ಇಂದು ಆರ್ಸಿಬಿ-ರಾಜಸ್ಥಾನ ರಾಯಲ್ಸ್ ಫೈಟ್: ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ಆಡ್ತಾರಾ ಕೊಹ್ಲಿ?

ಕಲರ್ಫುಲ್ ಟೂರ್ನಿ ಐಪಿಎಲ್ನಲ್ಲಿ ಈಗಾಗಲೇ ಫ್ಲೇ ಆಫ್ ರೇಸ್ನಿಂದ ಹೊರ ಬಿದ್ದಿರುವ ಆರ್ಸಿಬಿ, ಇಂದು ತವರಿನ ಅಂಗಳದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.ಇನ್ನೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂದಿನ ಪಂದ್ಯ ಪ್ಲೇ ಆಫ್ ದೃಷ್ಟಿಯಿಂದ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಆದ್ರೆ, ರಾಜಸ್ಥಾನ ರಾಯಲ್ಸ್ ತಂಡದ ಪಾಲಿಗೆ ಈ ಪಂದ್ಯ ಅತಿ ಮುಖ್ಯವೆನಿಸಿದೆ. ಪ್ಲೇ ಆಫ್ಗೆ ಪ್ರವೇಶಿಸಲು ರಾಯಲ್ಸ್ಗೆ ಮುಂದಿನ ಎಲ್ಲ 2 ಪಂದ್ಯಗಳು ಡು ಆರ್ ಡೈ ಆಗಿವೆ.. ಹಾಗಾಗಿ ಈ ಪಂದ್ಯವನ್ನು ಗೆಲ್ಲುವುದು ರಾಯಲ್ಸ್ ಪಾಲಿಗೆ ದೊಡ್ಡ ಸವಾಲಾಗಿದೆ. ಇನ್ನೂ ರಾಯಲ್ಸ್ ವಿರುದ್ಧದ ಮೊದಲ ಲೀಗ್ ಪಂದ್ಯದಲ್ಲಿ ಸೋತಿದ್ದ ಆರ್ಸಿಬಿಗೆ ತವರಿನಲ್ಲಿ ಸೇಡು ತೀರಿಸಿಕೊಳ್ಳುವ ಮೂಲಕ ರಾಯಲ್ಸ್ ಕನಸು ನುಚ್ಚುನೂರು ಮಾಡಲು ಹೊಂಚು ಹಾಕಿದೆ…

ಆರ್ಸಿಬಿ ಮೊನ್ನೆ ಡೆಲ್ಲಿ ವಿರುದ್ಧ ಸೋಲುವ ಮೂಲಕ ಪ್ಲೇ ಆಫ್ ಕನಸನ್ನ ನುಚ್ಚು ನೂರು ಮಾಡಿಕೊಂಡಿರುವುದರಿಂದ ಮುಂದಿನ ಎರಡು ಪಂದ್ಯಗಳು ಆರ್ಸಿಬಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯವಾಗಿದೆ. ಹೀಗಾಗಿ ಕ್ಯಾಪ್ಟನ್ ಕೊಹ್ಲಿ ಇಂದು ನಡೆಯುವ ರಾಜಸ್ತಾನ ವಿರುದ್ಧದ ಕದನದಲ್ಲಿ ಆಡೋದು ಅನುಮಾನದಿಂದ ಕೂಡಿದೆ.

ರಾಯಲ್ಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಆರ್ಸಿಬಿ ಪ್ಲಾನ್
ಹೌದು.. ರಾಯಲ್ಸ್ ವಿರುದ್ಧದ ಮೊದಲ ಲೀಗ್ ಪಂದ್ಯದಲ್ಲಿ ಸೋತಿದ್ದ ವಿರಾಟ್ ಪಡೆಗೆ ಇದು ಸೇಡಿನ ಸಮರವಾಗಿದೆ. ಹೀಗಾಗಿಯೇ ಕ್ಯಾಪ್ಟನ್ ಕೊಹ್ಲಿ ತಮ್ಮ ತವರಿನ ಅಂಗಳದಲ್ಲಿ ತಿರುಗೇಟು ನೀಡುವ ತವಕದಲ್ಲಿದ್ದಾರೆ. ಆರ್ಸಿಬಿ ಓಪನರ್ ಪಾರ್ಥಿವ್ ಪಟೇಲ್ ಸಖತ್ ಬ್ಯಾಟಿಂಗ್ ನಡೆಸುತ್ತಿದ್ದು, ಜೊತೆಗೆ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಅತಿ ನಿರ್ಣಾಯಕವೆನಿಸಲಿದೆ. ಅಲ್ದೇ ಸ್ಲಾಗ್ ಓವರ್ಗಳಲ್ಲಿ ಗುರುಕಿರತ್ ಸಿಂಗ್, ಸ್ಟೋಯ್ನಿಸ್ ಮತ್ತಷ್ಟು ಶೈನ್ ಆದರೆ ರಾಜಸ್ಥಾನ ತಂಡದ ಕನಸು ಭಗ್ನಗೊಳಿಸುವುದರಲ್ಲಿ ಯಾವ್ದೇ ಅನುಮಾನ ಇಲ್ಲ..

ಇನ್ನೂ ರಾಯಲ್ಸ್ ವಿರುದ್ಧ ಸೇಡು ತೀರಿಸಿಕೊಳ್ಳಬೇಕಾದ್ರೆ ಬೌಲರ್ಗಳ ಪಾತ್ರ ಪ್ರಮುಖವಾಗಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ದುಬಾರಿಯಾಗಿದ್ದ ಉಮೇಶ್ ಯಾದವ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ನವದೀಪ್ ಸೈನಿ ಉತ್ತಮ ದಾಳಿ ಸಂಘಟಿಸಬೇಕಿದೆ.

ಆರ್ಸಿಬಿ – ರಾಜಸ್ಥಾನ ಫೈಟ್
ಪಂದ್ಯ 19
ಆರ್ಸಿಬಿ 8
ರಾಜಸ್ಥಾನ 10
ಐಪಿಎಲ್ನಲ್ಲಿ ಇದುವರೆಗೂ ಆರ್ಸಿಬಿ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳು 19 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್ಸಿಬಿ 8 ಬಾರಿ ಗೆದ್ರೆ ರಾಜಸ್ತಾನ 10 ಬಾರಿ ಗೆದ್ದಿದೆ.

ರಾಜಸ್ಥಾನ ರಾಯಲ್ಸ್ಗೆ ಡು ಆರ್ ಡೈ ಮ್ಯಾಚ್
ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಗೆಲ್ಲುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡ ಪ್ಲೇ ಆಫ್ ಕನಸು ಜೀವಂತವಾಗಿರಿಸಿದೆ. ಇಂಗ್ಲೆಂಡ್ ಆಟಗಾರರ ಅನುಪಸ್ಥಿತಿಯಲ್ಲ ಕಣಕ್ಕಿಳಿದರು ಅವ್ರ ಸ್ಥಾನ ತುಂಬುವಲ್ಲಿ ದೇಶಿಯ ಆಟಗಾರರು ಯಶಸ್ವಿಯಾಗಿದ್ದಾರೆ. ಬಟ್ಲರ್ ಸ್ಥಾನವನ್ನು ಲಿಯಾಮ್ ಲಿವಿಂಗ್ಸ್ಟೋನ್ ತುಂಬುವುದರಲ್ಲಿ ಸಕ್ಸಸ್ ಆಗಿದ್ದಾರೆ.ಇದರೊಂದಿಗೆ ತಂಡದಲ್ಲಿ ರಹಾನೆ, ಸ್ಮಿತ್, ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ಬಿನ್ನಿ ಅಬ್ಬರಿಸಿದ್ರೆ, ರಾಜಸ್ಥಾನ ತಂಡ ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಳ್ಳೋದ್ರಲ್ಲಿ ಅನುಮಾನವೇ ಇಲ್ಲ.

ರಾಜಸ್ಥಾನ ತಂಡದ ಟ್ರಂಪ್ ಕಾರ್ಡ್ ಆಗಿದ್ದ ಆರ್ಚರ್ ಸ್ಥಾನವನ್ನ ಒಶಾನೆ ಥಾಮಸ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಪ್ರತಿ ಪಂದ್ಯದಲ್ಲಿ ದುಬಾರಿಯಾಗ್ತಿದ್ದ ಜೈದೇವ್ ಶೈನ್ ಆಗಿದ್ದು ಆದೇ ಲಯ ಕಾಯ್ದುಕೊಳ್ಳಬೇಕಿದೆ. ಇನ್ನೂ ತವರಿನ ಅಂಗಳದಲ್ಲಿ ಕನ್ನಡಿಗ ಶ್ರೇಯಸ್ ಗೋಪಾಲ್, ಸ್ಟುವರ್ಟ್ ಬಿನ್ನಿ ಕಮಾಲ್ ಮಾಡೋಕೆ ರೆಡಿಯಾಗಿದ್ದಾರೆ..

ಒಟ್ನಲ್ಲಿ ಇಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪ್ಲೇ ಆಫ್ ಹಾದಿಗೆ ಆರ್ಸಿಬಿ ತಣ್ಣೀರು ಎರಚುತ್ತಾ.. ಇಲ್ಲ ಮತ್ತಷ್ಟು ನೀರು ಪೋಣಿಸುತ್ತಾ ಕಾದು ನೋಡಬೇಕಿದೆ…

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ