ಚುನಾವಣೆ ನಂತರ ಮೈತ್ರಿ ಸರ್ಕಾರ ಕೊಚ್ಚಿ ಹೋಗಲಿದೆ-ಮಾಜಿ ಸಿ.ಎಂ.ಜಗದೇಶ್ ಶೆಟ್ಟರ್

ಬಳ್ಳಾರಿ, ಏ.8-ಚುನಾವಣೆ ನಂತರ ಈ ಸರ್ಕಾರ ರಾಜ್ಯದಲ್ಲಿ ಉಳಿಯುವುದಿಲ್ಲ. ಮೈತ್ರಿಕೊಚ್ಚಿ ಹೋಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

ಮೈಸೂರು, ಹಾಸನ, ಮಂಡ್ಯ ಎಲ್ಲಿಯೂ ಹೊಂದಾಣಿಕೆ ಇಲ್ಲ. ಕಾಂಗ್ರೆಸ್ ಕಾರ್ಯಕರ್ತರೇ ಮೋದಿಗೆ ವೋಟು ಎನ್ನುತ್ತಿದ್ದಾರೆ.ರಾಜ್ಯದಲ್ಲಿ ಚುನಾವಣೆ ನಂತರ ಮೈತ್ರಿ ಸರ್ಕಾರ ಕೊಚ್ಚಿ ಹೋಗಲಿದೆ ಎಂದು ಭವಿಷ್ಯ ನುಡಿದರು. ಜನರ ಸಮಸ್ಯೆ ಆಲಿಸಲು ಮನಸ್ಸಿರಬೇಕು. ಆದರೆ ಜನರ ಮನಸ್ಸು ಗೆಲ್ಲಲು ಯಾವುದೇ ಡಿಗ್ರಿ ಬೇಕಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಏನು ಓದಿದ್ದಾರೆ, ರೇವಣ್ಣ ಪಿಡಬ್ಲ್ಯುಡಿ ಸಚಿವರಾಗಿಲ್ಲವೇ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಗಳಾಗಿರುವವರು ರಾಜ್ಯದ ಜವಾಬ್ದಾರಿಯುತ ಸ್ಥಾನದಲ್ಲಿರುತ್ತಾರೆ.ಅವರು ಹಗುರವಾಗಿ ಮಾತನಾಡಬಾರದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ