ಕಾಂಗ್ರೆಸ್ ಪ್ರಣಾಳಿಕೆ ಹಿಂದೆ ರಾಹುಲ್ ಗಾಂಧಿಯ ತುಕಡೇ ಗ್ಯಾಂಗ್ ಮಿತ್ರರ ಕೈವಾಡ ಇದ್ದಂತಿದೆ: ಜೇಟ್ಲಿ ವಾಗ್ದಾಳಿ

ನವದೆಹಲಿ: ಕಾಂಗ್ರೆಸ್ ಚುನಾವಣ ಅಪ್ರಣಾಳಿಕೆ ಕುರಿತು ವಾಗ್ದಾಳಿ ಮುಂದುವರೆಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಪ್ರಣಾಳಿಕೆಯಲ್ಲಿರುವ ಅಂಶಗಳ ಬಗ್ಗೆ ಗಮನ ಸೆಳೆದಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಇದು ದೇಶವನ್ನು ತುಂಡು ತುಂಡು ಮಾಡಬೇಕು ಎಂದು ಹೇಳಿದ ಗ್ಯಾಂಗ್‌ನಿಂದ ಪ್ರೇರಣೆ ಪಡೆದ ಪ್ರಣಾಳಿಕೆ ಎಂದು ಗುಡುಗಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆ ರೂಪಿಸುವಲ್ಲಿ ಕಾಂಗ್ರೆಸ್ ಅಧ್ಯಕ್ಷರ ‘ತುಕಡೇ ಗ್ಯಾಂಗ್’ನ ಮಿತ್ರರ ಕೈವಾಡ ಇದ್ದಂತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನೆಹರೂ ಮಾಡಿದ ತಪ್ಪನ್ನು ಕಾಂಗ್ರೆಸ್ ಈ ಪ್ರಣಾಳಿಕೆಯಲ್ಲಿಯೂ ಮುಂದುವರಿಸಿದೆ ಎಂದಿದ್ದಾರೆ.

ದೇಶದ್ರೋಹ ಕಾಯಿದೆಯನ್ನು ರದ್ದುಪಡಿಸುವ ಪ್ರಸ್ತಾಪ ಮಾಡಿರುವ ಕಾಂಗ್ರೆಸ್, ನಕ್ಸಲೀಯರ ಹಾಗೂ ಜಿಹಾದಿಗಳಿಂದ ಪ್ರಭಾವ ಹೊಂದಿದಂತಿದೆ. ಸಂತ್ರಸ್ತ ಕಾಶ್ಮೀರಿ ಪಂಡಿತರ ಬಗ್ಗೆ ವಿಷಾದದ ಒಂದು ಕಣವೂ ಇದರಲ್ಲಿಲ್ಲ ಎಂದು ಕಿಡಿಕಾರಿದ್ದಾರೆ.

ನರಸಿಂಹರಾವ್ ಸರಕಾರ ಟಾಡಾ ಕಾಯಿದೆಯನ್ನು ಹಾಗೂ ಮನಮೋಹನ್ ಸಿಂಗ್ ಸರಕಾರ ಪೋಟಾ ಕಾಯಿದೆಗಳನ್ನು ಹಿಂದೆಗೆದುಕೊಂಡಿದ್ದವು. ಈಗ ಕಾಂಗ್ರೆಸ್ ಅದೇ ರೀತಿ ಆಫ್ಸಾ ಹಿಂದೆಗೆದುಕೊಂಡು ತಪ್ಪು ಮಾಡಲು ಹೊರಟಿದೆ ಎಂದೂ ಜೇಟ್ಲಿ ಹೇಳಿದರು.

ರೈತರ ಕಣ್ಣೊರೆಸುವ ಭರವಸೆಗಳಿಗೆ ಕಳೆದ ಬಾರಿ ನಡೆದ ಐದು ರಾಜ್ಯಗಳ ಚುನಾವಣೆಯಲ್ಲೂ ಜನತೆ ಮರುಳಾಗಿಲ್ಲ ಎಂದಿರುವ ಜೇಟ್ಲಿ, ಇಂಥ ಪ್ರಣಾಳಿಕೆ ಮಂಡಿಸಿದ ಕಾಂಗ್ರೆಸ್ ಒಂದು ಮತಕ್ಕೂ ಅರ್ಹವಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಉಗ್ರರ ಆಡಳಿತ ನಡೆಯಲಿದೆ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ