ಖಟಕ ಚಿಂಚೋಳಿ, ಮದಕಟ್ಟಿ, ಹಲಬರ್ಗಾ, ನಿಟ್ಟೂರ(ಬಿ), ಭಾತಂಬ್ರಾದಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರ ಕೆಟ್ಟ ದಿನಗಳು ದೂರವಾಗುವ ಸಮಯ ಬಂದಿದೆ-ಈಶ್ವರ ಖಂಡ್ರೆ

ಬೀದರ್: ಭಾಲ್ಕಿ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಈಶ್ವರ ಬಿ. ಖಂಡ್ರೆ ಅವರು ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ, ಮದಕಟ್ಟಿ, ಹಲಬರ್ಗಾ, ನಿಟ್ಟೂರ(ಬಿ), ಭಾತಂಬ್ರಾ ಹೋಬಳಿಗಳಲ್ಲಿ ಬೃಹತ ಪ್ರಮಾಣದ ಸಭೆಯನ್ನು ಆಯೋಜಿಸಿ ಮತಯಾಚಿಸಿ ಮಾತನಾಡಿದರು.


ಕೆಟ್ಟ ದಿನಗಳು ದೂರವಾಗುವ ಸಮಯ ಬಂದಿದೆ. ಮೇ 23 ರ ನಂತರ ಅಚ್ಚೆ ದಿನಗಳು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂಸದರಾಗಿ ಖೂಬಾ ಅವರು ಯಾವುದೇ ಅಭಿವೃದ್ಧಿ ಪರ ಕೆಲಸಗಳನ್ನು ಪೂರ್ಣಗೊಳಿಸಿಲ್ಲ.

 

ಇಂಥವರಿಂದ ಜಿಲ್ಲೆ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್‍ಗೆ ಮತ ನೀಡುವಂತೆ ಕೋರಿದರು.
ಕಾಂಗ್ರೆಸ್ ಜಾತ್ಯತೀತ ಪಕ್ಷವಾಗಿದೆ ಈ ಪಕ್ಷದಲ್ಲಿ ಸರ್ವ ಜಾತಿ, ಸಮುದಾಯಗಳಿಗೆ ಸಮಾನ ಪ್ರಾತಿನಿಧ್ಯ ಇದೆ. ಬೀದರ ಜಿಲ್ಲೆಯನ್ನು ಇನ್ನಷ್ಟು ಅಭಿವೃದ್ಧಿಯತ ಕೊಂಡೊಯ್ಯಲು ಚುನಾವಣೆಯಲ್ಲಿ ತಮ್ಮನ್ನು ಆಶೀರ್ವದಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪಾ ಖಾಸೆಂಪೂರ ಮಾತನಾಡಿ ಶಾಸಕ, ಸಚಿವರಾಗಿ ಈಶ್ವರ ಖಂಡ್ರೆ ಅವರು ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿಗೆ ಶ್ರಮ ವಹಿಸಿದ್ದಾರೆ. ಖಂಡ್ರೆ ಸಮರ್ಥ ಅಭ್ಯರ್ಥಿಯಾಗಿದ್ದು, ಜಿಲ್ಲೆಯ ಪ್ರಗತಿಗೆ ಮೈತ್ರಿ ಅಭ್ಯರ್ಥಿ ಈಶ್ವರ ಖಂಡ್ರೆ ಅವರನ್ನು ಗೆಲ್ಲಿಸುವುದು ಅಗತ್ಯ ಎಂದು ನುಡಿದರು.
ಈ ಕಾರ್ಯಕ್ರಮದ ಮೊದಲು ಖಟಕ ಚಿಂಚೋಳಿಯಲ್ಲಿ ಭಾಗ್ಯನಗರ ದಿಂದ ಖಟಕ ಚಿಂಚೋಳಿ ಗ್ರಾಮದವರಿಗೆ ಸಹಸ್ರ ಕಾಂಗ್ರೆಸ್ ಕಾರ್ಯಕರ್ತರ ರ್ಯಾಲಿ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಈಶ್ವರ ಖಂಡ್ರೆಯವರಿಗೆ ವಿಜೃಂಭಣೆಯಿಂದ ಸ್ವಾಗತಿಸಲಾಯಿತು.


ತಾ.ಪಂ. ಅಧ್ಯಕ್ಷೆ ರೇಖಾ ವಿಲಾಸ ಪಾಟೀಲ್, ಜಿ.ಪಂ. ಸದಸ್ಯರಾದ ರವಿರೆಡ್ಡಿ, ರೇಖಾ ನೀಲಕಂಠ, ಅಂಬಾದಾಸ ಕೋರೆ, ಶ್ರೀಮತಿ ಉಷಾ ನಿಟ್ಟೂರಕರ, ಶ್ರೀಮತಿ ಶೀತಲ ಹಣಮಂತರಾವ ಚೌವ್ಹಾಣ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಬಸೀರೋದ್ದೀನ, ಜೆಡಿಎಸ್ ತಾಲೂಕಾ ಅಧ್ಯಕ್ಷ ಗೋವಿಂದರಾವ ಬಿರಾದಾರ, ಶಿವ ಗೌಡಗಾಂವ, ಲಿಂಗರಾಜ ಖಂಡಾರೆ, ಕೆಪಿಸಿಸಿ ಅಸಂಘಟಿತ ರಾಜ್ಯ ಉಪಾಧ್ಯಕ್ಷ ಪಪ್ಪು ಪಾಟೀಲ್, ಸಂಗಮೇಶ ಹುಣಜೆ, ಪ್ರಕಾಶ ಮಾಶೆಟ್ಟೆ, ಅಶೋಕ ಮಡ್ಡೆ, ಶೇಖರ ವಂಕೆ ಮುಂತಾದವರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ