ಈಶ್ವರ ಖಂಡ್ರೆ ರೋಡ್ ಶೋ

ಬೀದರ್: ಮೈತ್ರಿ ಪಕ್ಷದ ಅಭ್ಯರ್ಥಿ ಈಶ್ವರ ಖಂಡ್ರೆ ಬಹಿರಂಗ ಪ್ರಚಾರದ ಕೊನೆಯ ದಿನವಾದ ಭಾನುವಾರ ನಗರದಲ್ಲಿ ಪಾದಯಾತ್ರೆ ನಡೆಸಿ ಭರ್ಜರಿ ಮತಯಾಚನೆ ಮಾಡಿದರು.
ಇಲ್ಲಿಯ ಓಲ್ಡ್ ಸೀಟಿಯಲ್ಲಿ ಪಾದಯಾತ್ರ ನಡೆಸಿದ ಖಂಡ್ರೆ, ಹಲವು ಮನೆ, ಮನೆಗಳಿಗೆ ತೆರಳಿ ಕಾಂಗ್ರೆಸ್ ಗೆ ಬೆಂಬಲಿಸುವಂತೆ ಮನವಿ ಮಾಡಿದರು.
ಬಿಜೆಪ ಅಭ್ಯರ್ಥಿ ಭಗವಂತ ಖೂಬಾರಿಂದ ಜಿಲ್ಲೆ ಅಭಿವೃಧ್ಧಿ ಸಾಧ್ಯವಿಲ್ಲ.
ಬಿಜೆಪಿಯ ಬಣ್ಣ ಬಣ್ಣದ ಮಾತುಗಳಿಗೆ ಮತದಾರರು ಮತ್ತೆ ಮೋಸ ಹೋಗಬೇಡಿ. ಈ ಬಾರಿ ಮೈತ್ರಿ ಅಭ್ಯರ್ಥಿಗೆ ಬೆಂಬಲಿಸಬೇಕು ಎಂದರು.
ಸುಳ್ಳನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಹೀನಾಯವಾಗಿ ಸೋಲುವುದು ಖಚಿತ. ಖೂಬಾ ಪಾಲಿಗೆ ಇದು ಕೊನೆಯ ಚುನಾವಣೆಯಾಗಲಿದೆ ಎಂದು ಹೇಳಿದರು.
ಮಾತೆತ್ತಿದರೆ ಖೂಬಾ ರೈಲ್ವೆ, ಹೆದ್ದಾರಿ ವಿಷಯ ಪ್ರಸ್ತಾಪಿಸುತ್ತಾರೆ. ವಾಸ್ತವವಾಗಿ ಬಹುತೇಕ ಎಲ್ಲ ಅಭಿವೃದ್ಧಿ ಯೋಜನೆಗಳು ಕಾಂಗ್ರೆಸ್ ಸರ್ಕಾರದಲ್ಲಿ ಮಂಜೂರಾಗಿವೆ. ಬೀದರ್-ಕಲಬುರಗಿ ರೈಲು ಮಾರ್ಗಕ್ಕೆ ಅಧಿಕ ಅನುದಾನ ನೀಡಿದ್ದು ಯುಪಿಎ ಸರ್ಕಾರ. ಆದರೆ, ಎಲ್ಲ ತಾನೇ ಮಾಡಿದ್ದಾಗಿ ಹೇಳಿಕೊಳ್ಳುವುದು ಬಿಜೆಪಿಯವರಿಗೆ ಅಭ್ಯಾಸವಾಗಿದೆ ಎಂದು ಖಂಡ್ರೆ ದೂರಿದರು.
ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟ ಫಸಲ್ ಬಿಮಾ ಯೋಜನೆ ಬಗ್ಗೆ ಭಗವಂತ ಖೂಬಾ ಮೌನವಾಗಿದ್ದಾರೆ. ಈ ಯೋಜನೆ ಲೋಪದೋಷ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಕಾರಣ ಹೊಸ ವಿಮಾ ಯೋಜನೆ ಘೋಷಿಸಿದ್ದಾರೆ. ರೈತರಿಗೆ ಅನುಕೂಲವಾಗುವಂಥ ಯೋಜನೆ ರೂಪಿಸಿದ್ದು ರಾಜ್ಯ ಸರ್ಕಾರ ಎಂದರು.
ಕ್ರೀಡಾ ಸಚಿವ ರಹೀಂ ಖಾನ್ ಇತರರು ಪಾಲ್ಗೊಂಡಿದ್ದರು. ಓಲ್ಡ್ ಸೀಟಿಯಲ್ಲಿನ ಹಲವು ಬಡಾವಣೆಗಳಲ್ಲಿ ಖಂಡ್ರೆ ಮತಯಾಚನೆ ಮಾಡಿದರು.
————–

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ