ಈ ಬಾರಿಯೂ ಐಪಿಎಲ್ನಲ್ಲಿ ಅಬ್ಬರಿಸಿದ ಮರಿ ವಿರಾಟ್: ಕೋಲ್ಕತ್ತಾ ವಿರುದ್ಧ ಅಬ್ಬರಿಸಿದ ಪಂಜಾಬ್ ಬ್ಯಾಟ್ಸ್ಮನ್

ಶುಭಮನ್ ಗಿಲ್ ಟೀಂ ಇಂಡಿಯಾದ ಫ್ಯೂಚರ್ ಸ್ಟಾರ್ . ಕಳೆದ ವರ್ಷ ಅಂಡರ್ 19 ವಿಶ್ವಕಪ್ ನಲ್ಲಿ ರನ್ ಮಳೆ ಸುರಿಸಿ ಕಿರಿಯರ ವಿಶ್ವಕಪ್ ಗೆದ್ದು ಕೊಟ್ಟ ಟ್ಯಾಲೆಂಟ್ ಕ್ರಿಕೆಟರ್.

ಅಂಡರ್ 19 ವಿಶ್ವಕಪ್ನಲ್ಲಿ ಶುಭಮನ್ ಬ್ಯಾಟಿಂಗ್ ನೋಡಿದವರೆಲ್ಲ ಮರಿ ವಿರಾಟ್ ಎಂದು ಕರೆದಿದ್ರು. ಜಸ್ಟ್ 19 ವರ್ಷದ ಶುಭಮನ್ ಗಿಲ್ ತಮ್ಮ ಜಬರ್ದಸ್ತ್ ಬ್ಯಾಟಿಂಗ್ ಮೂಲಕ ಇಂಪ್ರೆಸ್ ಮಾಡಿದ್ರು.

ಕಲರ್ಫುಲ್ ಟೂರ್ನಿಯಲ್ಲಿ ಅಬ್ಬರಿಸಿದ ಮರಿ ವಿರಾಟ್
ಕಳೆದ ವರ್ಷ ಶುಭಮನ್ ಪಾಲಿಗೆ ಲಕ್ಕಿ ಇಯರ್ ಕಿರಯರ ವಿಶ್ವಕಪ್ ಗೆದ್ದ ಸಂಭ್ರಮದ ಜೊತೆಗೆ ದೇಸಿ ಮತ್ತು ಐಪಿಎಲ್ನಲ್ಲಿ ರನ್ ಹೊಳೆಯನ್ನ ಹರಿಸಿ ಎಲ್ಲರೂ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ರು.

ಅದರಲ್ಲೂ ಚೊಚ್ಚಲ ಐಪಿಎಲ್ನಲ್ಲಿ ಕೋಲ್ಕತ್ತಾ ಪರ ಆಡಿದ ಶುಭಮನ್ ಗಿಲ್ ಟೀಂ ಇಂಡಿಯಾದ ಫ್ಯೂಚರ್ ಸ್ಟಾರ್ ಅಂತ ಕರೆಸಿಕೊಂಡ್ರು. 13 ಪಂದ್ಯಗಳಿಂದ 203 ರನ್ ಕಲೆ ಹಾಕಿದ್ರು.

12ನೇ ಸೀಸನ್ನಲ್ಲೂ ಅಬ್ಬರಿಸುತ್ತಿದ್ದಾರೆ ಪಂಜಾಬ್ ಬ್ಯಾಟ್ಸ್ಮನ್
ಕಳೆದ ಸೀಸನ್ನಲ್ಲಿ ಕೋಲ್ಕತ್ತಾ ಪರ ಜರ್ಬದಸ್ತ್ ಬ್ಯಾಟಿಂಗ್ ಮಾಡಿದ್ದ ಶುಭಮನ್ ಗಿಲ್ ಸಿಕ್ಕ ಅವಕಾಶಗಳನ್ನ ಚೆನ್ನಾಗಿ ಬಳಸಿಕೊಂಡು ಈ ಬಾರಿಯೂ ರನ್ ಹೊಳೆಯನ್ನ ಹರಿಸಿದ್ದಾರೆ.

ಈ ಸೀಸನ್ನಲ್ಲಿ ಶುಭಮನ್ ಗಿಲ್ 12 ಪಂದ್ಯಗಳನ್ನಾಡಿರುವ ಶುಭಮನ್ ಗಿಲ್ 222 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 2 ಅರ್ಧ ಶತಕ ಬಾರಿಸಿದ್ದು 76 ಹೈಯಸ್ಟ್ ಸ್ಕೋರ್ ಆಗಿದೆ.

ಕೋಲ್ಕತ್ತಾ ವಿರುದ್ಧ ಶುಭಮನ್ ಡೆಡ್ಲಿ ಬ್ಯಾಟಿಂಗ್
ಮೊನ್ನೆ ಮುಂಬೈ ವಿರುದ್ಧ ಓಪನರ್ರಾಗಿ ಕಣಕ್ಕಿಳಿದ ಈ ಶುಭಮನ್ ಡೆಡ್ಲಿ ಬ್ಯಾಟಿಂಗ್ ಮಾಡಿದ್ರು. ಈ ಪಂಜಾಬ್ ಬ್ಯಾಟ್ಸ್ಮನ್ ಕೇವಲ 45 ಎಸೆತದಲ್ಲಿ 76 ರನ್ ಗಳಿಸಿದ್ರು. ಶುಭಮನ್ ಆಟಕ್ಕೆ ತಂಡದ ಮಾಜಿ ಆಟಗಾರ ಶ್ರೀಕಾಂತ್ ಫಿಧಾ ಆಗಿದ್ದಾರೆ.

ಒಟ್ಟಿನಲ್ಲಿ ಶುಭಮನ್ ಗಿಲ್ ಈ ಬಾರಿಯ ಐಪಿಎಲ್ನಲ್ಲೂ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದು ಟೀಂ ಇಂಡಿಯಾದ ಬಾಗಿಲು ಬಡಿಯುವ ದಿನ ದೂರವಿಲ್ಲ ಅನ್ನೋದನ್ನ ಬ್ಯಟ್ ಮೂಲಕ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ