ಕೊಲಂಬೊ: ಈಸ್ಟರ್ ದಿನವೇ ಶ್ರೀಲಂಕಾದ ಕೊಲಂಬೊದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಚರ್ಚ್, ಹೋಟೆಲ್ ಗಳ ಮೇಲೆ ಏಕಕಾಲದಲ್ಲಿ ಸರಣಿ ಬಾಂಬ್ ದಾಳಿ ನಡೆಸಿದ್ದಾರೆ. ಈ ವರೆಗೆ ಮೃತ ಪಟ್ಟವರ ಸಂಖ್ಯೆ 163ಕ್ಕೆ ಏರಿಕೆಯಾಗಿದೆ. 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸ್ಟೋಟ ಸಂಭವಿಸಿದ್ದ ಹೋಟೆಲ್ ಗಳಲ್ಲಿ ಒಂದಾದ ಸಿನ್ನಾಮಾನ್ ಗ್ರಾಂಡ್ ಹೋಟೆಲ್ ನಲ್ಲಿದ್ದ ಕಾಲಿವುಡ್ ನಟಿ ರಾಧಿಕಾ ಶರತ್ ಕುಮಾರ್ , ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಬಾಂಬ್ ಸ್ಟೋಟ ಸಂವಿಸುವ ಕೆಲವೇ ನಿಮಿಷದ ಮುಂಚೆ ಆಕೆ ಆ ಹೋಟೆಲ್ ನಿಂದ ಹೊರಗೆ ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಧಿಕಾ, ಕೊಲಂಬೊದಲ್ಲಿನ ಚಿನ್ನಾಮೊನ್ ಗ್ರಾಂಡ್ ಹೋಟೆಲ್ ನಿಂದ ನಿರ್ಗಮಿಸಿದ ಕೆಲ ಹೊತ್ತಿನಲ್ಲಿ ಬಾಂಬ್ ಸ್ಟೋಟ ಸುದ್ದಿ ಕೇಳಿ ಶಾಂಕ್ ಆಗಿದೆ. ದೇವರ ದಯೆಯಿಂದ ನಾವೆಲ್ಲಾ ಅಪಾಯದಿಂದ ಪಾರಾಗಿರುವುದಾಗಿ ತಿಳಿಸಿದ್ದಾರೆ.
ಈಸ್ಟರ್ ದಿನವಾದ ಇಂದು ಬೆಳಗ್ಗೆ 8-45ರ ಸುಮಾರಿನಲ್ಲಿ ಮೂರು ಚರ್ಚ್ ಮೂರು ಹೋಟೆಲ್ ನಲ್ಲಿ ಬಾಂಬ್ ದಾಳಿ ನಡೆದಿದೆ. ಮಧ್ಯಾಹ್ನ ಮತ್ತೆ ಮೂರು ಕಡೆ ಉಗ್ರರು ಬಾಂಬ್ ಸ್ಫೋಟಿಸಿದ್ದಾರೆ.