ದೇಶದ ಅತೀ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯ ಆದಾಯ ಎಷ್ಟು ಗೊತ್ತೇ…?

ನವದೆಹಲಿ: 2017-18ನೇ ಸಾಲಿನ ಹಣಕಾಸು ವರ್ಷದಲ್ಲಿ ಒಟ್ಟು 1,027.34 ಕೋಟಿ ರುಪಾಯಿ ಆದಾಯ ಘೋಷಿಸಿಕೊಳ್ಳುವ ಮೂಲಕ ಬಿಜೆಪಿ(ಭಾರತೀಯ ಜನತಾ ಪಾರ್ಟಿ) ದೇಶದ ಅತ್ಯಂತ ಶ್ರೀಮಂತ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ.

2017-18ರಲ್ಲಿ ಆರು ರಾಷ್ಟ್ರೀಯ ಪಕ್ಷಗಳ ಆದಾಯ 1293.05 ಕೋಟಿ ರೂಪಾಯಿಗಳಷ್ಟಿತ್ತು. ಆದರೆ ಈ ಆದಾಯದ ಸುಮಾರು 700 ಕೋಟಿ ರೂಪಾಯಿಗಳು ಅಜ್ಞಾತ ಮೂಲಗಳಿಂದ ಬಂದಿವೆ.

2016-17ರಲ್ಲಿ ಬಿಜೆಪಿ ಘೋಷಿತ ಆಸ್ತಿ 1,034 ಕೋಟಿ ರೂಪಾಯಿ ಆಗಿದೆ ಎಂದು ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಪ್ರಕಟಿಸಿತ್ತು. ಇದೇ ಅವಧಿಯಲ್ಲಿ 225.36 ಕೋಟಿ ರೂ. ಆಸ್ತಿ ಘೋಷಿಸಿಕೊಂಡ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿತ್ತು.

173.58 ಕೋಟಿ ರೂ. ಆದಾಯ ಘೋಷಿಸಿಕೊಂಡಿರುವ ಬಿಎಸ್ಪಿ ಮೂರನೇ ಸ್ಥಾನದಲ್ಲಿತ್ತು. ಸಿಪಿಐ ಕೇವಲ 2.08 ಕೋಟಿ ರೂ. ಆದಾಯ ಘೋಷಿಸಿಕೊಳ್ಳುವ ಮೂಲಕ ಕೊನೆ ಸ್ಥಾನದಲ್ಲಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ