12ನೇ ಆವೃತ್ತಿಯಲ್ಲಿ ಫಾಸ್ಟೆಸ್ಟ್ ಫಿಫ್ಟಿ ದಾಖಲೆ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು..
34 ಎಸೆತಗಳನ್ನು ಎದುರಿಸಿದ ಹಾರ್ದಿಕ್ ಪಾಂಡ್ಯ 91 ರನ್ ಕಲೆ ಹಾಕಿದ್ರು ಇದರಲ್ಲಿ 9 ಸಿಕ್ಸರ್, 6 ಬೌಂಡರಿಗಳ ಬಾರಿಸಿದ್ರು.
ಬರೋಬ್ಬರಿ ಕೆಕೆಆರ್ ವಿರುದ್ಧ ಏಕಾಂಗಿ ಹೋರಾಟ ನಡೆಸಿದ ಹಾರ್ದಿಕ್ ಪಾಂಡ್ಯಾ, ಗುರ್ನೆ ಎಸೆತದಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದ್ರು, ಈ ಮೂಲಕ ಕೆಕೆಆರ್ ವಿರುದ್ಧ ಮುಂಬೈ ಇಂಡಿಯನ್ಸ್ 34 ರನ್ಗಳ ಅಂತರದಿಂದ ಸೋಲಬೇಕಾಯ್ತು.
ಒಟ್ನಲ್ಲಿ ಐಪಿಎಲ್ನಲ್ಲಿನ ಹಾರ್ದಿಕ್ ಪಾಂಡ್ಯಾರ ಈ ಫಾರ್ಮ್ ಮುಂದಿನ ವಿಶ್ವಕಪ್ನಲ್ಲಿ ಭಾರತ ತಂಡದ ನೆರವಿಗೆ ಬರಲಿ ಎಂಬುವುದೇ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಶಯ…