ಇಂದು ಸಿಎಸ್ಕೆ-ಮುಂಬೈ ನಡುವೆ ಬಿಗ್ ಫೈಟ್: ಸೇಡಿನ ಸಮರಕ್ಕೆ ಚೆಪಾಕ್ ಕ್ರೀಡಾಂಗಣ ಸಜ್ಜು

ಐಪಿಎಲ್ 12ರ ಸೀಸನ್ ಲೀಗ್ ಪಂದ್ಯದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮತ್ತೆ ಮುಖಾಮುಖಿಯಾಗುತ್ತಿವೆ.

ಚೆನ್ನೈನ ಪಿ.ಚಿದಂಬರಂ ಅಂಗಳದಲ್ಲಿ ಅಗ್ರಸ್ಥಾನದಲ್ಲಿರುವ ಚೆನ್ನೈಗೆ ಮತ್ತೆ ಸೋಲಿನ ರುಚಿ ತೋರಿಸಲು ಮುಂಬೈ ಸಜ್ಜಾಗಿದೆ. ಮುಂಬೈ ವಿರುದ್ಧದ ಸೋಲಿನ ಮುಖಭಂಗಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಚೆನ್ನೈ ಯೋಜನೆ ರೂಪಿಸಿದೆ. ತವರಿನ ಅಂಗಳದಲ್ಲಿ ಪಂದ್ಯ ನಡೆಯುತ್ತಿರೋದ್ರಿಂದ ಚೆನ್ನೈ ಗೆಲ್ಲುವ ಫೇವ್ರೇಟ್ ಆಗಿದ್ರು, ಮುಂಬೈ ವಿರುದ್ಧ ಗೆಲುವು ಅಷ್ಟು ಸುಲಭವಲ್ಲ..

ಮುಂಬೈ ವಿರುದ್ಧ ಸಿಎಸ್ಕೆಗೆ ಸೇಡಿನ ಸಮರ..!
ಹಿಂದಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಗೆದ್ದು ಬೀಗಿದ್ದ ಸಿಎಸ್ಕೆ, ಇಂದು ಮುಂಬೈ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಹೊಂಚು ಹಾಕಿದೆ. ಇನ್ನೂ ಹೈದ್ರಾಬಾದನ್ ಬಲಿಷ್ಠ ಬೌಲಿಂಗ್ ಪಡೆ ವಿರುದ್ಧ ಅಬ್ಬರಿಸೋ ಮೂಲಕ ಶೇನ್ ವಾಟ್ಸನ್ ಫಾರ್ಮ್ಗೆ ಮರಳಿದ್ದಾರೆ. ಹೀಗಾಗಿಯೇ ಎಂ.ಎಸ್.ಧೋನಿಯ ಚಿಂತೆ ದೂರವಾಗಿದೆ. ಹೈದ್ರಾಬಾದ್ ವಿರುದ್ಧ ಫ್ಲಾಪ್ ಆಗಿದ್ದ ಓಪನರ್ ಡುಪ್ಲಿಸಿಸ್ ಮತ್ತೆ ಅಬ್ಬರಿಸಿಬೇಕಿದೆ. ಸುರೇಶ್ ರೈನಾ, ಅಂಬಾಟಿ ರಾಯುಡು, ಧೋನಿ, ಡ್ವೇನ್ ಬ್ರಾವೋ ರನ್ ಹೊಳೆ ಹರಿಸಿದ್ರೆ ಪ್ರತೀಕಾರ ತೀರಿಸಿಕೊಳ್ಳುವುದರಲ್ಲಿ ಯಾವ್ದೇ ಅನುಮಾನ ಇಲ್ಲ.

ಇನ್ನೂ ತಂಡದಲ್ಲಿ ದೀಪಕ್ ಚಹರ್ ದಿನೇ ದಿನೇ ಮತ್ತಷ್ಟು ಅಪಾಯಕಾರಿ ಬೌಲರ್ ಆಗಿ ರೂಪುಗೊಳ್ಳುತ್ತಿದ್ದು, ತವರಿನಲ್ಲಿ ಎದುರಾಳಿಗಳಿಗೆ ಸವಾಲಾಗಿದ್ದಾರೆ.

ಸ್ಲಾಗ್ ಓವರ್ ಸ್ಪೆಷಲಿಸ್ಟ್ ಬ್ರಾವೋ ತಮ್ಮ ಡಿಫರೆಂಟ್ ಎಸೆತಗಳಿಂದಲೇ ಬ್ಯಾಟ್ಸ್ಮನ್ಗಳ ರನ್ ದಾಹಕ್ಕೆ ಕಡಿವಾಣ ಹಾಕುವುದರ ಜೊತೆಗೆ ವಿಕೆಟ್ ಕೀಳೋದ್ರಲ್ಲೂ ನಿಸ್ಸೀಮರು. ರವೀಂದ್ರ ಜಡೇಜಾ, ಇಮ್ರಾನ್ ತಾಹಿರ್, ಹರ್ಭಜನ್ ಸ್ಪಿನ್ ಅಸ್ತ್ರಗಳಗಿದ್ದು ಎದುರಾಳಿ ಬ್ಯಾಟ್ಸ್ಮನ್ಗಳಿಗೆ ಕಬ್ಬಿಣದ ಕಡಲೇ ಆಗೋದು ಅಂತು ಪಕ್ಕ..

ಪ್ಲೇ ಆಫ್ ಮೇಲೆ ಮುಂಬೈ ಇಂಡಿಯನ್ಸ್ ಕಣ್ಣು..!
ಮೊನ್ನೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಖಭಂಗ ಅನುಭವಿಸಿದ್ದ ಅಂಬಾನಿ ಬ್ರಿಗೇಡರ್ಸ್, ಇಂದು ಸಿಎಸ್ಕೆ ವಿರುದ್ಧ ಗೆಲುವು ದಾಖಲಿಸುವ ಆತ್ಮವಿಶ್ವಾಸದಿಂದ ಕಣಕ್ಕಿಳಿಯುತ್ತಿದ್ದಾರೆ. ಪ್ಲೇ ಆಫ್ ದೃಷ್ಟಿಯಿಂದ ಮುಂಬೈ ಇಂಡಿಯನ್ಸ್ಗೆ ಇದು ಮಹತ್ವದ ಪಂದ್ಯವಾಗಿದೆ. ಹೀಗಾಗಿಯೇ ಸಿಎಸ್ಕೆ ವಿರುದ್ಧ ಗೆಲುವು ಸಾಧಿಸೋಕೆ ಮುಂಬೈ ಹೊಸ ಯೋಜನೆ ರೂಪಿಸಿದೆ. ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಕ್ವಿಂಟನ್ ಡಿಕಾಕ್, ಇಂದಿನ ಪಂದ್ಯದಲ್ಲೂ ಅದೇ ಲಯ ಕಾಯ್ದುಕೊಳ್ಳಬೇಕಿದೆ. ನಾಯಕ ರೋಹಿತ್ ಶರ್ಮಾ, ಸೂರ್ಯ ಕುಮಾರ್, ಕೃನಾಲ್ ಪಾಂಡ್ಯಾ ಜವಾಬ್ದಾರಿಯುತ ಆಟ ಪ್ರದರ್ಶಿಸಬೇಕಿದೆ. ಮುಂಬೈ ಬಿಗ್ ಹಿಟ್ಟರ್ಸ್ ಹಾರ್ದಿಕ್ ಪಾಂಡ್ಯ ಸ್ಲಾಗ್ ಓವರ್ಸ್ನಲ್ಲಿ ಮತ್ತೊಮ್ಮೆ ಸಿಡಿದ್ರೆ ಸಿಎಸ್ಕೆ ಗೆಲುವಿಗೆ ಕಂಟಕವಾಗೋದು ಗ್ಯಾರೆಂಟಿ. ಇನ್ನೂ ಪಂಜಾಬ್ ವಿರುದ್ಧ ಬ್ಯಾಟಿಂಗ್ ವೈಭವ ಮೆರೆದಿದ್ದ ಪೋಲಾರ್ಡ್ ಮತ್ತೆ ಅಂಥಹ ಇನ್ನಿಂಗ್ಸ್ ಆಡಿದ್ರೆ, ಮುಂಬೈ ಗೆಲ್ಲೋದ್ರಲ್ಲಿ ಯಾವ್ದೇ ಅನುಮಾನ ಇಲ್ಲ..

ಮುಂಬೈ ಇಂಡಿಯನ್ಸ್ ಬೌಲಿಂಗ್ ಡಿಪಾರ್ಟ್ಮೆಂಟ್ ನಿರೀಕ್ಷಿತಾ ಮಟ್ಟದ ಪ್ರದರ್ಶನ ಬಂದಿಲ್ಲ. ಜಸ್ಪೀತ್ ಬೂಮ್ರಾ, ಲಸಿತ್ ಮಲಿಂಗಾ, ಬೆನ್ ಕಟ್ಟಿಂಗ್ ಮುಂಬೈ ತಂಡದ ಬೌಲಿಂಗ್ ಸ್ಟ್ರೆಂಥ್ ಆಗಿದ್ದಾರೆ. ಆಲ್ರೌಂಡರ್ ಕೃನಾಲ್ ಪಾಂಡ್ಯಾ, ಹಾರ್ದಿಕ್ ಪಾಂಡ್ಯಾ ತಂಡ ಸಂಕಷ್ಟದಲ್ಲಿದ್ದಾಗ ವಿಕೆಟ್ ಕೀಳೋ ಚಾಕಚಕ್ಯತೆ ಹೊಂದಿದ್ದಾರೆ. ಯುವ ಸ್ಪಿನ್ನರ್ ರಾಹುಲ್ ಚಹರ್ ತಮ್ಮ ಕೈಚಳಕ ತೋರಿಸೋಕೆ ಉತ್ಸುಕರಾಗಿದ್ದಾರೆ.

ಚೆನ್ನೈ ವಿರುದ್ಧ ಕಣಕ್ಕಿಳಿಯಲಿದ್ದಾರಾ ಬ್ಯುರನ್ ಹೆಂಡ್ರಿಕ್ಸ್..?
ಮುಂಬೈ ಇಂಡಿಯನ್ಸ್ ತಂಡದ ಯುವ ವೇಗಿ ಅಲ್ಜಾರಿ ಜೋಸೆಫ್ ಗಾಯದ ಸಮಸ್ಯೆಯಿಂದ IPಐನಿಂದ ಹೊರ ಬಿದ್ದಿದ್ದಾರೆ. ಅಲ್ಜಾರಿ ಸ್ಥಾನವನ್ನು ಸೌತ್ ಆಫ್ರಿಕಾದ ಬ್ಯುರನ್ ಹೆಂಡ್ರಿಕ್ಸ್ ತುಂಬಲಿದ್ದಾರೆ. ತಮ್ಮ ಕರಾರುವಾಕ್ ದಾಳಿ ಮೂಲಕ ಎದುರಾಳಿ ಬ್ಯಾಟ್ಸ್ಮನ್ಗಳನ್ನು ನಡುಗಿಸಬಲ್ಲ ಹೆಂಡ್ರಿಕ್ಸ್ ಇದುವರೆಗೆ 7 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 9 ವಿಕೆಟ್ಗಳನ್ನು ಕಬಳಿಸಿದ್ದರು. ಇದೀಗ ಮುಂಬೈ ತಂಡವನ್ನು ಕೂಡಿಕೊಂಡಿರುವ ಹೆಂಡ್ರಿಕ್ಸ್, ಈ ಬಾರಿ ಐಪಿಎಲ್ನಲ್ಲಿ ಜಾದು ಮಾಡುವ ತವಕದಲ್ಲಿದ್ದಾರೆ.

ಒಟ್ನಲ್ಲಿ ಇಂದಿನ ಸೇಡಿನ ಸಮರದಲ್ಲಿ ಯಾರಿಗೆ ವಿಜಯಲಕ್ಷ್ಮೀ ಒಲಿಯುತ್ತಾಳೆ ಎಂದು ಕಾದು ನೋಡಬೇಕಿದೆ..

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ