ಟಿವಿ ಟಾಕ್ ಶೋನಲ್ಲಿ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟೀಂಇಂಡಿಯಾದ ಡ್ಯಾಶಿಂಗ್ ಓಪನರ್ ಕೆ.ಎಲ್. ರಾಹುಲ್ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸೇಫ್ ಆಗಿದ್ದಾರೆ. ದಂಡ ವಿಧಿಸುವ ಮೂಲಕ ಈ ವಿಚಾರವನ್ನು ಅಂತಿಮಗೊಳಿಸಲಾಗಿದ್ದು, ನಿಷೇಧ ತೂಗುಗತ್ತಿಯಿಂದ ಇಬ್ಬರು ಆಟಗಾರರು ಪಾರಾಗಿದ್ದು ಕ್ಯಾಪ್ಟನ್ ಕೊಹ್ಲಿ ನಿಟ್ಟುಸಿರು ಬಿಟ್ಟಿದ್ದಾರೆ.
ಕಾಫಿ ವಿತ್ ಕರಣ್ ಟಾಕ್ ಶೋ ಕಾಯರ್ಕ್ರಮದಲ್ಲಿ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್.ರಾಹುಲ್ ಭಾರೀ ವಿವಾದ ಎಬ್ಬಿಸಿದ್ರು. ಟಾಕ್ ಶೋನಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಕಾಮುಕತೆ ಕಕ್ಕಿದ್ದ ಈ ಇಬ್ಬರು ಆಟಗಾರರ ವಿರುದ್ಧ ದೇಶವ್ಯಾಪಿ ಖಂಡನೆ ವ್ಯಕ್ತವಾಗಿದ್ದವು. ಈ ಇಬ್ಬರು ಆಟಗಾರರಿಗೆ ತಕ್ಕ ಶಕ್ಷೆ ನೀಡಲೇ ಬೇಕೆಂದು ಕ್ರಿಕೆಟ್ ಅಭಿಮಾನಿಗಳು ತಮ್ಮ ಆಕ್ರೋಶವನ್ನ ಹೊರ ಹಾಕಿದ್ರು.
ಟಾಕ್ ಶೋನಲ್ಲಿ ರಾಹುಲ್, ಪಾಂಡ್ಯ ಹೇಳಿದ್ದೇನು ?
ಬಾಲಿವುಡ್‍ನ ಕರಣ್ ಜೋಹರ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಭಾಗವಹಿಸಿದ್ದರು. ಈ ಕಾರ್ಯಕ್ರಮ ಜನವರಿಯಲ್ಲಿ ಪ್ರಸಾರಗೊಂಡಿತ್ತು. ಈ ವೇಳೆ ಕೇಳಿದ ಪ್ರಶ್ನೆಗಳಿಗೆ ಮನಸ್ಸಿಗೆ ಬಂದಂತೆ ಹಿಂದೆ ಮುಂದೆ ನೋಡದ ಇಬ್ಬರು ಆಟಗಾರರು ಉತ್ತರಿಸಿದ್ದರು. ಸಚಿನ್ ಹಾಗೂ ಕೊಹ್ಲಿ ಇಬ್ಬರಲ್ಲಿ ಯಾರು ಬೆಟರ್ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಹಾರ್ದಿಕ್ ಹಾಗೂ ಕೆಎಲ್ ರಾಹುಲ್ ಹಿಂದು ಮುಂದು ನೋಡದೇ ಕೊಹ್ಲಿ ಎಂದಿದ್ದರು.
ಅಲ್ಲದೇ ಮಹಿಳೆಯರು ಹಾಗೂ ಸೆಕ್ಸ್ ಜೀವನದ ಬಗ್ಗೆ ಕೇಳಿದ ಪ್ರಶ್ನೆಯ ಬಗ್ಗೆ ಕ್ಷಣ ಕಾಲ ಕೂಡ ಯೋಚಿಸದೇ ಹಾರ್ದಿಕ್ ಉತ್ತರ ಕೊಟ್ರು.
ಇದರ ಪರಿಣಾಮವೇ ಬಿಸಿಸಿಐ ರಾಹುಲ್ ಮತ್ತು ಪಾಂಡ್ಯಗೆ ಅಮಾನತು ಶಿಕ್ಷೆ ನೀಡಿ ಪ್ರಕರಣದ ತನಿಖೆಗೆ ಆದೇಶಿಸಿತ್ತು. ಸುಪ್ರೀಂ ಕೋರ್ಟ್ ನೇಮಿತ Cricket Of Administration CoA ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡು ನಿವೃತ್ತ ನ್ಯಾಯಾಧೀಶರ ಪ್ರಕರಣವನ್ನ ಒಪ್ಪಿಸಿತ್ತು. ಇದರ ಮಧ್ಯ ಬಿಸಿಸಿಐ ರಾಹುಲ್ ಮತ್ತು ಹಾರ್ದಿಕ್ ಮೇಲಿದ್ದ ಅಮಾನತು ಶಿಕ್ಷೆಯನ್ನ ಹಿಂಪಡೆದಿತ್ತು. ಆದರೆ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದ Cricket Of Administration CoA ನಿವೃತ್ತ ನ್ಯಾಯಾಧೀಶ ಡಿಕೆ ಜೈನ್ಗೆ ಒಪ್ಪಿಸಿತ್ತು.
ರಾಹುಲ್, ಹಾರ್ದಿಕ್ಗೆ ತಲಾ 20 ಲಕ್ಷ ರೂಪಾಯಿ ದಂಡ
ಟಾಕ್ ಶೋನಲ್ಲಿ ವಿವಾದಾತ್ಮಕ ಹೇಳಿಕೆ ಕೊಟ್ಟ ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯಗೆ ಸುಪ್ರಿಂ ಕೋರ್ಟ್ ನೇಮಿಸಿದ ನ್ಯಾಯಾಧೀಶ ಡಿಕೆ ಜೈನ್ಗೆ ವಿಶೇಷ ರೀತಿಯಲ್ಲಿ ದಂಡ ವಿಧಿಸಿದ್ದಾರೆ.ಟಾಕ್ ಶೋನಲ್ಲಿ ವಿವಾದಾತ್ಮಕ ಹೇಳಿಕೆ ಕುರಿತಂತೆ ಕೆಲವು ದಿನಗಳ ಹಿಂದೆ ರಾಹುಲ್, ಪಾಂಡ್ಯ ನ್ಯಾಯಮೂರ್ತಿಗಳ ಮುಂದೆ ವಿಚಾರಣೆಗೆ ಹಾಜರಾಗಿ ವಿವರಣೆ ಕೊಟ್ಟಿದ್ರು. ಇಬ್ಬರ ಹೇಳಿಕೆಗಳು ನಿಯಮ 41 ಸಿ ಅನ್ವಯ ಉಲ್ಲಂಘನೆ ಆಗಿದ್ದು, ಇಬ್ಬರಿಗೂ ತಲಾ 20 ಲಕ್ಷ ರೂ.ಗಳನ್ನು ದಂಡವಾಗಿ ವಿಧಿಸಲಾಗಿದ್ದು, ಇದರಲ್ಲಿ 10 ಲಕ್ಷ ರೂ.ಗಳನ್ನು ಕರ್ತವ್ಯ ನಿರ್ವಹಿಸುವ ವೇಳೆ ಹುತಾತ್ಮರಾದ ಯೋಧರ ಪತ್ನಿಯರಿಗೆ ತಲಾ 1 ಲಕ್ಷ ರೂ.ಗಳನ್ನು ನೀಡುವಂತೆ ತಿಳಿಸಿದೆ. ಉಳಿದ ಹಣ ಸಮಿತಿ ರಚಿಸಿರುವ ಅಂಧರ ಕ್ರಿಕೆಟ್ ಸಂಸ್ಥೆಗೆ ದಾನ ನೀಡಲು ತಿಳಿಸಿದೆ. ಅಲ್ಲದೇ 4 ವಾರಗಳ ಒಳಗೆ ದಂಡ ಪಾವತಿ ಮಾಡಬೇಕೆಂದು ಸೂಚನೆ ಕೊಟ್ಟಿದೆ.
ಒಂದೊಮ್ಮೆ ನಿಗದಿತ ಸಮಯದೊಳಗೆ ಆಟಗಾರರು ಹಣ ನೀಡಲು ವಿಫಲವಾದಲ್ಲಿ ಈ ಮೊತ್ತವನ್ನು ಬಿಸಿಸಿಐ ಅವರ ಪಂದ್ಯದ ಶುಲ್ಕದಲ್ಲಿ ಕಡಿತಗೊಳಿಸುವಂತೆ ತಿಳಿಸಲಾಗಿದೆ. ಆಟಗಾರರು ಈಗಾಗಲೇ ಬಿಸಿಸಿಐ ನಿಷೇಧ ಮಾಡಿ ಆಸ್ಟ್ರೇಲಿಯಾ ಟೂರ್ನಿಯಿಂದ ಹಿಂದಿರುಗಿದ ಪರಿಣಾಮ ಸುಮಾರು 30 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಇದನ್ನು ವಿಚಾರಣೆ ವೇಳೆ ಪರಿಗಣಿಸಲಾಗಿದೆ. ದೇಶದಲ್ಲಿ ಕ್ರೀಡಾಪಟುಗಳನ್ನು ರೋಲ್ ಮಾಡೆಲ್ ಗಳಾಗಿ ಪರಿಗಣಿಸಲಾಗುತ್ತದೆ. ಅವರ ಘನತೆಗೆ ತಕ್ಕಂತೆ ಅವರು ವರ್ತಿಸುವುದು ಅಗತ್ಯವಾಗಿದೆ ಎಂದು ಸಮಿತಿ ಅಭಿಪ್ರಾಯ ಪಟ್ಟಿದೆ.
ಕ್ರಮಗಳನ್ನ ಕೈಗೊಳ್ಳಲ್ಲ
ಕೆ.ಎಲ್. ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಮಹಿಳೆಯರ ವಿರುದ್ಧ ಮಾತನಾಡಿದಕ್ಕೆ ಈಗಾಗಲೇ ಕ್ಷಮೆಯಾಚಿಸಿದ್ದಾರೆ. ತಾತ್ಕಲಿಕ ಅಮಾನತು ಶಿಕ್ಷೆ ಅನುಭವಿಸಿರುವುದರಿಂದ ವಿರುದ್ಧ ಇವರ ಯಾವುದೇ ಕ್ರಮಗಳನ್ನ ಕೈಗೊಳ್ಳುವುದಿಲ್ಲ. ಜಸ್ಟೀಸ್ ಡಿ.ಕೆ.ಜೈನ್.
ಭಾರೀ ಶಿಕ್ಷೆಯಿಂದ ಪಾರಾದ ರಾಹುಲ್, ಬರೋಡ ಸ್ಟಾರ್
ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿದ ಪ್ರಕರಣದಲ್ಲಿ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಭಾರೀ ಶಿಕ್ಷೆಯಿಂದ ಪಾರಾಗಿದ್ದಾರೆ. ಪ್ರಕರಣ ತೀರ್ಪಿಗೂ ಮುನ್ನ ಈ ಇಬ್ಬರು ಆಟಗಾರರು ಅಮಾನತು ಶಿಕ್ಷಗೆ ಗುರಿಯಾಗಬಹುದು. ವಿಶ್ವಕಪ್ನಲ್ಲಿ ಇವರಿಬ್ಬರು ಆಡೋದು ಅನುಮಾನ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಈ ಇಬ್ಬರು ಆಟಗಾರರು ಮುಂಬರುವ ವಿಶ್ವಕಪ್ನಲ್ಲಿ ಆಡಬಹುದಾಗಿದೆ.
ಒಟ್ಟಿನಲ್ಲಿ ರಾಹುಲ್ ಮತ್ತು ಹಾರ್ದಿಕ್ ಮಾಡಿದ ತಪ್ಪಿನಿಂದ ಪಾಠ ಕಲಿತು ಜಂಟಲ್ಮನ್ ಗೇಮ್ನಲ್ಲಿ ಜಂಟಲ್ಮನ್ನಂತೆ ವರ್ತಿಸಿ ವಿಶ್ವಕಪ್ ಚೆನ್ನಾಗಿ ಆಡಲಿ ಎಂಬುದೇ ಎಲ್ಲರ ಆಶಯ