ಬೆಂಗಳೂರು, ಏ.7-ಲೋಕಸಭೆ ಚುನಾವಣೆ ಅಕ್ರಮಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇದುವರೆಗೆ 62,43,96,425 ರೂ. ಮೌಲ್ಯದ ನಗದು, ಮದ್ಯ, ಮಾದಕ ದ್ರವ್ಯ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಮಾಹಿತಿ ಪ್ರಕಾರ ಫ್ಲೈಯಿಂಗ್ ಸ್ಕ್ವಾಡ್ಗಳು, ಸ್ಟಾಟಿಕ್ ಸರ್ವೆಲೆನ್ಸ್ ಸ್ಕ್ವಾಡ್ಗಳು, ಪೊಲೀಸ್ ಪ್ರಾಧಿಕಾರಗಳು 13,55,5,722 ರೂ. ನಗದನ್ನು ವಶಪಡಿಸಿಕೊಂಡಿವೆ.
39,10,857.54 ರೂ. ಮೌಲ್ಯದ 7310.811 ಲೀಟರ್ ಮದ್ಯ ಹಾಗೂ 6,16,000 ರೂ. ಮೌಲ್ಯದ 131.81 ಕೆಜಿ ಮಾದಕ ದ್ರವ್ಯಗಳನ್ನು ಹಾಗೂ 2,10,41,654 ಮೌಲ್ಯದ ಇತರೆ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ 1357 ಎಫ್ಐಆರ್ ದಾಖಲಿಸಲಾಗಿದೆ. ಆದಾಯ ತೆರಿಗೆ ಇಲಾಖೆಯು 12,01,01,810 ರೂ. ನಗದು ಹಾಗೂ 1,47,44,692 ರೂ. ಮೌಲ್ಯದ ಇತರೆ ವಸ್ತುಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಜರುಗಿಸಿದೆ.
ಅಬಕಾರಿ ಇಲಾಖೆಯು 32,80,15,489.90 ರೂ. ಮೌಲ್ಯದ 7,77,296.13 ಲೀಟರ್ಗಳಷ್ಟು ಮದ್ಯ, 4,40,000 ಮೌಲ್ಯದ 14.077 ಕೆಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡು 1965 ಪ್ರಕರಣಗಳನ್ನು ದಾಖಲಿಸಲಾಗಿದೆ.
ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದಂತೆ 36187 ಜಾಮೀನು ರಹಿತ ವಾರೆಂಟ್ಗಳನ್ನು ಚುನಾವಣೆ ಘೋಷಣೆಯಾದ ದಿನದಿಂದ ಇಂದಿನವರೆಗೂ ದಾಖಲಿಸಲಾಗಿದೆ.
ಸಿ ವಿಜಿಲ್ ಆ್ಯಪ್ ಮೂಲಕ 1543 ದೂರುಗಳನ್ನು ಸ್ವೀಕರಿಸಲಾಗಿದ್ದು, ಆ ಪೈಕಿ 409 ನಿಜವೆಂದು ಕಂಡು ಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಪ್ರಕಟಣೆ ತಿಳಿಸಿದೆ.