ನವದೆಹಲಿ: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಪ್ರತ್ಯೇಕ ವ್ಯಕ್ತಿಯ ಧ್ವನಿ, ಅಲ್ಪ ದೃಷ್ಟಿ ಮತ್ತು ಸೊಕ್ಕಿನ ಪ್ರಣಾಳಿಕೆಯಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಬಿಜೆಪಿಯ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ಪ್ರಧಾನಿ ಮೋದಿ, ಎಸಿ ಕೊಠಡಿಯಲ್ಲಿ ಕುಳಿತುಕೊಳ್ಳುವ ಜನರು ಬಡತನವನ್ನು ಹೋಗಲಾಡಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ನ್ನು ಜರಿದಿದ್ದರು. ಈ ಬೆನ್ನಲ್ಲೇ ಇದೀಗ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಣಾಳಿಕೆಯನ್ನು ಚರ್ಚೆಯ ಮೂಲಕ ರೂಪಿಸಲಾಗಿದೆ.
ಒಂದು ದಶಲಕ್ಷಕ್ಕೂ ಹೆಚ್ಚಿನ ಭಾರತೀಯ ಜನರ ಧ್ವನಿಯಾಗಿ ಇದು ಬುದ್ಧಿವಂತ ಮತ್ತು ಶಕ್ತಿಯುತವಾಗಿದೆ. ಆದರೆ, ಬಿಜೆಪಿಯ ಪ್ರಣಾಳಿಕೆಯು ಮುಚ್ಚಿದ ಕೊಠಡಿಯಲ್ಲಿ ಸಿದ್ಧಗೊಂಡಿದ್ದು, ಕೇವಲ ಓರ್ವ ವ್ಯಕ್ತಿಯ ಧ್ವನಿಯಾಗಿದೆ. ಅಲ್ಪದೃಷ್ಟಿ ಮತ್ತು ಸೊಕ್ಕಿನಿಂದ ಕೂಡಿದೆ ಎಂದು ಟೀಕಿಸಿದ್ದಾರೆ.
BJP’s poll manifesto voice of an isolated man: Rahul Gandhi