ಕಲರ್ಫೂಲ್ ಟೂರ್ನಿ ಐಪಿಎಲ್ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ತಾನ ರಾಯಲ್ಸ್ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಬನ್ನಿ ಹಾಗಾದ್ರೆ ಆರ್ಸಿಬಿ ಮತ್ತು ರಾಜಸ್ತಾನ ರಾಯಲ್ಸ್ ನಡುವಿನಕದನ ಹೇಗಿರುತ್ತೆ ಅನ್ನೋದನ್ನ ನೋಡೋಣ.
ಪಿಂಕ್ ಸಿಟಿಯಲ್ಲಿ ಆರ್ಸಿಬಿ, ರಾಜಸ್ಥಾನ ಬಿಗ್ ಫೈಟ್
ಹೌದು ಇಂದು ಪಿಂಕ್ ಸಿಟಿಯಲ್ಲಿ ಆರ್ಸಿಬಿ ಮತ್ತು ರಾಜಸ್ತಾನ ರಾಯಲ್ಸ್ ಇಂದು ಬಿಗ್ ಫೈಟ್ ನಡೆಯಲಿದೆ. ಎರಡೂ ತಂಡಗಳು ಎಲ್ಲ ತಂಡಗಳಂತೆ ಬಲಿಷ್ಠವಾಗಿದ್ರು ಟೂರ್ನಿಯಲ್ಲಿ ಒಂದು ಗೆಲುವನ್ನು ಕಾಣದೇ ಎರಡು ತಂಡಗಳು ಭಾರೀ ಮುಖಭಂಗ ಅನುಭವಿಸಿವೆ. ಇಂದಿನ ಪಂದ್ಯವನ್ನಾದ್ರು ಗೆದ್ದು ಗೆಲುವಿನ ಖಾತೆ ತೆರೆಯಲು ಉಭಯ ತಂಡಗಳು ದೊಡ್ಡ ಹೋರಾಟವನ್ನೆ ಮಾಡಬೇಕಿದೆ.
ಮೊದಲ ಗೆಲುವಿನ ಹುಡುಕಾಟದಲ್ಲಿ ಉಭಯ ತಂಡಗಳು
ಐಪಿಎಲ್ ಆರಂಭವಾಗಿ ಒಂದು ವಾರ ಕಳೆದಿವೆ ಎಲ್ಲ ತಂಡಗಳು ಗೆಲುವಿನ ಖಾತೆ ತೆರೆದು ಮುನ್ನುಗುತ್ತಿವೆ. ಆದರೆ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ಮತ್ತು ಅಜಿಂಕ್ಯ ರಹಾನೆ ನೇತೃತ್ವದ ರಾಜಸ್ತಾನ ರಾಯಲ್ ತಂಡಗಳು ಆಡಿದ ಮೂರು ಪಂದ್ಯಗಳಲ್ಲೂ ಸೋತಿದ್ದು ಗೆಲುವು ಅನ್ನೋದು ಮರಿಚಿಕ್ಕೆಯಾಗಿದೆ.
ಆರ್ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಹೀನಾಯವಾಗಿ ಸೋತಿತ್ತು. ನಂತರ ತವರಿನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಅಂಪೈರ್ ಅವರ ತಪ್ಪು ನಿರ್ಧಾರದಿಂದ ಸೋಲಬೇಕಾಯಿತು. ನಂತರ ಮೊನ್ನೆ ಸನ್ರೈಸರ್ಸ್ ವಿರುದ್ಧ ನಡೆದ ಪಂದ್ಯದಲ್ಲೂ ಸೋಲುವ ಮೂಲಕ ಆರ್ಸಿಬಿ ಹ್ಯಾಟ್ರಿಕ್ ಸೋಲು ಕಂಡಿತು.
ಇದು ಆರ್ಸಿಬಿ ಕತೆಯಾದ್ರೆ ಇನ್ನು ರಾಜಸ್ತಾನ ರಾಯಲ್ಸ್ ತಂಡ ಎರಡು ಪಂದ್ಯಗಳಲ್ಲಿ ಕಡಿಮೆ ಅಂತರದಲ್ಲಿ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಚೇಸಿಂಗ್ ಸೋಲು ಕಂಡಿತ್ತು. ಎರಡನೇ ಪಂದ್ಯದಲ್ಲಿ ಸನ್ರೈಸರ್ಸ್ ವಿರುದ್ಧ 5 ವಿಕೆಟ್ಗಳ ಅಂತರದಿಂದ ಸೋಲು ನಂತರ ಮೊನ್ನೆ ಚೆನ್ನೈ ವಿರುದ್ಧ 8 ವಿಕೆಟ್ಗಳ ಸೋಲು ಕಂಡು ಆಡಿದ ಮೂರು ಪಂದ್ಯಗಳನ್ನ ಕೈಚೆಲ್ಲಿಕೊಂಡಿತ್ತು.
ಆರ್ಸಿಬಿ, ರಾಜಸ್ಥಾನ ರಾಯಲ್ಸ್ ಫೈಟ್
ಪಂದ್ಯ 19
ಆರ್ಸಿಬಿ 8
ರಾಜಸ್ಥಾನ 9
ಫಲಿತಾಂಶವಿಲ್ಲ 2
ಇದುವರೆಗೂ ಐಪಿಎಲ್ನಲ್ಲಿ ಆರ್ಸಿಬಿ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳು 19 ಬಾರಿ ಮುಖಾಮುಳಿಯಾಗಿವೆ. ಇದರಲ್ಲಿ ಆರ್ಸಿಬಿ 8 ಪಂದ್ಯಗಳನ್ನ ಗೆದ್ದುಕೊಂಡ್ರೆ ರಾಜಸ್ತಾನ 9 ಬಾರಿ ಗೆದ್ದು ಪ್ರಾಬಲ್ಯ ಮೆರೆದಿದೆ. 2 ಪಂದ್ಯಗಳು ಫಲತಾಂಶವಿಲ್ಲದೇ ರದ್ದುಗೊಂಡಿದೆ.
ಮೊದಲ ಗೆಲುವಿಗೆ ಹೋರಾಡ ಬೇಕು ಆರ್ಸಿಬಿ
ಸತತ ಮೂರು ಸೋಲುಗಳಿಂದ ಕಂಗೆಟ್ಟಿರುವ ಆರ್ಸಿಬಿ ತಂಡ ಇಂದು ರಾಜಸ್ತಾನ ರಾಯಲ್ಸ್ ವಿರುದ್ಧ ಗೆಲ್ಲಲ್ಲೇಬೇಕಾದ ಒತ್ತಡದಲ್ಲಿ ಸಿಲುಕಿದೆ. ತಂಡದ ಮೂರು ಡಿಪಾರ್ಟ್ಮೆಂಟ್ಗಳು ಫ್ಲಾಪ್ ಆಗಿದ್ದು ಕ್ಯಾಪ್ಟನ್ ಕೊಹ್ಲಿ ತಂಡದ ಮೇಲೆ ಮೇಜರ್ ಸರ್ಜರಿ ಮಾಡಬೇಕಿದೆ. ಬ್ಯಾಟಿಂಗ್ನಲ್ಲಿ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಕ್ರಿಸ್ಗೆ ನೆಲಕಚ್ಚಿ ನಿಲ್ಲಬೇಕಿದೆ. ಇನ್ನು ತಂಡದ ಬೌಲರ್ಸ್ ಗಳು ಅಗ್ತಯ ಸಂದರ್ಭದಲ್ಲಿ ವಿಕಟ್ ಪಡೆದು ಎದುರಾಳಿಗಳನ್ನ ಕಟ್ಟಿ ಹಾಕಬೇಕಿದೆ.
ತವರಿನಲ್ಲಿ ಮಾನ ಉಳಿಸಿಕೊಳ್ಳುತ್ತಾ ರಾಜಸ್ತಾನ ರಾಯಲ್ಸ್
ಮೂರು ಪಂದ್ಯಗಳನ್ನ ಸೋತಿರುವ ರಾಜಸ್ತಾನ ರಾಯಲ್ಸ್ ಇಂದು ತವರಿನಲ್ಲಿ ಆರ್ಸಿಬಿಯನ್ನ ಎದುರಿಸುತ್ತಿದೆ. ಈ ಪಂದ್ಯವನ್ನಾ ಹೇಗಾದ್ರು ಮಾಡಿ ಗೆದ್ದು ತವರಿನ ಅಭಿಮಾನಗಳದುರು ಮಾನ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನ ಎದುರಿಸುತ್ತಿದೆ.
ಒಟ್ನಲ್ಲಿ ಪಿಂಕ್ ಸಿಟಿಯಲ್ಲಿ ಇಂದು ಆರ್ಸಿಬಿ ಮತ್ತು ರಾಜಸ್ತಾನ ನಡುವಿನ ಕದನ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ರೋಚಕ ರಸದೌತಣ ಸಿಗೋದ್ರಲ್ಲಿ ಅನುಮಾನವೇ ಇಲ್ಲ.