ಗೆಲುವಿನ ಸಂಭ್ರಮದ್ದಲ್ಲಿದ್ದ ಆರ್ಸಿಬಿಗೆ ಬ್ಯಾಡ್ ನ್ಯೂಸ್: ಐಪಿಎಲ್ನಿಂದ ಹೊರ ನಡೆದ ವೇಗಿ ಡೇಲ್ ಸ್ಟೇನ್

ಮೊನ್ನೆಯಷ್ಟೆ ತವರು ಅಂಗಳದಲ್ಲಿ ಆರ್ಸಿಬಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರೋಚಕ ಗೆಲುವು ಪಡೆಯಿತು. ಈ ಗೆಲುವಿನೊಂದಿಗೆ ಆರ್ಸಿಬಿ ಇನ್ನುಳಿದ ಮೂರು ಪಂದ್ಯಗಳನ್ನ ಗೆದ್ದು ಪ್ಲೇ ಆಫ್ ಕನಸು ಕಾಣುತ್ತಿದೆ. ಇದರ ನಡುವೆ ವಿರಾಟ್ ಪಡೆಗೆ ಶಾಕ್ ಒಂದು ಕಾದಿದೆ.

ಗೆಲುವಿನ ಸಂಭ್ರಮದಲ್ಲೆ ಆರ್ಸಿಬಿಗೆ ಶಾಕ್..!
ಹೌದು ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನ ಗೆದ್ದು ಹ್ಯಾಟ್ರಿಕ್ ಗೆಲುವು ದಾಖಲಿಸಿದ ಆರ್ಸಿಬಿಗೆ ಬಿಗ್ ಶಾಕಿಂಗ್ ನ್ಯೂಸ್ ಒಂದು ಸಿಡಿಲನಂತೆ ಬಂದು ಅಪ್ಪಳಿಸಿದೆ. ಗೆಲುವಿನ ಸಂಭ್ರಮದಲ್ಲಿದ್ದ ಆರ್ಸಿಬಿಗೆ ಈ ಶಾಕಿಂಗ್ ನ್ಯೂಸ್ ಕೇಳಿ ಅರಿಗಿಸಿಕೊಳ್ಳಲು ಆಗುತ್ತಿಲ್ಲ.

ಆರ್ಸಿಬಿಗೆ ಲಕ್ ತಂದಿದ್ದ ಡೇಲ್ ಸ್ಟೇನ್..!
ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಸತತ ಸೋಲುಗಳ ಕಾಣುವುದರ ಮೂಲಕ ಕಳಪೆ ತಂಡ ಎಂಬ ಹಣೆ ಪಟ್ಟಿ ಪಡೆದಿತ್ತು. ಆದ್ರೆ ಡೇಲ್ ಸ್ಟೇನ್ ರೂಪದಲ್ಲಿ ಅದೃಷ್ಟ ವಿರಾಟ್ ಕೊಹ್ಲಿ ಪಡೆಯ ಕೈ ಹಿಡಿದಿತ್ತು. ಡೇಲ್ ಆರ್ಸಿಬಿ ಪಾಳಯ ಸೇರಿಕೊಂಡಾಗಿನಿಂದ ಆರ್ಸಿಬಿ ಸತತ ಎರಡು ಪಂದ್ಯಗಳಲ್ಲಿ ಗೆಲುವಿನ ಬಾವುಟ ಹಾರಿಸಿದೆ. ಮೊದಲು ಕೆಕೆಆರ್ಗೆ ಸೋಲಿನ ರುಚಿ ತೋರಿಸಿದ ಚಾಲೆಂಜರ್ಸ್,ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1 ರನ್ನಿಂದ ರೋಚಕ ಗೆಲುವು ಸಾಧಿಸಿ ಸೇಡು ತೀರಿಸಿಕೊಂಡಿತು. ಈ ಎರಡೂ ಪಂದ್ಯಗಳಲ್ಲಿ, ಸ್ಟೇನ್ ರಾಕೆಟ್ ವೇಗದಲ್ಲಿ ಚೆಂಡನ್ನ ಎಸೆದು ಬ್ಯಾಟ್ಸ್ಮನ್ಗಳಿಗೆ ನಡುಕ ಹುಟ್ಟಿಸಿದ್ರು.ಜೊತೆಗೆ ಪವರ್ ಪ್ಲೇನಲ್ಲೇ ಇನ್ಫಾರ್ಮ್ ಬ್ಯಾಟ್ಸ್ಮನ್ಗಳಿಗೆ ಖೆಡ್ಡ ತೋಡಿದ್ರು.ಈ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.

ತಮ್ಮ ತಂಡದ ಬ್ಯಾಕ್ ಟು ಬ್ಯಾಕ್ ಗೆಲುವಿನಿಂದ ಫುಲ್ ಖುಷ್ ಆಗಿರೋ ಆರ್ಸಿಬಿ ಫ್ಯಾನ್ಸ್, ಸ್ಟೇನ್ ಅದೃಷ್ಟದಿಂದಾಗಿ ಆರ್ಸಿಬಿ ಈ ಬಾರಿ ಕಪ್ ಗೆಲ್ಲೋದು ಪಕ್ಕಾ ಅನ್ನುತ್ತಿದ್ರು.ವಿಶೇಷ ಅಂದ್ರೆ ಈವರೆಗು ಡೇಲ್ ಸ್ಟೈನ್ ಹಾಗು ಎಬಿ ಡಿವಿಲಿಯರ್ಸ್, ಇಬ್ಬರು ಟಿ20 ಲೀಗ್ಗಳಲ್ಲಿ ಒಂದೇ ತಂಡದ ಪರ ಆಡಿದಾಗಲೆಲ್ಲಾ ಆ ತಂಡ ಟ್ರೋಪಿ ಎತ್ತಿ ಹಿಡಿದಿದೆ. ಇದು ಕೂಡ ಆರ್ಸಿಬಿ ಫ್ಯಾನ್ಸ್ ನಂಬಿಕೆ ಹೆಚ್ಚಿಸಿದೆ.ಆದ್ರೆ ಟೂರ್ನಿಯಲ್ಲಿ ಆಡಿರುವ 10 ಪಂದ್ಯಗಳಲ್ಲಿ 3ರಲ್ಲಿ ಮಾತ್ರ ಜಯ ಕಂಡಿರುವ ಆರ್ಸಿಬಿಗೆ ಪ್ಲೇ ಆಫ್ ಪ್ರವೇಶಿಸಬೇಕಾದ್ರೆ ಪವಾಡವೇ ಆಗಬೇಕು.ಉಳಿದ 4 ಪಂದ್ಯಗಳಲ್ಲಿ ಅಮೋಘ ಜಯ ಸಾಧಿಸಿದ್ರು, ಉಳಿದ ತಂಡಗಳ ಸೋಲು-ಗೆಲುವಿನ ಮೇಲೆ ಆರ್ಸಿಬಿ ಪ್ಲೇ ಆಫ್ ನಿರ್ಧಾರವಾಗಲಿದೆ.

ಐಪಿಎಲ್ನಿಂದ ಹೊರ ನಡೆದ ಡೇಲ್ ಸ್ಟೇನ್
ಆರ್ಸಿಬಿಗೆ ಲಕ್ಕಿ ಪ್ಲೇಯರಾಗಿ ಬಂದಿದ್ದ ಸೌತ್ ಆಫ್ರಿಕಾ ಬೌಲರ್ ಡೇಲ್ ಸ್ಟೇನ್ ಐಪಿಎಲ್ನಿಂದ ಹೊರ ನಡೆದಿದ್ದಾರೆ. ಆಡಿದ ಎರಡೇ ಪಂದ್ಯಗಳಲ್ಲಿ ತಮ್ಮ ಬುಲೆಟ್ ಎಸೆತದ ಮೂಲಕ ಸ್ಟೇನ್ ಇಂಪ್ರೆಸ್ ಮಾಡಿದ್ರು. ಮೊನ್ನೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೇಲ್ ಸ್ಟೇನ್ ಆಡಿರಲಿಲ್ಲ. ಮ್ಯಾಚ್ ವಿನ್ನರ್ ಆಗಿದ್ದ ಡೇಲ್ ಸ್ಟೇನ್ ಭುಜದ ನೋವಿಗೆ ಗುರಿಯಾಗಿದ್ದಾರೆ. ಈ ಶಾಕಿಂಗ್ ಸುದ್ದಿ ಕ್ಯಾಪ್ಟನ್ ಕೊಹ್ಲಿಯನ್ನ ಕಂಗಾಲು ಆಗುವಂತೆ ಮಾಡಿದೆ.

ಡೇಲ್ ಸ್ಟೇನ್ಗೆ ಭುಜದ ನೋವು
ಭುಜದ ನೋವಿನಿಂದ ಬಳಲುತ್ತಿರುವುದರಿಂದ ಡೇಲ್ ಸ್ಟೇನ್ಗೆ ವಿಶ್ರಾಂತಿ ನೀಡಲಾಗಿದೆ. ಈ ಕಾರಣಕ್ಕಾಗಿ ಡೇಲ್ ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಗೆ ಲಭ್ಯವಿರುವುದಿಲ್ಲ. ಡೇಲ್ ಉಪಸ್ಥಿತಿ ತಂಡಕ್ಕೆ ಸಹಾಯವಾಗಿತ್ತು. ಈ ಪ್ರೇರಣೆಗೆ ನಾವು ಧನ್ಯವಾದಗಳನ್ನ ಹೇಳುತ್ತೇವೆ. ಡೇಲ್ ಅವರ ಎನರ್ಜಿಯನ್ನ ತಂಡ ಮಿಸ್ ಮಾಡಿಕೊಳ್ಳಲಿದ್ದು ಬೇಗ ಚೇತರಿಸಿಕೊಂಡು ಮುಂಬರುವ ಎಲ್ಲ ಟೂರ್ನಿಗಳಲ್ಲಿ ಯಶಸ್ಸು ಕಾಣಲಿ. ಡೇಲ್ ಸ್ಟೇನ್ ಭುಜದ ನೋವಿನಿಂದ ಹೊರ ನಡೆದಿರುವ ಕುರಿತು ಆರ್ಸಿಬಿ ಫ್ರಾಂಚೈಸಿ ಮಾಹಿತಿ ನೀಡಿದೆ.

ಆರ್ಸಿಬಿಗೆ ತಲೆ ನೋವು ಆದ ಸ್ಟೇನ್ ಅನುಪಸ್ಥಿತಿ
ಸ್ಟೇನ್ ಅನುಪಸ್ಥಿತಿ ಆರ್ಸಿಬಿಗೆ ತಲೆ ನೋವು ತಂಡಿದೆ. ಈ ಬಾರಿಯ ಸೀಸನ್ನಲ್ಲಿ ಆರ್ಸಿಬಿ ಸೋಲಲು ಕಾರಣವಾಗಿದ್ದು ತಂಡದ ಕಳೆಪೆ ಬೌಲಿಂಗ್. ಆದರೆ ಸ್ಟೇನ್ ಬಂದ ಮೇಲೆ ಆರ್ಸಿಬಿ ಕ್ಯಾಂಪ್ನಲ್ಲಿ ಹೊಸ ಹುಮ್ಮಸ್ಸು ಬಂದಿತ್ತು. ತಂಡದ ಬೌಲರ್ಗಳಗೂ ಚೆನ್ನಾಗಿ ಬೌಲ್ ಮಾಡಲು ಪ್ರೇರಣೆಯಾಗಿದ್ರು. ಇದೀಗ ಸ್ಟೇನ್ ಅನುಪಸ್ಥಿತಿಯಲ್ಲಿ ಆರ್ಸಿಬಿ ಬೌಲರ್ಸ್ಗಳು ಆಡಬೇಕಿದೆ. ಈ ಚಾಲೆಂಜ್ನ್ನ ಆರ್ಸಿಬಿ ಹೇಗೆ ಸ್ವೀಕರಿಸುತ್ತಾರೆ ಅನ್ನೊದನ್ನ ಕಾದು ನೋಡಬೇಕಿದೆ.

ಒಟ್ನಲ್ಲಿ ಸ್ಟೇನ್ ಐಪಿಎಲ್ನಿಂದ ಹೊರ ನಡೆದಿರೋದು ಆರ್ಸಿಬಿಗೆ ದೊಡ್ಡ ಹೊಡೆತ ನೀಡಿದೆ. ಈ ಸವಾಲನ್ನ ಕ್ಯಾಪ್ಟನ್ ಕೊಹ್ಲಿಗೆ ಸ್ವೀಕರಿಸಿ ಗೆಲ್ಲುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ