ಬೆಂಗಳೂರು,ಏ.19- ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ನನ್ನು ಪರಿಶೀಲಿಸಿದ ಕಾರಣಕ್ಕಾಗಿ ಚುನಾವಣಾ ವೀಕ್ಷಕರಾದ ಐಎಎಸ್ ಅಧಿಕಾರಿ ಮೊಹಮ್ಮದ್ ಮೋಸಿನ್ ಅವರನ್ನು ಅಮಾನತುಗೊಳಿಸಿರುವುದು ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ಮೋಸಿನ್ ಅವರು ಅತ್ಯಂತ ಧೈರ್ಯವಂತ ಅಧಿಕಾರಿ. ಅದಕ್ಕಾಗಿ ಪ್ರಧಾನಿ ಅವರ ಹೆಲಿಕಾಫ್ಟರ್ನನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ.
ಸ್ವಘೋಷಿದ ಚೌಕಿದಾರ್ಗೆ ಯಾವುದೇ ಭಯ ಇಲ್ಲ ಎನ್ನುವುದಾದರೆ ಮೋಸಿನ್ರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ಮುಚ್ಚಿಡಲು ಏನೂ ಇಲ್ಲ ಎಂದ ಮೇಲೆ ಈ ರೀತಿಯ ಅಭದ್ರತೆಯಿಂದ ಪ್ರಧಾನಿ ಬಳಲುತ್ತಿರುವುದು ಏಕೆ ಎಂದು ಸಿದ್ದರಾಮಯ್ಯ ಟ್ವಿಟರ್ ಮೂಲಕ ಪ್ರಶ್ನೆ ಕೇಳಿದ್ದಾರೆ.