ಕೊಲಂಬೋದಲ್ಲಿ ಉಗ್ರ ದಾಳಿ: ಭಾರತ ಖಂಡನೆ; ಸಹಾಯವಾಣಿ ತೆರೆದ ವೀದೇಶಾಂಗ ಸಚಿವಾಲಯ

ನವದೆಹಲಿ: ದ್ವೀಪರಾಷ್ಟ್ರ ಶ್ರೀಲಂಕಾ ರಾಜಧಾನಿ ಕೊಲಂಬೋದ ಐದು ಚರ್ಚ್‍ಗಳು ಮತ್ತು ಮೂರು ಪಂಚತಾರಾ ಹೊಟೇಲ್‍ಗಳಲ್ಲಿ ಇಂದು ಉಗ್ರಗಾಮಿಗಳು ನಡೆಸಿದ ಸರಣಿ ವಿಧ್ವಂಸಕ ಕೃತ್ಯಗಳಲ್ಲಿ 150ಕ್ಕೂ ಹೆಚ್ಚು ಮಂದಿ ಹತರಾದ ಕೃತ್ಯದ ಬಗ್ಗೆ ಭಾರತ ಆತಂಕ ವ್ಯಕ್ತಪಡಿಸಿದೆ.

ಶ್ರೀಲಂಕಾದ ಪರಿಸ್ಥಿತಿಯನ್ನು ಭಾರತ ಗಂಭೀರವಾಗಿ ನಿಗಾ ವಹಿಸುತ್ತಿದೆ. ಆ ದೇಶಕ್ಕೆ ಅಗತ್ಯವಾದ ಎಲ್ಲ ನೆರವನ್ನು ನೀಡುವುದಾಗಿ ವೀದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಅವರು ಶ್ರೀಲಂಕಾದ ಕೊಲೊಂಬೋದಲ್ಲಿರುವ ಭಾರತೀಯ ಹೈಕಮೀಷನರ್ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಭಾರತೀಯರ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಸಹಾಯವಾಣಿ :
ಭಾರತ ಹೈಕಮೀಷನರ್ ಕಚೇರಿ ಸಹ ಕೊಲೊಂಬೋದಲ್ಲಿನ ಪರಿಸ್ಥಿತಿ ಬಗ್ಗೆ ತೀವ್ರ ನಿಗಾ ವಹಿಸಿದೆ. ಭಾರತೀಯರ ಸ್ಥಿತಿಗತಿ ಬಗ್ಗೆ ನವದೆಹಲಿಗೆ ಮಾಹಿತಿ ನೀಡಲಾಗುತ್ತಿದೆ.

ಇದೇ ಉದ್ದೇಶಕ್ಕಾಗಿ 9477792082, 94772234176 ಸಹಾಯವಾಣಿ ಯನ್ನು ಆರಂಭಿಸಲಾಗಿದ್ದು ಅಗತ್ಯ ಮಾಹಿತಿ ಪೂರೈಕೆಗಳನ್ನು ಪೂರೈಸಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ