ಬಾಗಲಕೋಟೆ, ಏ.8-ಆರ್ಎಸ್ಎಸ್ ಬೆಳವಣಿಗೆ ಯಾರು ತಡೆಯಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಹಾಗೂ ದಿನೇಶ್ಗುಂಡೂರಾವ್ ಅವರಂತಹ ಎಷ್ಟೇ ಜನರು ಬಂದರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಆರ್ಎಸ್ಎಸ್ನ್ನು ಬೆಳೆಯಲು ಬಿಡುವುದಿಲ್ಲ ಎಂಬ ಕೈ ನಾಯಕರ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಇಂದಿರಾಗಾಂಧಿ, ನೆಹರೂ ಅವರಿಂದಲೂ ಏನೂ ಮಾಡಲು ಸಾಧ್ಯವಾಗಿಲ್ಲ. ನೂರು ಸಿದ್ದರಾಮಯ್ಯ, ಸಾವಿರ ದಿನೇಶ್ಗುಂಡೂರಾವ್ ಏನೂ ಮಾಡಲು ಆಗುವುದಿಲ್ಲ. ದಿನೇಶ್ಗುಂಡೂರಾವ್ಗೆ ತಲೆಕೆಟ್ಟಿದೆ ಎಂದು ಕಿಡಿಕಾರಿದರು.
ನಿಖಿಲ್ನನ್ನು ಸೋಲಿಸುವ ಮೂಲಕ ನನ್ನನ್ನು ಮುಗಿಸಲು ಸಂಚು ಮಾಡಲಾಗಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಸಂಚಲ್ಲ, ರಾಜಕೀಯ.
ನಿಖಿಲ್ನನ್ನು ಸೋಲಿಸಬೇಕೆಂದು ಸುಮಲತಾ ಅವರಿಗೆ ಬೆಂಬಲ ನೀಡುತ್ತಿದ್ದೇವೆ. ಮಂಡ್ಯ ಚುನಾವಣೆ ಬಗ್ಗೆ ಹತಾಶರಾಗಿದ್ದಾರೆ. ಹಾಗಾಗಿಯೇ ಇಡೀ ಕುಟುಂಬ ಪ್ರಚಾರಕ್ಕಿಳಿದಿದೆ. ಅಲ್ಲದೆ, ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿಯವರನ್ನು ಕರೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.