ಪಂಜಾಬ್ ಮೇಲೆ ಪರಾಕ್ರಮ ಮೆರೆದ ಎಬಿಡಿ: ಮ್ಯಾಚ್ ವಿನ್ನರ್ರಾಗಿ ಹೊರ ಹೊಮ್ಮಿದ ಮಿಸ್ಟರ್ 360

ವಿಶ್ವ ಕ್ರಿಕೆಟ್ನ ಮಿಸ್ಟರ್ 360 ಎಬಿಡಿ ವಿಲಿಯರ್ಸ್ ಅವರ ಬ್ಯಾಟಿಂಗ್ ನೋಡೋದೇ ಕಣ್ಣಿಗೆ ಒಂದು ಹಬ್ಬ. ಮೊನ್ನೆ ತವರು ಚಿನ್ನಸ್ವಾಮಿ ಅಂಗಳದಲ್ಲಿ ಪಂಜಾಬ್ ವಿರುದ್ಧ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಮ್ಯಾಚ್ ವಿನ್ನರ್ ಆಗಿ ಹೊರ ಹೊಮ್ಮಿದ್ರು.

ಮೂರನೇ ಕ್ರಮಾಂಕದಲ್ಲಿ ಬಂದ ಎಬಿಡಿ ವಿಲಿಯರ್ಸ್ ತಂಡ ಆಪಾದ್ಬಾಂಧವನಾದ್ರು. ಸುಮಾರು ಒಂದು ಗಂಟೆ 22 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ ಎಬಿಡಿ ತಮ್ಮ ಬ್ಯಾಟಿಂಗ್ ವೈಭವ ತೋರಿಸಿ ಅಭಿಮಾನಿಗಳಿಗೆ ರಸದೌತಣ ಬಡಿಸಿದ್ರು.

ಓಪನರ್ ಫಾರ್ಥಿವ್ ಪಟೇಲ್ ಜೊತೆ ಸಾಲಿಡ್ ಬ್ಯಾಟಿಂಗ್ ಮಾಡಿದ ಎಬಿಡಿ ಪಂಜಾಬ್ ಬೌಲರ್ಸ್ಗಳನ್ನ ಇನ್ನಿಲ್ಲದಂತೆ ಕಾಡಿದ್ರು. ಆದರೆ ಫಾರ್ಥಿವ್ ಪಟೇಲ್ ಔಟ್ಗುತ್ತಿದ್ದಂತೆ ಆರ್ಸಿಬಿ ಮತ್ತೆ ಸಂಕಷ್ಟದಲ್ಲಿ ಸಿಲುಕಿತು. ಮಿಡ್ಲ್ ಆರ್ಡರ್ನಲ್ಲಿ ಬಂದ ಮೊಯಿಸನ್ ಅಲಿ, ಆಕಾಶ್ದೀಪ್ನಾಥ್ ಕೂಡ ಕೈಕೊಟ್ರು.

ಸ್ಟೋಯ್ನಿಸ್ ಜೊತೆ ಎಬಿಡಿ ಜೊತೆ ಬೊಂಬಾಟ್ ಬ್ಯಾಟಿಂಗ್
81 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಸ್ಟೋಯ್ನಿಸ್ ಜೊತೆಗೂಡಿ ಎಬಿಡಿ ಬೊಂಬಾಟ್ ಬ್ಯಾಟಿಂಗ್ ಮಾಡಿದ್ರು. ಪಂಜಾಬ್ ಬೌಲರ್ಸ್ಗಳನ್ನ ಗೋಳೊಯ್ದುಕೊಂಡ ಈ ಜೋಡಿ ಮುರಿಯದ ಐದನೇ ವಿಕೆಟ್ಗೆ ಬರೋಬ್ಬರಿ 121 ರನ್ ಸೇರಿಸಿ ಪಂದ್ಯಕ್ಕೆ ದೊಡ್ಡ ತಿರುವು ಕೊಟ್ರು.

35 ಎಸೆತ ಎದುರಿಸಿದ ಎಬಿಡಿ ವಿಲಿಯರ್ಸ್ ಅರ್ಧ ಶತಕ ಬಾರಿಸಿ ಸಂಭ್ರಮಿಸಿದ್ರು. ನಂತರ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಎಬಿಡಿ ಬೌಂಡರಿ, ಸಿಕ್ಸರ್ಗಳ ಸುರಿಮಳೆ ಗೈದ್ರು. ರನ್ ಹೊಳೆಯನ್ನ ಹರಿಸಿದ ಎಬಿಡಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಬ್ಯಾಟಿಂಗ್ ಮಾಡಿ ಎದುರಾಳಿಗಳ ಪಾಲಿಗೆ ರಿಯಲ್ ವಿಲನ್ ಆದ್ರು.

44 ಎಸೆತಗಳನ್ನ ಎದುರಿಸಿದ ಎಬಿಡಿ ವಿಲಿಯರ್ಸ್ ಅಜೇಯ 82 ರನ್ ಕಲೆ ಹಾಕಿದ್ರು. ಇದರಲ್ಲಿ ಮೂರು ಬೌಂಡರಿ 7 ಸಿಕ್ಸರ್ ಬಾರಿಸಿ ಒಟ್ಟು 186. 36 ಸ್ಟ್ರೈಕ್ ರೇಟ್ ಪಡೆದ್ರು.

ಒಂದೇ ಕೈಯಲ್ಲಿ ಸಿಕ್ಸರ್ ಬಾರಿಸಿದ ಮಿಸ್ಟರ್ 360
ಮೊನ್ನೆಯ ಪಂದ್ಯದಲ್ಲಿ ಎಬಿಡಿ ಅಬ್ಬರ ಹೇಗಿತ್ತು ಅಂದ್ರೆ ಚೆಂಡು ಎಬಿಡಿಯ ಬ್ಯಾಟ್ಗೆ ತಾಗಿದ್ರೆ ಸಾಕು ಚೆಂಡು ಬೌಂಡರಿ, ಸಿಕ್ಸರ್ ಗಡಿ ದಾಟಿ ಹೋಗುತ್ತಿತ್ತು. ಅದರಲ್ಲೂ ಮೊಹ್ಮದ್ ಶಮಿಯ 19ನೇ ಓವರ್ನಲ್ಲಿ ಎಬಿಡಿ ಹ್ಯಾಟ್ರಿಕ್ ಸಿಕ್ಸರ್ಗಳನ್ನ ಬಾರಿಸಿದ್ರು. ಐದನೇ ಎಸೆತದಲ್ಲಿ ಪೇಸರ್ ಶಮಿ  ಎಸೆತವನ್ನ ಎಬಿಡಿ ವಿಲಿಯರ್ಸ್ ಸ್ಟೇಡಿಯಂನಿಂದ ಆಚೆಗೆ ಹೋಯ್ತು. ಇದು ಎಬಿಡಿಯ ತಾಕತ್ತು ಏನು ಅನ್ನೋದನ್ನ ತೋರಿಸ್ತಿತ್ತು.

ಒಟ್ನಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಎಬಿಡಿ ತಮ್ಮ ಹಳೆ ಬ್ಯಾಟಿಂಗ್ ವೈಭವವನ್ನ ತೋರಿಸಿ ಅಭಿಮಾಣಿಗಳ ಮನ ಗೆದ್ದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ