ಮೈಸೂರು, ಏ.21-ಮೊದಲ ಹಂತದ ಚುನಾವಣೆ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮುಗಿದ ಬೆನ್ನಲ್ಲೇ ಬೆಟ್ಟಿಂಗ್ ಭರಾಟೆ ಜೋರಾಗಿ ನಡೆಯುತ್ತಿದೆ.
ಚುನಾವಣೆ ನಂತರ ಅಭ್ಯರ್ಥಿಗಲು ರಿಲ್ಯಾಕ್ಸ್ ಮೂಡ್ನಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಆದರೆ ಅಭಿಮಾನಿಗಳು ಹಾಗೂ ಸಾರ್ವಜನಿಕರು ಆ ಅಭ್ಯರ್ಥಿ ಪರವಾಗಿ ಬೆಟ್ಟಿಂಗ್ ನಡೆಸುತ್ತಿದ್ದಾರೆ.
ನಗರದ ಕೆಲವೆಡೆ ಹೆಚ್ಚಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಬೆಟ್ಟಿಂಗ್ ನಡೆದಿದೆ ಎನ್ನಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ವಿಜಯ್ಶಂಕರ್ ಪರವಾಗಿ ಕಾಂಗ್ರೆಸ್ ವ್ಯಕ್ತಿಯೊಬ್ಬರು ಬಿಜೆಪಿ ಅಭ್ಯರ್ಥಿ ಪ್ರತಾಪ್ಸಿಂಹ ಪರವಾಗಿ ಒಬ್ಬರು ಬೆಟ್ಟಿಂಗ್ ಕಟ್ಟಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಪರವಾದ ಬೆಟ್ಟಿಂಗ್ನಲ್ಲಿ 2 ಆಟೋಗಳನ್ನು ಇಟ್ಟಿದ್ದರೆ, ಬಿಜೆಪಿ ಅಭ್ಯರ್ಥಿ ಪರವಾಗಿ 2 ಸ್ಕೂಟರ್ಗಳನ್ನು ಬೆಟ್ಟಿಂಗ್ ಕಟ್ಟಿದ್ದಾರೆ.
ಹಾಗೆಯೇ ಆಟೋದೊಂದಿಗೆ ಹೈಬ್ರೀಡ್ ಆಡಿನ ಮರಿಯನ್ನು ಸಹ ಬೆಟ್ಟಿಂಗ್ ಇಡಲಾಗಿದೆ. ಈ ಇಬ್ಬರೂ ಸಹ ಬೇರೊಬ್ಬ ವ್ಯಕ್ತಿ ಕೈಲಿ ತಾವು ಬೆಟ್ಟಿಂಗ್ ಕಟ್ಟಿರುವ ವಾಹನಗಳ ಕೀಗಳನ್ನು ನೀಡಿದ್ದಾರೆ.
ಇವರಿಬ್ಬರಲ್ಲಿ ಯಾರಿಗೆ ಗೆಲುವು ಎಂಬುದನ್ನು ಮೇ 23ರವರೆಗೆ ಕಾದು ನೋಡಬೇಕಿದೆ.