ಬೀದರ್ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮೌಲಪ್ಪ ಮಾಳಗೆ ಶುಕ್ರವಾರ ಕ್ಷೇತ್ರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು.
ವಿವಿಧ ಹಳ್ಳಿಗಳಲ್ಲಿ ಪಾದಯಾತ್ರೆ ಮೂಲಕ ಮನೆ, ಮನೆಗೆ ಮತಯಾಚನೆ ಮಾಡುತ್ತಿರುವ ಮೌಲಪ್ಪ ಮಾಳಗೆ ಅವರಿಗೆ ಭರ್ಜರಿ ಸ್ವಾಗತ ದೊರೆಯುತ್ತದೆ.
ಮಾಳಗೆ ಅವರಿಗೆ ವಿವಿಧ ಸಂಘಟನೆಗಳು ಸಹ ಸಾಥ್ ನೀಡಿದ್ದು ಪಕ್ಷೇತರ ಅಭ್ಯರ್ಥಿ ಗೆ ಪ್ರಚಾರ ಮಾಡಲು ಮತ್ತಷ್ಟೂ ಜೋಶ್ ಬಂದಿದೆ.
ರಾಷ್ಟ್ರೀಯ ಪಕ್ಷಗಳು ಹಣ ಬಲ, ತೋಳ್ಬಲದ ಮೇಲೆ ಚುನಾವಣೆ ನಡೆಸುತಗತಿದ್ದರೆ, ನಾನು ಜಿಲ್ಲೆಯ ಎಲ್ಲೆಡೆ ಅಭೂತಪೂರ್ವ ಸಿಗುತ್ತಿರುವ ಮತದಾರರ ಬೆಂಬಲದ ಮೇಲೆ ಚುನಾವಣೆ ಎದುರಿಸುತ್ತಿರುವೆ ಎಂದು ಮೌಲಪ್ಪ ಮಾಳಗೆ ಹೇಳಿದರು.
ವಿವಿಧ ರಾಜಕೀಯ ಪಕ್ಷಗಳು
ಬೀದರ್ ಕ್ಷೇತ್ರವನ್ನು ಕಡೆಗಣಿಸಿವೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ನಾನು ಚುನಾವಣೆ ಕಣಕ್ಕೆ ಇಳಿದಿರುವೆ.
ಟ್ರ್ಯಾಕ್ಟರ್ ಚಿಹ್ನೆ ಹೊಂದಿರುವ ನನಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ನಾನು ಅಂಗವಿಕಲ. ಆದರೂ ಸಹ ಕ್ಷೇತ್ರದ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಚುನಾವಣೆ ಗೆ ಸ್ಪರ್ಧಿಸಿದ್ದೇನೆ. ಈ ಬಾರಿ ನನಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.