ರಾಜಸ್ಥಾನ ಪ್ಲೇ ಆಫ್ ಆಸೆ ಜೀವಂತ: ನಾಯಕನ ಆಟವಾಡಿದ ಸ್ಟೀವ್ ಸ್ಮಿತ್

ನಿನ್ನೆ ಆತಿಥೇಯ ರಾಜಸ್ತಾನ ಮತ್ತು ಮುಂಬೈ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಸ್ವೀವ್ ಸ್ಮಿತ್ ಪಡೆ 5 ವಿಕೆಟ್ಗಳ ರೋಚಕ ಗೆಲುವು ಪಡೆಯಿತು. ಹಾಗಾದ್ರೆ ಬನ್ನಿ ಜೈಪುರದ ಸವಾಯಿ ಅಂಗಳದಲ್ಲಿ ಸ್ಮಿತ್ ಪಡೆ ಹೇಗೆ ಗೆಲುವಿನ ಕೇಕೆ ಹಾಕಿತು ಅನ್ನೋದನ್ನ ನೋಡೋಣ ಬನ್ನಿ.

ಮುಂಬೈಗೆ ಮೊದಲ ಶಾಕ್ ಕೊಟ್ಟ ಗೋಪಾಲ್
ಟಾಸ್ ಸೋತು ಮೊಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಮುಂಬೈ ತಂಡಕ್ಕೆ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಡಿಕಾಕ್ ಆeಛಿeಟಿಣ ಓಪನಿಂಗ್ ಕೊಡುವಲ್ಲಿ ಎಡವಿದ್ರು. ಐದು ರನ್ ಗಳಿಸಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ ಕನ್ನಡಿಗ ಶ್ರೇಯಸ್ ಗೋಪಾಲ್ ಎಸೆತದಲ್ಲಿ ಕಾಟ್ ಅಂಡ್ ಅಂಡ್ ಬೌಲ್ಡ್ ಆದ್ರು.

ಆರಂಭಿಕ ಆಘಾತ ಅನುಭವಿಸಿದ ಮುಂಬೈ ತಂಡಕ್ಕೆ ನಂ.3ಯಲ್ಲಿ ಬಂದ ಸೂರ್ಯ ಕುಮಾರ್ ಯಾದವ್ ಓಪನರ್ ಡಿ;ಕಾಕ್ಗೆ ಒಳ್ಳೆ ಸಾಥ್ ಕೊಟ್ರು. ರಾಜಸ್ಥಾನ ಬೌಲರ್ಗಳನ್ನ ಮನಬಂದಂತೆ ದಂಡಿಸಿದ ಈ ಜೋಡಿ ಎರಡನೇ ವಿಕೆಟ್ ಗೆ ಬರೋಬ್ಬರಿ 97 ರನ್ಗಳ ಜೊತೆಯಾಟ ನೀಡಿ ಬಿಗ್ ಇನ್ನಿಂಗ್ಸ್ ಕೊಡುವ ಸೂಚನೆ ಕೊಟ್ರು.

ಅರ್ಧ ಶತಕ ಬಾರಿಸಿ ಅಬ್ಬರಿಸಿದ ಡಿ’ಕಾಕ್
ಆದರೆ 34 ರನ್ಗಳಿಸಿದ್ದ ಸೂರ್ಯ ಕುಮಾರ್ ಯಾದವ್ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಎಸೆತದಲ್ಲಿ ಧವಳ್ ಕುಲಕರ್ಣಿಗೆ ಕ್ಯಾಚ್ ಕೊಟ್ಟು ಹೊರ ನಡೆದ್ರು.

ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆ ಬ್ಯಾಟಿಂಗ್ ಮುಂದುವರೆಸಿದ ಡಿ’ಕಾಕ್ 34 ಎಸೆತದಲ್ಲಿ ಅರ್ಧ ಶತಕ ಬಾರಿಸಿ ಸಂಭ್ರಮಸಿದ್ರು. ಆದರೆ ಈ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ. 65 ರನ್ ಗಳಿಸಿದ್ದ ಡಿಕಾಕ್ಗೆ ಶ್ರೇಯಸ್ ಗೋಪಾಲ್ ಪೆವಿಲಿಯನ್ ದಾರಿ ತೋರಿಸಿದ್ರು.

ದಿಢೀರ್ ಕುಸಿತ ಕಂಡ ಅಂಬಾನಿ ಬ್ರಿಗೇಡಿಯರ್ಸ್
ಡಿಕಾಕ್ ಔಟ್ ಆಗುತ್ತಿದ್ದಂತೆ ಮುಂಬೈ ದಿಢೀರ್ ಕುಸಿತ ಕಂಡಿತು. ಮಿಡ್ಲ್ ಆರ್ಡರ್ನಲ್ಲಿ ಬಂದ ಹಾರ್ದಿಕ್ ಪಾಂಡ್ಯ 23 , ಸ್ಫೋಟಕ ಬ್ಯಾಟ್ಸ ಮನ್ ಕಿರಾನ್ ಪೋಲಾರ್ಡ್ 10 , ಬೆನ್ ಕಟ್ಟಿಂಗ್ 13 ರನ್ ಕಲೆ ಹಾಕಿದ್ರು. ಮುಂಬೈ ತಂಡ ನಿಗದಿತ ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು.

ರಾಜಸ್ಥಾನಕ್ಕೆ ಶಾಕ್ ಕೊಟ್ಟ ರಾಹುಲ್ ಚಹರ್
162 ರನ್ಗಳ ಸವಾಲಿನ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ ತಂಡ ಕೂಡ ಆರಂಭಿಕ ಆಘಾತ ಅನುಭವಿಸಿತು. ನಾಲ್ಕನೆ ಓವರ್ನಲ್ಲಿ ದಾಳಿಗಿಳಿದ ರಾಹುಲ್ ಚಹರ್ 12 ರನ್ ಗಳಿಸಿದ್ದ ಓಪನರ್ ಅಜಿಂಕ್ಯ ರಹಾನೆಗೆ ಪೆವಿಲಿಯನ್ ದಾರಿ ತೋರಿಸಿದ್ರು.

ಮೂರನೇ ಸ್ಲಾಟ್ನಲ್ಲಿ ಬಂದ ಕ್ಯಾಪ್ಟನ್ ಸ್ಟೀವ್ ಸ್ಮಿತ್ ಸ್ಯಾಮ್ಸನ್ ಜೊತೆಗೂಡಿ ಮುಂಬೈ ಬೌಲರ್ಸ್ಗಳನ್ನ ಮನಬಂದಂತೆ ದಂಡಿಸಿ ತಂಡವನ್ನ ಆರಂಭಿಕ ಆಘಾತದಿಂದ ಪಾರು ಮಾಡಿದ್ರು. ಆದರೆ 8ನೇ ಓವರ್ನಲ್ಲಿ ಮತ್ತೆ ದಾಳಿಗಿಳಿದ ರಾಹುಲ್ ಚಹರ್ 35 ರನ್ ಗಳಿಸಿದ್ದ ಸ್ಯಾಮ್ಸನ್ ಮತ್ತು ಬೆನ್ಸ್ಟೋಕ್ಸ್ಗೆ ಪೆವಲಿಯನ್ ದಾರಿ ತೋರಿಸಿದ್ರು. ಪಂದ್ಯಕ್ಕೆ ಮತ್ತೆ ದೊಡ್ಡ ತಿರುವು ಸಿಕ್ಕಿತ್ತು.

ಅರ್ಧ ಶತಕ ಬಾರಿಸಿದ ಸ್ಟೀವ್ ಸ್ಮಿತ್
ಮುಂಬೈ ಬೌಲಿಂಗ್ ಅಟ್ಯಾಕ್ನ್ನ ಉಡೀಸ್ ಮಾಡಿದ ಸ್ಟೀವ್ ಸ್ಮಿತ್ ನಾಯಕನ ಆಟವಾಡಿ ತಂಡಕ್ಕೆ ಆಸರೆಯಾದ್ರು. ನಾಲ್ಕನೆ ವಿಕೆಟ್ಗೆ ರಿಯಾನ್ ಪರಾಗ್ರಿಂದ್ ಸಾಥ್ ಪಡೆದ ಸ್ಮಿತ್ 40 ಎಸೆತದಲ್ಲಿ ಅರ್ಧ ಶತಕ ಬಾರಿಸಿ ಸಂಭ್ರಮಿಸಿದ್ರು.

ರಾಜಸ್ಥಾನಕ್ಕೆ  5 ವಿಕೆಟ್ಗಳ ಜಯ
ನಾಲ್ಕನೆ ವಿಕೆಟ್ಗೆ ಅಬ್ಬರದ ಬ್ಯಾಟಿಂಗ್ ಮಾಡಿದ ಸ್ಮಿತ್ ಮತ್ತು ರಿಯಾನ್ ಪರಾಗ್ 85 ರನ್ ಗಳ ಜೊತೆಯಾಟ ನೀಡಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ರು. ಇದರೊಂದಿಗೆ ರಾಜಸ್ತಾನ ತಂಡ ಪ್ಲೇ ಆಪ್ ಆಸೆಯನ್ನ ಜೀವಂತವಾಗಿರಿಸಿಕೊಂಡಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ