ಭಾರತದಲ್ಲಿ ಮಾನಸಿಕ ಆರೋಗ್ಯ ಸೇವೆಗಳ ಗುಣಮಟ್ಟ ವಿಸ್ತರಣೆ-ಇಂಗ್ಲೆಂಡ ನ ನಾರ್ದಂಬರ್‍ಲ್ಯಾಂಡ್, ಟೈನ್ ಮತ್ತು ಬೆಂಗಳೂರಿನ ಕಡಬಮ್‍ಗ್ರೂಪ್‍ನೊಂದಿಗೆ ಒಪ್ಪಂದ

????????????????????????????????????

ಭಾರತದಲ್ಲಿಮಾನಸಿಕ ಆರೋಗ್ಯರೋಗದ ಹೊರೆಯ ವಿರುದ್ಧ ಹೋರಾಡಲುಯುಕೆನ ನಾರ್ದಂಬರ್‍ಲ್ಯಾಂಡ್, ಟೈನ್ ಮತ್ತು ವೇರ್‍ಎನ್‍ಎಚ್‍ಎಸ್ ಫೌಂಡೇಷನ್‍ಟ್ರಸ್ಟ್(ಎನ್‍ಟಿಡಬ್ಲ್ಯು)ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಕಡಬಮ್ಸ್ ಸಮೂಹ.

ಈ ಪಾಲುದಾರಿಕೆ ಕೆಳಗಿನ ವಿಷಯಗಳಲ್ಲಿ ಗಮನ ಕೇಂದ್ರೀಕರಿಸಲಿದೆ :
• ಒಳರೋಗಿ ಆರೋಗ್ಯವನ್ನು ಒಳಗೊಂಡಂತೆ ಸಮಗ್ರಕಾರ್ಯಕ್ರಮದ ವಿಕಾಸದೊಂದಿಗೆಯುಕೆ ಮಾನದಂಡಗಳಿಗೆ ತಕ್ಕಂತಹ ವಿಶ್ವಮಟ್ಟದಚಟಅಥವ ವ್ಯಸನ ಬಿಡಿಸುವಸೇವೆಗಳ ಪೂರೈಕೆ.
• ಸಮುದಾಯಆರೈಕೆ ಮತ್ತುತೀವ್ರರೀತಿಯಆರೈಕೆಗಳಿಂದ ಚಿಕಿತ್ಸೆಯಲ್ಲಿನಅಂತರಕಡಿಮೆಯಾಗಲಿದೆ. ಈ ಚಿಕಿತ್ಸೆಯಅಂತರ ಪ್ರಸ್ತುತ ಶೇ.70ಕ್ಕೂ ಹೆಚ್ಚಾಗಿದೆ.
• ಸಮುದಾಯದೊಳಗಿನ ಆರೈಕೆಯ ಹಲವು ಮಾದರಿಗಳ ಜೊತೆಗೆಸಲಹಾಕಾರರು, ದಾದಿಯರು ಮತ್ತುಇತರೆ ಮಾನಸಿಕ ಆರೋಗ್ಯ ವೃತ್ತಿಪರರ ಕೌಶಲ್ಯ ಹೆಚ್ಚಿಸುವುದರೊಂದಿಗೆ, ಸಮಸ್ಯೆತಡೆಯುವುದು, ಶೀಘ್ರ ಪತ್ತೆ, ಶೀಘ್ರ ಹಸ್ತಕ್ಷೇಪ ಕಾರ್ಯಗಳಿಗೆ ಭಾರತದಲ್ಲಿ ಮಾನಸಿಕ ಆರೋಗ್ಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಅವಕಾಶ ಮಾಡಿಕೊಡುವುದು.
• ಶಾಲೆಗಳಲ್ಲಿ ಶೀಘ್ರ ಹಸ್ತಕ್ಷೇಪಗಳ ಖಾತ್ರಿ ಮಾಡಿಕೊಳ್ಳುವುದು ಮತ್ತು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಹೆಚ್ಚು ಉತ್ತಮವಾಗಿ ನಿರ್ವಹಿಸಲು ಶಾಲೆಗಳಲ್ಲಿ ಅತ್ಯುತ್ತಮ ಮಾನಸಿಕ ಆರೋಗ್ಯ ಶುಶ್ರೂಷೆ ಸೇವೆಗಳನ್ನು ಪೂರೈಸುವುದು.
ಬೆಂಗಳೂರು, ಏಪ್ರಿಲ್ 01, 2019 :- ಮಾನಸಿಕ ಆರೋಗ್ಯ ಸೇವೆಗಳ ಪೂರೈಕೆಯಲ್ಲಿ ಭಾರತದಅತ್ಯಂತದೊಡ್ಡ ಖಾಸಗಿಸಂಸ್ಥೆಯಾದಕಡಬಮ್ಸ್‍ಗ್ರೂಪ್ 26 ವರ್ಷಗಳಿಂದ ತನ್ನ ಸೇವೆಯನ್ನು ಪೂರೈಸುತ್ತಿದ್ದು, ಈಗ ಯುಕೆನ ನಾರ್ದಂಬರ್‍ಲ್ಯಾಂಡ್, ಟೈನ್ ಮತ್ತು ವೇರ್‍ಎನ್‍ಎಚ್‍ಎಸ್ ಫೌಂಡೇಷನ್ ಟ್ರಸ್ಟ್‍ಗಳೊಂದಿಗೆ (ಎನ್‍ಟಿಡಬ್ಲ್ಯು)ಸಹಯೋಗವನ್ನು ಪ್ರಕಟಿಸಿದ್ದು, ಇದರಡಿ ಭಾರತದಲ್ಲಿ ಮಾನಸಿಕ ಆರೋಗ್ಯ ಸೇವೆಗಳ ಗುಣಮಟ್ಟವನ್ನು ವಿಸ್ತರಿಸುವುದು ಮತ್ತು ಚಿಕಿತ್ಸಾ ಅಂತರವನ್ನು ಕಡಿಮೆ ಮಾಡುವ ಯೋಜನೆ ಹೊಂದಲಾಗಿದೆ.

ಯುಕೆನ ನಾರ್ದಂಬರ್‍ಲ್ಯಾಂಡ್, ಟೈನ್ ಮತ್ತು ವೇರ್‍ಎನ್‍ಎಚ್‍ಎಸ್ ಫೌಂಡೇಷನ್ ಟ್ರಸ್ಟ್‍ಗಳೊಂದಿಗೆ (ಎನ್‍ಟಿಡಬ್ಲ್ಯು)ಈಶಾನ್ಯಇಂಗ್ಲೆಂಡ್‍ನಲ್ಲಿ ಮಾನಸಿಕ ಆರೋಗ್ಯ ಮತ್ತು ವೈಕಲ್ಯತೆ ಸೇವೆಗಳನ್ನು ಪೂರೈಸುತ್ತಿದ್ದು, ಬೆಂಗಳೂರು ಮೂಲದ ಕಡಬಮ್‍ಗ್ರೂಪ್‍ನೊಂದಿಗೆ`ಜ್ಞಾನ ಪಾಲುದಾರರಾಗಿ’ ಪರಸ್ಪರ ಬೆಂಬಲ, ಪರಿಣತಿ ಮತ್ತುತರಬೇತಿ ಪೂರೈಸಲಿದೆ.

ಎನ್‍ಟಿಡಬ್ಲ್ಯುನ ಮುಖ್ಯಕಾರ್ಯನಿರ್ವಾಹಕರಾದಜಾನ್ ಲಾಲರ್, ಕಡಬಮ್ಸ್‍ಗ್ರೂಪ್‍ನ ನಿರ್ದೇಶಕರಾದ ಸಂದೇಶ್‍ಆರ್.ಕಡಬಮ್ ಈ ಕುರಿತ ಪರಸ್ಪರ ತಿಳುವಳಿಕಾ ಒಡಂಬಡಿಕೆಗೆ ನ್ಯೂಕ್ಯಾಸೆಲ್‍ನಲ್ಲಿನ ಸೇಂಟ್ ನಿಕೋಲಾಸ್‍ಆಸ್ಪತ್ರೆಯಲ್ಲಿ ಸಹಿ ಹಾಕಿ ಸಹಭಾಗಿತ್ವದಅಧಿಕೃತಆರಂಭಕ್ಕೆ ಚಾಲನೆ ನೀಡಿದರು.

ಕಡಬಮ್ಸ್‍ಗ್ರೂಪ್‍ನ ನಿರ್ದೇಶಕರಾದ ಸಂದೇಶ್‍ಆರ್.ಕಡಬಮ್‍ಅವರು ಮಾತನಾಡಿ, “ನಮ್ಮ ಪ್ರಸ್ತುತ ಸೇವೆಗಳನ್ನು ಸಮನಾದರೀತಿಯಲ್ಲಿನೀಡುವಕಡೆಗೆ ಪ್ರಗತಿ ಸಾಧಿಸಲುಅಲ್ಲದೆ, ಎನ್‍ಟಿಡಬ್ಲ್ಯುಉತ್ಕøಷ್ಟತೆ ಹೊಂದಿರುವಂತಹ ಸಮಗ್ರಆರೈಕೆ ಮಾರ್ಗಗಳ ಮಾದರಿಯಂತೆ ನೂತನ ಸೇವೆಗಳನ್ನು ಅಭಿವೃದ್ಧಿಪಡಿಸಲುಈ ಸಹಭಾಗಿತ್ವಬೆಂಬಲಿಸುತ್ತದೆ.ಭಾರತದಎಲ್ಲೆಡೆಮಾನಸಿಕ ಆರೋಗ್ಯ ಮತ್ತುವೈಕಲ್ಯಕುರಿತ ಸೇವೆಗಳನ್ನು ಕಲಿಯುವುದರಕಡೆಗೆಸಂಪರ್ಕ ಹಾಗೂ ಸೇವೆಗಳ ಗುಣಮಟ್ಟದಲ್ಲಿಬೃಹತ್ ಮುನ್ನಡೆಯನ್ನುಇಂತಹಅಸಾಧಾರಣಎನ್‍ಎಚ್‍ಎಸ್ ಸಂಸ್ಥೆಯೊಂದಿಗೆ ಸಹಯೋಗತರಲಿದೆಎಂಬುದರ ಬಗ್ಗೆ ನಾನು ಬಹಳ ಉತ್ಸಾಹಿತನಾಗಿದ್ದೇನೆ. ಜೊತೆಗೆಇದರಿಂದ ನಾವು ಪರಸ್ಪರಕಲಿಯಲು ಬೃಹತ್ ಅವಕಾಶವೂ ಲಭಿಸಲಿದೆ’’ ಎಂದರು.

ಎನ್‍ಟಿಡಬ್ಲ್ಯುನ ಮುಖ್ಯಕಾರ್ಯನಿರ್ವಾಹಕರಾದಜಾನ್ ಲಾಲರ್‍ಅವರು ಮಾತನಾಡಿ “ಕಡಬಮ್ಸ್‍ಗ್ರೂಪ್‍ನೊಂದಿಗೆ ಕೆಲಸ ಮಾಡಲು ನಮ್ಮ ಟ್ರಸ್ಟ್‍ ಉತ್ಸಾಹಿತವಾಗಿದೆ. ಪರಸ್ಪರ ಹಂಚಿಕೊಂಡಿರುವ ಮೌಲ್ಯಗಳ ಮೇಲೆ ನಮ್ಮ ಪಾಲುದಾರಿಕೆಆಧಾರಿತವಾಗಿದೆ.ಈ ಮೌಲ್ಯಗಳಲ್ಲಿ ಸಹಾನುಭೂತಿಯಆರೈಕೆಜೊತೆಗೆ ನವೀನತೆಯನ್ನುಆಲಂಗಿಸುವುದು ಸೇರಿವೆ. ನಾವು ಪರಸ್ಪರಯಾವರೀತಿಕಲಿಯುತ್ತೇವೆ ಮತ್ತು ಈ ಪಾಲುದಾರಿಕೆಯಾವರೀತಿಯಲ್ಲಿಅಭಿವೃದ್ಧಿ ಹೊಂದಲಿದೆ ಎಂಬುದನ್ನು ನಾನು ಎದುರು ನೋಡುತ್ತಿದ್ದೇನೆ. ಕಡಬಮ್ಸ್ ಸೇವೆ ನೀಡುತ್ತಿರುವ ಭಾರತದಲ್ಲಿನಅತ್ಯಂತದುರ್ಬಲ ವ್ಯಕ್ತಿಗಳಿಗೆ ಮಾನಸಿಕ ಅರೋಗ್ಯ ಮತ್ತು ವೈಕಲ್ಯ ಸೇವೆಗಳ ವಿತರಣೆಯನ್ನು ಈ ಸಹಭಾಗಿತ್ವ ಬೆಂಬಲಿಸಲಿದೆ ಎಂಬುದಕ್ಕೆ ನಾನು ನಿರ್ದಿಷ್ಟವಾಗಿ ಹರ್ಷಗೊಂಡಿದ್ದೇನೆ’’ ಎಂದರು.

ಕೆಲವು ದೇಶಗಳು ಮಾನಸಿಕ ಆರೋಗ್ಯ ನೀತಿ ರೂಪಿಸುವಲ್ಲಿ ಮತ್ತು ಯೋಜನೆಯಲ್ಲಿ ಪ್ರಗತಿ ಸಾಧಿಸಿದ್ದರೂ ಕೂಡ ಮಾನಸಿಕ ಆರೋಗ್ಯಕ್ಷೇತ್ರದಲ್ಲಿತರಬೇತಿ ಹೊಂದಿರುವ ಆರೋಗ್ಯ ಕೆಲಸಗಾರರ ಜಾಗತಿಕ ಕೊರತೆ ಇರುವುದಲ್ಲದೆ, ಸಮುದಾಯಆಧಾರಿತಮಾನಸಿಕ ಆರೋಗ್ಯ ಸೌಲಭ್ಯಗಳಲ್ಲಿನ ಹೂಡಿಕೆಯ ತೀವ್ರಕೊರತೆಯೂ ಕಾಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾನಸಿಕ ಆರೋಗ್ಯಅಟ್ಲಾಸ್ 2017 ತಿಳಿಸಿದೆ. ಇದಲ್ಲದೆ, ಮನಃಶಾಸ್ತ್ರಜ್ಞರು, ಮನೋವೈದ್ಯರು ಮತ್ತು ವೈದ್ಯರಂತಹ ಮಾನಸಿಕ ಆರೋಗ್ಯಕರ್ಮಿಗಳ ತೀವ್ರ ಕೊರತೆ ಕಾಡಿದೆ. 2014ರಲ್ಲಿ ಲಭ್ಯವಿರುವ ಇತ್ತೀಚಿನ ದತ್ತಾಂಶಗಳ ಪ್ರಕಾರ ಇದು‘1,00.000ಜನರಿಗೆ ಒಬ್ಬರಷ್ಟಿದೆ’.

ಭಾರತದಲ್ಲಿ ಮಾನಸಿಕ ಅಸ್ವಸ್ಥತೆಯ ರೋಗದ ಹೊರೆ, ಮಾದರಿ ಯೋಜನೆ ಮತ್ತು ಕೈಗೊಳ್ಳಲಾಗುತ್ತಿರುವ ಪ್ರಯತ್ನಗಳನ್ನು ಗರಿಷ್ಠವಾಗಿಸುವುದನ್ನು ಕುರಿತು ಕಡಬಮ್ಸ್‍ಗ್ರೂಪ್‍ನ ವೈದ್ಯಕೀಯ ನಿರ್ದೇಶಕರಾದ ಡಾ. ಬಿ.ಆರ್.ಮಧುಕರ್‍ ಅವರು ಮಾತನಾಡಿ, “ಈ ಪಾಲುದಾರಿಕೆ ಬೆಂಗಳೂರಿನಲ್ಲಿ ಮಾದರಿ ಯೋಜನೆಯಾಗಿದ್ದು, ಇದರಡಿ ಸಲಹಾಕಾರರು, ದಾದಿಯರು, ವೈಧ್ಯಕೀಯ ಮನಃಶಾಸ್ತ್ರಜ್ಞರು, ಸಾಮಾಜಿಕ ಕಾರ್ಯಕರ್ತರು ಮತ್ತುಇತರೆ ವೃತ್ತಿಪರ ಸಿಬ್ಬಂದಿ ಸೇರಿದಂತೆ ಸುಮಾರು 40 ಮಾನಸಿಕ ಆರೋಗ್ಯ ವೃತ್ತಿಪರರಿಗೆ, ಮಾನಸಿಕ ಅಸ್ವಸ್ಥತೆಗಳ ಸಂಕೀರ್ಣ ಪ್ರಕರಣಗಳನ್ನು ನಿಭಾಯಿಸುವಲ್ಲಿ ಮೂಲ ಕ್ರಮಗಳನ್ನು ಕುರಿತು ನಾವು ತರಬೇತಿ ನೀಡಲಿದ್ದೇವೆ. ಇದರ ನಂತರ ಈ ಜ್ಞಾನವನ್ನುದೇಶದ ಇತರೆ ಸ್ಥಳಗಳಿಗೆ ಹರಡುವ ಗುರಿಯನ್ನು ನಾವು ಹೊಂದಿದ್ದೇವೆ ಅಲ್ಲದೆ, ಇದರಲ್ಲಿಕೆಲವು 100ರಿಂದ ಸಾವಿರಾರು ವೈದ್ಯಕೀಯ ವೃತ್ತಿಪರರು ಸೇರಿರುತ್ತಾರೆ. ಭಾರತದ ಬಹುತೇಕ ಸ್ಥಳಗಳಲ್ಲಿ ಮಾನಸಿಕ ಅಸ್ವಸ್ಥತೆಯನ್ನು ಸಾಮಾಜಿಕ ಕಳಂಕ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಸುಮಾರು ಶೇ.70ರಷ್ಟು ರೋಗಿಗಳು ಸರಿಯಾದ ನೆರವನ್ನು ಪಡೆದುಕೊಳ್ಳಲು ಅಥವ ಅರಸಲು ಸಾಧ್ಯವಾಗುವುದಿಲ್ಲ. ಮಾನಸಿಕ ಆರೋಗ್ಯ ಬೆಂಬಲವನ್ನು ಸ್ವೀಕರಿಸಲು ಅವಕಾಶವಿಲ್ಲದರೋಗಿಗಳನ್ನು ಹೊಂದಿರುವ ಸಮುದಾಯಗಳನ್ನು ತಲುಪುವುದು ನಮ್ಮದೊಡ್ಡದಾದಉದ್ದೇಶವಾಗಿರುವುದಲ್ಲದೆ, ಅಂತಿಮವಾಗಿರಾಜ್ಯದಎಲ್ಲ ಜಿಲ್ಲೆಗಳನ್ನು ತಲುಪುವುದು ಗುರಿಯಾಗಿದೆ. ಭಾರತದಲ್ಲಿಆರೋಗ್ಯ ಸೇವೆಯ ವಿತರಣೆಯನ್ನು ನಿರ್ವಹಿಸಲು ಆರೈಕೆಯ ಮಾರ್ಗಗಳು ಮತ್ತು ವೈದ್ಯಕೀಯ ಶಿಷ್ಟಾಚಾರಗಳು ಸೇರಿದಂತೆಆರೋಗ್ಯ ಸೇವೆ ಮತ್ತು ವ್ಯವಸ್ಥೆಗಳನ್ನು ನಾವು ಈ ಪ್ರಕ್ರಿಯೆಯಲ್ಲಿಅಭಿವೃದ್ಧಿ ಪಡಿಸಲಿದ್ದೇವೆ’’ ಎಂದರು.

ನೂತನ ಪಾಲುದಾರಿಕೆ ಕುರಿತು ಬೆಂಗಳೂರಿನಲ್ಲಿ ಬ್ರಿಟಿಷ್ ಉಪ ಉನ್ನತ ಆಯುಕ್ತರಾದ ಡೊಮಿನಿಕ್ ಮೆಕ್ ಅಲಿಸ್ಟರ್‍ಅವರು ಮಾತನಾಡಿ, “ಜಾಗತಿಕವಾಗಿ ಮಾನಸಿಕ ಆರೋಗ್ಯಬೆಳೆಯುತ್ತಿರುವ ಕಾಳಜಿಯ ವಿಷಯವಾಗಿದೆ.ಸ್ಥಳೀಯ ರೋಗಿಗಳಿಗೆ ಹೆಚ್ಚು ಉತ್ತಮವಾದ, ಪ್ರತಿಕ್ರಿಯಾತ್ಮಕ ಮತ್ತು ಸಂಪರ್ಕ ಲಭ್ಯವಿರುವ ಚಿಕಿತ್ಸೆಯ ಆಯ್ಕೆಗಳಿಗೆ ಈ ಸಹಭಾಗಿತ್ವಅಡಿಪಾಯ ಹಾಕಲಿದೆ.ಗುಣಮಟ್ಟದಆರೋಗ್ಯ ಸೇವೆಗಳಿಗೆ ಸಂಪರ್ಕವನ್ನು ಸುಧಾರಿಸುವಲ್ಲಿಯುಕೆ-ಭಾರತದ ನಡುವಿನ ಅದ್ಭುತನಿದರ್ಶನಈ ಪಾಲುದಾರಿಕೆಯಾಗಿದೆ.ಮಾನಸಿಕ ಆರೋಗ್ಯದಲ್ಲಿ ವಿಸ್ತøತ ಸ್ಥಳೀಯ ಸೇವೆಗಳನ್ನು ಪೂರೈಸಲುಎನ್‍ಎಚ್‍ಎಸ್‍ನ ವಿಶೇಷ ಜ್ಞಾನ ಮತ್ತು ಸೇವೆಗಳ ಜೊತೆಗೆಆರೋಗ್ಯೆ ಸೇವೆ ವಿತರಣೆಯಲ್ಲಿಕಡಬಮ್ಸ್‍ನಅನುಭವವನ್ನುತರುವ ಈ ಸಹಭಾಗಿತ್ವವನ್ನು ಬೆಂಬಲಿಸಲು ಅಂತಾರಾಷ್ಟ್ರೀಯ ಮಾರಾಟ ಇಲಾಖೆ(ಡಿಐಟಿ) ಮತ್ತುಬೆಂಗಳೂರಿನ ಬ್ರಿಟಿಷ್ ಉಪ ಉನ್ನತಆಯೋಗದಕಚೇರಿಹೆಮ್ಮೆ ಪಡುತ್ತವೆ’’ ಎಂದರು.

ಪಾಲುದಾರಿಕೆಯ ಭಾಗವಾಗಿ ಮಾನಸಿಕ ಚಿಕಿತ್ಸೆಯ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುವಲ್ಲಿ ನೂತನ ಮಾರ್ಗಗಳನ್ನು ಅಭಿವೃದ್ಧಿಪಡಿಸುವಲ್ಲಿಕಡಬಮ್ಸ್‍ಗೆ ಬೆಂಬಲವನ್ನುಎನ್‍ಟಿಡಬ್ಲ್ಯು ಪೂರೈಸಲಿದೆ.ಈ ಕ್ಷೇತ್ರಗಳಲ್ಲಿ ಚಟಅಥವ ವ್ಯಸನಗಳು, ಬುದ್ಧಿವಂತ ಸೂಚನೆಗಳು, ಶಾಲಾ ಮಾನಸಿಕ ಆರೋಗ್ಯ, ಸಮುದಾಯ ಮತ್ತು ಗೃಹ ಆಧಾರಿತ ಆರೈಕೆಗಳು ಸೇರಿವೆ. ಬ್ರಿಟಿಷ್ ಉಪ ಉನ್ನತಆಯುಕ್ತರಾದಡೊಮಿನಿಕ್ ಮೆಕ್‍ಅಲಿಸ್ಟರ್‍ಅವರುಉಭಯ ಸಂಸ್ಥೆಗಳನ್ನು ಪರಸ್ಪರ ಪರಿಚಯಿಸಿದರು. ಅವರು ಸಹಭಾಗಿತ್ವದ ಪ್ರಕ್ರಿಯೆಯನ್ನುಅದರ ಅಭಿವೃದ್ದಿಯುದ್ದಕ್ಕೂ ಬೆಂಬಲಿಸಿರುತ್ತಾರೆ. ಭಾರತದಲ್ಲಿನ ಮಾನಸಿಕ ಆರೋಗ್ಯ ಸೇವೆಗಳಿಗೆ ಇದುತರಲಿರುವ ಲಾಭಗಳನ್ನು ಪರಿಗಣಿಸಿ ಈ ಸಹಭಾಗಿತ್ವದ ಕಡೆಗೆ ಅವರು ಬಹಳ ಆಸಕ್ತಿ ವಹಿಸಿದ್ದರು. ಇದರಿಂದ ಈ ಎರಡೂ ಸಂಸ್ಥೆಗಳು ಒಂದಾಗಿ ಕೆಲಸ ಮಾಡಿಎಲ್ಲರಿಗೂ ಲಾಭವಾಗುವ ಸಂಪನ್ಮೂಲಯುತ ಫಲಿತಾಂಶ ತರಬಹುದಾಗಿದೆ.

ಕಡಬಮ್ಸ್‍ ಆಸ್ಪತ್ರೆ ಕುರಿತು :ಕರ್ನಾಟಕ ರಾಜ್ಯದಲ್ಲಿರುವ ಬೆಂಗಳೂರು ಮೂಲದಕಡಬಮ್ಸ್ ಸಮೂಹ ಮಾನಸಿಕ ಆರೋಗ್ಯ ಮತ್ತು ವೈಕಲ್ಯತೆಯಆರೈಕೆ ಪೂರೈಸುವಲ್ಲಿಮತ್ತು ಭಾರತದ ಎಲ್ಲೆಡೆ ಸೇವಾ ಬಳಕೆದಾರರಿಗೆ ಪುನರ್ ವಸತಿ ಸೇವೆಗಳನ್ನು ನೀಡುವಲ್ಲಿ 26 ವರ್ಷಗಳಿಗೂ ಹೆಚ್ಚಿನ ಅನುಭವಗಳನ್ನು ಹೊಂದಿದೆ.

ಈ ಸಮೂಹದ ಸೌಲಭ್ಯಗಳಲ್ಲಿ 7 ಪ್ರತ್ಯೇಕ ಒಳರೋಗಿ ಕೇಂದ್ರಗಳು ಸೇರಿವೆ. ಮಾದಕದ್ರವ್ಯ ಮತ್ತು ಮದ್ಯ ವ್ಯಸನ, ಸ್ಕಿಜೊಫ್ರೇನಿಯ, ಬೈಪೋಲಾರ್‍ಡಿಸಾರ್ಡರ್, ವ್ಯಕ್ತಿತ್ವ ತೊಂದರೆಗಳು ಮತ್ತು ಖಿನ್ನತೆಗಳು ಸೇರಿದಂತೆ ವಿವಿಧಸ್ಥಿತಿಗಳಿಗೆ ಸಮಗ್ರ ಆರೈಕೆ ಮತ್ತುಚಿಕಿತ್ಸೆಯನ್ನು ಇವು ಪೂರೈಸುತ್ತಿವೆ.

ನಾರ್ದಂಬರ್‍ಲ್ಯಾಂಡ್, ಟೈನ್ ಮತ್ತು ವೇರ್‍ಎನ್‍ಎಚ್‍ಎಸ್ ಫೌಂಡೇಷನ್‍ಟ್ರಸ್ಟ್(ಎನ್‍ಟಿಡಬ್ಲ್ಯು) ಕುರಿತು:-ನಾರ್ದಂಬರ್‍ಲ್ಯಾಂಡ್, ಟೈನ್ ಮತ್ತು ವೇರ್‍ಎನ್‍ಎಚ್‍ಎಸ್ ಫೌಂಡೇಷನ್‍ಟ್ರಸ್ಟ್(ಎನ್‍ಟಿಡಬ್ಲ್ಯು) ಇಂಗ್ಲೆಂಡ್‍ನಲ್ಲಿಅತ್ಯಂತ ದೊಡ್ಡದಾದ ಮಾನಸಿಕ ಆರೋಗ್ಯ ಮತ್ತು ವೈಕಲ್ಯಚಿಕಿತ್ಸಾ ಟ್ರಸ್ಟ್‍ಗಳಲ್ಲಿ ಒಂದಾಗಿದೆ. ಈ ಟ್ರಸ್ಟ್ ಮಾನಸಿಕ ಆರೋಗ್ಯ, ಕಲಿಕಾ ವೈಕಲ್ಯ, ನರರೋಗ ಸಂಬಂಧಿ ಆರೈಕೆಗಳನ್ನು ಈಶಾನ್ಯ ಭಾಗದಜನರಿಗೆ ಪೂರೈಸುತ್ತಿದೆ.ಜೊತೆಗೆಕೆಲವು ರಾಷ್ಟ್ರೀಯ ವಿಶೇಷ ಸೇವೆಗಳನ್ನು ನೀಡುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ