ಜಾನಪದ ಲೋಕದಲ್ಲಿ ಮೂರು ದಿನಗಳ ಜನಪದ ಗೀತಗಾಯನ ಶಿಬಿರ

ಬೆಂಗಳೂರು,ಏ.20- ರಾಮನಗರದ ಬಳಿ ಇರುವ ಜಾನಪದ ಲೋಕದಲ್ಲಿ ನಾಡೋಜ ಎಚ್.ಎಲ್.ನಾಗೇಗೌಡ ಜನಪದ ಕಲಾ ಶಾಲೆಯ ವತಿಯಿಂದ ಮೂರು ದಿನಗಳ ಜನಪದ ಗೀತಗಾಯನ ಶಿಬಿರವನ್ನು ಏರ್ಪಡಿಸಿದೆ.

ಜಾನಪದ ಗೀತಗಾಯಕರಿಂದ ಗೀತೆಗಳನ್ನು ಹಾಡಿಸುವುದರ ಜೊತೆಗೆ ಹೊಸ ಹೊಸ ಜನಪದ ಗೀತೆಗಳನ್ನು ಪರಿಚಯ ಮಾಡಿಕೊಡಲಾಗುತ್ತದೆ. ಜೊತೆಗೆ ನುರಿತ ಜನಪದ ಸಂಗೀತ ಸಾಹಿತ್ಯ ಬಲ್ಲ ತಜ್ಞರಿಂದ ಮಾರ್ಗದರ್ಶನ ಕೊಡಿಸಲಾಗುತ್ತದೆ. ಕಥನ ಗೀತೆಗಳು ಹಾಗೂ ಮಹಾಕಾವ್ಯಗಳನ್ನು ಹಾಡಲು ಮಾರ್ಗದರ್ಶನ ನೀಡಲಾಗುವುದು.

ಆಸಕ್ತ ಹಾಡುಗಾರರು ತಮ್ಮ ಸ್ವವಿವರ ಮತ್ತು ಹಾಲಿ ಹಾಡುತ್ತಿರುವ ಹಾಡುಗಳ ಪಟ್ಟಿಯನ್ನು ಜಾನಪದ ಲೋಕದ ಕಚೇರಿಗೆ ನೀಡಲು ಕೋರಲಾಗಿದೆ.ಜಾನಪದ ಲೋಕದಲ್ಲಿ ಮೂರು ದಿವಸಗಳಿಗೆ ಊಟ ಮತ್ತು ಸರಳ ವಸತಿಯನ್ನು ಕಲ್ಪಿಸಲಾಗುವುದು.

ಆಸಕ್ತರಿಂದ ಮಾಹಿತಿ ಬಂದ ತಕ್ಷಣ ಶಿಬಿರ ಯೋಜನೆ ಮಾಡಲಾಗುವುದು.ಭಾಗಿಗಳು ನಮ್ಮ ಸಂಸ್ಥೆಯ ನೀತಿ-ನಿಬಂಧನೆಗಳನ್ನು ಪಾಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ಜಾನಪದ ಲೋಕ ದೂ: 080-23605033, ಮೊ: 7795632294 ಸಂಪರ್ಕಿಸಬಹುದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ