ಪ್ರಧಾನಿ ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಿಸಿದ ಪುಟಿನ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಆರ್ಡರ್‌ ಆಫ್‌ ಸೇಂಟ್‌ ಆಂಡ್ರ್ಯೂ ದ ಅಪೋಸ್ಲ್’ ಪ್ರದಾನ ಮಾಡುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ್ದಾರೆ.

ಪ್ರಶಸ್ತಿ ಪ್ರದಾನದ ಆದೇಶಕ್ಕೆ ಪುಟಿನ್ ಸಹಿ ಹಾಕಿದ್ದಾರೆ ಎಂದು ಮಾಸ್ಕೋದಲ್ಲಿರುವ ಭಾರತೀಯ ದೂತಾವಾಸದ ಅಧಿಕೃತ ಟ್ವಿಟರ್ ಹ್ಯಾಂಡಲ್‌ ‘ಇಂಡಿಯಾ ಇನ್ ರಷ್ಯಾ’ ಈ ವಿಷಯ ಪ್ರಕಟಿಸಿದೆ.

ರಷ್ಯನ್ ಒಕ್ಕೂಟದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ‘ದ ಆರ್ಡರ್ ಆಫ್‌ ಸೇಂಟ್ ಆಂಡ್ರ್ಯೂ ದ ಅಪೋಸ್ಲ್‌’ ಅನ್ನು 1698ರಲ್ಲಿ ರಷ್ಯಾದ ದೊರೆಯ ಕಾಲದಲ್ಲಿ ಸ್ಥಾಪಿಸಲಾಯಿತು. ಸೋವಿಯತ್ ಆಡಳಿತದಲ್ಲಿ ಈ ಪ್ರಶಸ್ತಿಯನ್ನು ರದ್ದುಪಡಿಸಲಾಗಿತ್ತು. 1998ರಲ್ಲಿ ಈ ಪ್ರಶಸ್ತಿಯನ್ನು ಮರುಸ್ಥಾಪಿಸಲಾಯಿತು.

PM Modi To Be Honoured With Russia’s Highest Civilian Award

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ