ರಾಜಸ್ಥಾನ ವಿರುದ್ಧ ಚೆನ್ನೈ ತಲೈವಾ ಬೊಂಬಾಟ್ ಬ್ಯಾಟಿಂಗ್: ಅರ್ಧ ಶತಕ ಬಾರಿಸಿ ಮಿಂಚಿದ ಧೋನಿ

ಚೆನ್ನೈ ತಲೈವಾ ಧೋನಿ ಮತ್ತೆ ಶೈನ್ ಆಗಿದ್ದಾರೆ. ಈ ಸೀಸನ್ನಲ್ಲೂ ತಂಡವನ್ನ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಮಾಹಿ ತಂಡಕ್ಕೆ ಹ್ಯಾಟ್ರಿಕ್ ಗೆಲುವುಗಳನ್ನ ತಂದುಕೊಟ್ಟಿದ್ದಾರೆ. ಮೂರನೇ ಪಂದ್ಯದಲ್ಲಿ ಸಾಲಿಡ್ ಬ್ಯಾಟಿಂಗ್ ಮಾಡಿ ಪ್ಲೇಯರ್ ಆಫ್ ದಿ ಮ್ಯಾಚ್ ಗೌರವಕ್ಕೆ ಪಾತ್ರರಾಗಿದ್ದಾಋಎ.

ಅದರಲ್ಲೂ ಮೊನ್ನೆ ರಾಜಸ್ತಾನ ವಿರುದ್ಧದ ಪಂದ್ಯದಲ್ಲಿ ಡೆಡ್ಲಿ ಬ್ಯಾಟಿಂಗ್ ಮಾಡಿದ ಮಾಹಿ ತಂಡಕ್ಕೆ ಆಪಾತ್ಬಾಂಧವನಾಗಿ ಆಡಿದ್ರು.

ನಂ.5ನಲ್ಲಿ ಬಂದ ಧೋನಿ ರಾಜಸ್ತಾನ ರಾಯಲ್ಸ್ ಬೌಲಿಂಗ್ ಅಟ್ಯಾಕ್ನ್ನ ಉಡೀಸ್ ಮಾಡಿದ್ರು.

ಕೊನೆಯ ಓವರ್ನಲ್ಲಿ ಹ್ಯಾಟ್ರಿಕ್ ಸಹಿತ 28 ರನ್ಧೋನಿ ಕೊನೆಯ ಓವರ್ನಲ್ಲಿದ್ದರೆ ಯಾವುದೇ ಬೌಲರ್ಗಾದರೂ ಬೌಲಿಂಗ್ ಮಾಡಬೇಕಾದರೆ ನಿಜಕ್ಕೂ ಸವಾಲಿನ ಕೆಲಸ. ಅದು ಮೊನ್ನೆಯ ಪಂದ್ಯದಲ್ಲೂ ಸಾಭೀತಾಯಿತು, ಇನಿಂಗ್ಸ್ನ ಕೊನೆಯ ಓವರ್ ಎಸೆಯಲು ಬಂದ ಐಪಿಎಲ್ನ ದುಬಾರಿ ಬೌಲರ್ಗೆ ಧೋನಿ ಕೊನೆಯ ಮೂರು ಎಸೆತಗಳಲ್ಲಿ ಬೌಂಡರಿ ಬಾರಿಸಿದ್ರು. ಧೋನಿಗೂ ಮೊದಲು ಜಡೇಜಾ ಮೊದಲ ಎಸೆತವನ್ನು ಸಿಕ್ಸರ್ಗಟ್ಟಿದ್ರು.. ಒಟ್ಟಾರೆ 4 ಸಿಕ್ಸರ್ ಸಹಿತ ಕೊನೆಯ ಓವರ್ನಲ್ಲಿ 28 ರನ್ ಸೂರೆಗೈದ ಧೋನಿ-ಜಡೇಜಾ ಜೋಡಿ ತಂಡದ ಮೊತ್ತ 170ರ ಗಡಿ ದಾಟುವಂತೆ ಮಾಡಿದರು.

ಯಾವ ತಂಡದ ಪರ ಆಡಿದರೂ ಧೋನಿ ಆಟ ಬದಲಾಗದು, ಅದು ರಾಷ್ಟ್ರೀಯ ಪಂದ್ಯವಾಗಲಿ, ಐಪಿಎಲ್ನಲ್ಲಾಗಲಿ ಅಥವಾ ದೇಶಿಯ ಟೂರ್ನಿಯಾದರೂ ಧೋನಿ ಮಾತ್ರ ತಮ್ಮ ಫಿನಿಶಿಂಗ್ ಸ್ಟೈಲ್ನಲ್ಲಿ ಬದಲಾಗುವುದಿಲ್ಲ ಎನ್ನುವುದಕ್ಕೆ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ತಿಳಿದುಬಂದಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಚೆನ್ನೈ 27 ರನ್ಗಳಿಸುವಷ್ಟರಲ್ಲಿ ಆರಂಭಿಕ ಮೂವರ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತ್ತು. ಆದರೆ, ಕೇವಲ 5 ನೇ ಓವರ್ನಲ್ಲಿ 5 ನೇ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿದ ಎಂಎಸ್ ಧೋನಿ 46 ಎಸೆತಗಳಲ್ಲಿ 77 ರನ್ ಚಚ್ಚಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆರಂಭಿಕ ಓವರ್ಗಳಲ್ಲಿ ಕೊಂಚ ನಿಧಾನಗತಿ ಆಟಕ್ಕೆ ಇಳಿದಿದ್ದ ಕ್ಯಾಪ್ಟನ್ ಕೂಲ್ ಕೊನೆಯ 4 ಓವರ್ಗಳಲ್ಲಿ ಬ್ರಾವೋ, ಜಡೇಜಾ ಜೊತೆಗೂಡಿ 64 ರನ್ ಬಾರಿಸಿದರು.

ಅರ್ಧ ಶತಕ ಬಾರಿಸಿದ ಧೋನಿ
ಎಸೆತ 45
ರನ್ 75*
4/6 4/4
ಸ್ಟ್ರೈಕ್ ರೇಟ್ 163.04

ಚೆನ್ನೈ ತಲೈವಾ ಧೋನಿ 45 ಎಸೆತಗಳನ್ನ ಎದುರಿಸಿ ಅಜೇಯ 75 ರನ್ ಗಳಿಸಿದ್ರು. ಇದರಲ್ಲಿ 4 ಬೌಂಡರಿ 4 ಸಿಕ್ಸರ್ ಒಳಗೊಂಡಿತ್ತು. ಒಟ್ಟು 163.04 ಸ್ಟ್ರೈಕ್ ರೇಟ್ ಒಳಗೊಂಡಿತ್ತು.

ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದ ಚೆನ್ನೈ ತಲೈವಾ
ಬೊಂಬಾಟ್ ಬ್ಯಾಟಿಂಗ್ ಮಾಡಿದ ಧೋನಿ ಇನ್ನಿಂಗ್ಸ್ ಕೊನೆಯ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದ್ರು. ಜಯದೇವ್ ಉನಾದ್ಕಟ್ ಅವರ ನಾಲ್ಕು, ಐದು ಮತ್ತು ಆರನೆ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸಿ ತಂಡದ ಸ್ಕೋರ್ ಎಚ್ಚಿಸಿದ್ರು.

ಸಿಕ್ಸರ್ನಲ್ಲೂ ಧೋನಿ ಈಗ ಕಿಂಗ್
ಒಟ್ಟು ನಾಲ್ಕು ಸಿಕ್ಸರ್ ಬಾರಿಸಿದ ಚೆನ್ನೈ ತಲೈವಾ ಐಪಿಎಲ್ನಲ್ಲಿ ಒಟ್ಟು 191 ಸಿಕ್ಸರ್ ಬಾರಿಸಿದ ಸಾಧನೆ ಮಾಡಿದ್ರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್ಮನ್ಗಳಲ್ಲಿ 3ನೇ ಸ್ಥಾನ ಹಾಗೂ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಅಪ್ಪನ ಸಿಕ್ಸರ್ಗೆ ಝೀವಾ ಸೂಪರ್ ಡ್ಯಾನ್ಸ್
ಧೋನಿ ಮಗಳು ಝೀವಾ ಅಪ್ಪನಷ್ಟೇ ಫೇಮಸ್. ಸಖತ್ ಚೂಟಿಯಾಗಿರೋ ಝೀವಾ ಅಪ್ಪನ ಜೊತೆ ತುಂಟಾಟ ಆಡ್ತಾಳೆ. ಅಪ್ಪ ಕೇಳುವ ಪ್ರಶ್ನೆಗಳಿಗೆ ವಿವಿಧ ಭಾಷೆಗಳಲ್ಲಿ ಉತ್ತರಿಸುತ್ತಾಳೆ.ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಡೋ ಎಲ್ಲಾ ಪಂದ್ಯಗಳಲ್ಲಿ ಹಾಜರಾಗಿ ಅಪ್ಪನಿಗೆ ಚಿಯರ್ ಅಪ್ ಮಾಡ್ತಾಳೆ. ಭಾನುವಾರ ನಡೆದ ರಾಜಸ್ಥಾನ ರಾಯಲ್ಸ್ ಹಾಗು ಚೆನ್ನೈಸೂಪರ್ಕಿಂಗ್ಸ್ ನಡುವಿನ ಪಂದ್ಯದಲ್ಲೂ, ಝೀವಾ ಅಪ್ಪನಿಗೆ ಹುರಿದುಂಬಿಸಿದ್ದಾಳೆ.ಅತ್ತ ಅಪ್ಪ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ಮಿಂಚಿದ್ರೆ,ಗ್ಯಾಲರಿಯಲ್ಲಿ ಝೀವಾ ತಮಿಳ್ ಸಾಂಗ್ಗೆ ಸಖತ್ತಾಗಿ ಸ್ಟೆಪ್ಸ್ ಹಾಕಿ ಸಂಭ್ರಮಿಸಿದ್ದಾಳೆ.

ಒಟ್ನಲ್ಲಿ ಧೋನಿಯ ಕಾಲೆಳೆದಿರುವ ಮಾಜಿ ಆಟಗಾರ ಗೌತಮ್ ಗಂಭೀರ್ಗೆ ಚೆನ್ನೈ ತಲೈವಾ ಗೌತಮ್ ಗಂಭೀರ್ಗೆ ಧೋನಿ ಬ್ಯಾಟ್ ಮೂಲಕ ಉತ್ತರ ಕೊಟ್ಟಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ