ನಿಸ್ಸಾರ್ ಅಹಮ್ಮದ್ ಕೃತಿ ಬಿಡುಗಡೆ ಮಾಡಿದ ನರಹಳ್ಳಿ ಬಾಲಸುಬ್ರಹ್ಮಣ್ಯ

ಬೆಂಗಳೂರು,ಏ.20-ಹೆಚ್ಚಿನ ಸಂಖ್ಯೆಯ ಓದುಗರನ್ನು ತಲುಪಲು ತನ್ನ ಸಾಹಿತ್ಯಗಳನ್ನು ಇಂಗ್ಲೀಷ್‍ಮತ್ತು ಇತರ ಭಾಷೆಗಳಿಗೆ ಭಾಷಾಂತರಿಸುವ ಮೂಲಕ ಕನ್ನಡ ಗಡಿಗಳನ್ನು ಮೀರಿ ಬೆಳೆಯಬೇಕಾಗಿರುವುದು ಬಹಳ ಮುಖ್ಯವಾಗಿದ್ದು, ಯಾವುದೇ ಪ್ರಯತ್ನ ಶ್ಲಾಘನೀಯ ಎಂದು ಖ್ಯಾತ ಬರಹಗಾರರು ಮತ್ತು ವಿಮರ್ಶಕರಾದ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಹೇಳಿದ್ದಾರೆ.

ಮಣಿಪಾಲ್ ಯುನಿವರ್ಸಿಟಿ ಪ್ರೆಸ್ ಪ್ರಕಟಿಸಿರುವ ಮತ್ತು ಸಿ.ಎನ್.ಪೊಯಮ್ಸ್ ಆಫ್ ನಿಸ್ಸಾರ್ ಅಹ್ಮದ್ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಇದು ಕೇವಲ ಭಾಷಾಂತರ ಮಾತ್ರವಲ್ಲ. ಸಾಹಿತ್ಯವನ್ನು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಒಯ್ಯುವ ಅಂತಾರಾಷ್ಟ್ರೀಯ ಇದಾಗಿದೆ. ವಿ.ಕೆ.ಗೋಕಾಕ್, ಸುಮತೀಂದ್ರ ನಾಡಿಗ , ಆರ್.ಕೆ.ರಾಮಾನುಜಂ, ಎಚ್.ಎಸ್.ಶಿವಪ್ರಕಾಶ್, ತೇಜಸ್ವಿನಿ ನಿರಂಜನರಂತಹ ಘಟಾನುಘಟಿಗಳು ಈ ಪುಸ್ತಕದಲ್ಲಿನ ಭಾಷಾಂತರ ಕಾರ್ಯವನ್ನು ಕೈಗೊಂಡಿರುತ್ತಾರಲ್ಲದೆ ನಿಸ್ಸಾರ್‍ರ ಕಾವ್ಯದ ಮೂಲತತ್ವವನ್ನು ಸಮರ್ಪಕವಾಗಿ ಹಿಡಿದಿಟ್ಟಿದ್ದಾರೆ ಎಂದರು.

ಪುಸ್ತಕದಲ್ಲಿನ ವಸ್ತು ವಿಷಯಗಳನ್ನು ವಿವರಿಸಿದ ಬರಗಾರರಾದ ದೀಪಾ ಗಣೇಶ್ ಈ ಕೃತಿಗೆ ಕಾಟ್ ಇನ್ ದಿ ವಲ್ರ್ಡ್ ಆಫ್ ಬೈನರೀಸ್ ಎನ್ನುವುದಕ್ಕಿಂತ ಬ್ರೇಕಿಂಗ್ ದಿ ವಲ್ರ್ಡ್ ಆಫ್ ಬೈನರೀಸ್ ಎಂದು ಹೆಸರಿಡಬಹುದಿತ್ತು ಎಂದು ಹೇಳಿದರು.

ಭಾಷಾಂತಾರ ಎಂಬುದು ಮೂಲ ಕೃತಿಯ ರಚನೆ,ವಿನ್ಯಾಸ ಮತ್ತು ಸಂಸ್ಕøತಿ ಕುರಿತು ಸೂಕ್ಷ್ಮ ಸಂವೇದನೆ ಹೊಂದಿರುತ್ತದೆಯಲ್ಲದೆ ಈ ಪುಸ್ತಕದಲ್ಲಿ ಆಯ್ದ ನೂರರಲ್ಲಿ ಅನೇಕವು ಈ ನಿರೀಕ್ಷೆಗಳನ್ನು ಪೂರೈಸುತ್ತವೆ ಎಂದರು.

ಪುಸ್ತಕ ಬಿಡುಗಡೆ ಮಾಡಿದ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಮಾತನಾಡಿ, ನಿಸ್ಸಾರರ ಕವಿತೆಗಳು ತಮ್ಮನ್ನು ಮತ್ತು ಕೆಲವು ಪೀಳಿಗೆಯ ಹಲವರ ಮನಸ್ಸುಗಳನ್ನು ಕಲಕಿವೆ.ಓದುಗರ ಅಲ್ಲದೆ ನಿಸ್ಸಾರರಕಾವ್ಯಗಳನ್ನುಸಾರ್ವಜನಿಕರಿಗೆತಲುಪಿಸಿದ ಗಾಯಕರ ಕಲ್ಪನೆಗಳನ್ನು ಈ ಕಾವ್ಯಗಳು ಹಿಡಿದಿಟ್ಟಿವೆ ಎಂದರು.

ಎಂಯುಪಿನ ಮುಖ್ಯ ಸಂಪಾದಕರಾದ ನೀತಾ ಇನಾಂದಾರ್ ಮಾತನಾಡಿ, ಭಾಷೆಗಳು ಸ್ಥಳೀಯ ಜ್ಞಾನ ಮತ್ತು ಬುದ್ದಿವಂತಿಕೆಯ ದಾಸ್ತಾನು ಕೇಂದ್ರಗಳಾಗಿದ್ದು, ಸಾಂಘಿಕ ಪ್ರಜ್ಞೆ ಸೃಷ್ಟಿಸುವಲ್ಲಿ ಶಕ್ತಿಸಾಲಿ ಉಪಕರಣಗಳಾಗಿವೆ. ಚಿಂತನೆಗಳು ಮತ್ತು ಸ್ಥಳೀಯ ಜ್ಞಾನಗಳ ಸಂಶ್ಲೇಷಣೆಗಳಿಗೆ ಭಾಷಾಂತರ ವೇದಿಕೆಯನ್ನು ಪೂರೈಸುತ್ತದೆ. ಆದ್ದರಿಂದ ಎಂಯುಪಿ ಭಾಷಾಂತರದ ಈ ಶಕ್ತಿಯನ್ನು ಗುರುತಿಸುತ್ತದೆಯಲ್ಲದೆ ಭಾರತೀಯ ಸಾಹಿತ್ಯದ ಭಾಷಾಂತರಗಳ ಸರಣಿಯನ್ನು ಹೊರತರುತ್ತಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ