ಸಿಧಿ : ನಾನೇನಾದರೂ ತಪ್ಪು ಮಾಡಿದರೆ ನನ್ನ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಧ್ಯಪ್ರದೇಶದ ಸಿಧಿಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಐಟಿ ದಾಳಿ ನಡೆಸಿದ ನಂತರ ಕಾಂಗ್ರೆಸ್ ನೇತಾರರೊಬ್ಬರು ಕೇಳಿದ್ದರು ‘ನಾವು ರಾಜಕಾರಣಿಗಳು ನೀವು ನಮ್ಮ ನಿವಾಸದ ಮೇಲೆ ಯಾಕೆ ದಾಳಿ ನಡೆಸುತ್ತೀರಾ?ಎಂದು ದೇಶದ ಕಾನೂನು ಎಲ್ಲರಿಗೂ ಸಮಾನವಾಗಿದೆ. ಮೋದಿ ಏನಾದರೂ ತಪ್ಪು ಮಾಡಿದರೆ ಅಲ್ಲಿಯೂ ಐಟಿ ದಾಳಿ ನಡೆಸಲಿ. ಕಾನೂನು ಎಲ್ಲರಿಗೂ ಸಮಾನವಾಗಿರಬೇಕು ಎಂದು ಲೋಕಸಭಾ ಚುನಾವಣೆಗೆ ಮುನ್ನ ವಿವಿಧ ನಾಯಕರ ನಿವಾಸದ ಮೇಲೆ ಐಟಿ ದಾಳಿ ನಡೆಸಿದ್ದಕ್ಕೆ ವಿಪಕ್ಷಗಳು ಪ್ರಶ್ನಿಸಿದ್ದಕ್ಕೆ ತಿರುಗೇಟಿಉ ನಿಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ತುಘ್ಲಕ್ ರಸ್ತೆ ಚುನಾವಣಾ ಹಗರಣದ ಹಣವನ್ನು ಕುಟುಂಬ ರಾಜಕಾರಣದ ರಾಜಕೀಯ ಪ್ರಚಾರಕ್ಕಾಗಿ ಬಳಸಲಾಗುತ್ತದೆ ಎಂದಿದ್ದಾರೆ.
ಕಾಂಗ್ರೆಸ್ನಲ್ಲಿ ಭ್ರಷ್ಟಾಚಾರವೇ ಅವರ ನಡವಳಿಕೆ ಆಗಿದೆ. ನಿಮ್ಮ ಚೌಕೀದಾರ ಜಾಗರೂಕನಾಗಿದ್ದಾನೆ. ನಾಮ್ದಾರ್ ಆಗಲೀ ಅವರ ನಿಷ್ಠಾವಂತರಾಗಲೀ ಯಾರನ್ನೂ ಬಿಡುವುದಿಲ್ಲ. ನಿಮ್ಮ ಚೌಕೀದಾರ್ ಮಹಿಳೆಯರ ಸಬಲೀಕರಣಕ್ಕೆ ಬದ್ಧನಾಗಿದ್ದಾನೆ. ದೇಶದಲ್ಲಿರುವ ಎಲ್ಲ ವಯೋಮಿತಿಯ ಹೆಣ್ಣುಮಕ್ಕಳು ಮತ್ತು ಸಹೋದರಿಯರ ರಕ್ಷಣೆ ಮತ್ತು ಶ್ರೇಯಾಭಿವೃದ್ದಿಗಾಗಿ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಿದೆ. ಅತ್ಯಾಚಾರದಂತಾ ಭೀಕರ ಕೃತ್ಯಗಳಿಗೆ ಮರಣದಂಡನೆ ನೀಡುತ್ತೇವೆ. ಈ ಚೌಕೀದಾರ್ ಮೇಲೆ ಭಾರತದ ಹೆಣ್ಣು ಮಕ್ಕಳಿಗೆ ಸಂಪೂರ್ಣ ನಂಬಿಕೆ ಇದೆ. ನಾವು ಮೊದಲ ಬಾರಿ ದೇಶದ ಗಡಿಭಾಗದಲ್ಲಿ ಮಹಿಳಾ ಸೇನಾಪಡೆಯನ್ನು ನಿಯೋಜಿಸುವ ನಿರ್ಧಾರ ಕೈಗೊಂಡಿದ್ದೇವೆ ಎಂದರು.