ಉತ್ತರಕೊರಿಯಾ ಮೇಲೆ ಹೇರಿದ್ದ ನಿಷೇಧ ಹಿಂಪಡೆದ ಅಮೆರಿಕ

ವಾಷಿಂಗ್ಟನ್‌ : ಉತ್ತರ ಕೊರಿಯದ ಮೇಲೆ ಹೇರಿದ್ದ ದೊಡ್ಡ ಮಟ್ಟದ ನಿಷೇಧಗಳನ್ನು ಹಿಂಪಡೆಯುವಂತೆ ಅಮೆರಿಕ ಅಧ್ಯಕ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶ ಹೊರಡಿಸಿದ್ದಾರೆ.

ಟ್ರಂಪ್‌ ಆಡಳಿತೆಯ ಕಂದಾಯ ಇಲಾಖೆ ಈ ದೊಡ್ಡ ಮಟ್ಟದ ನಿಷೇಧಗಳನ್ನು ಜಾರಿಗೊಳಿಸಿದ ಬೆನ್ನಿಗೇ ಟ್ರಂಪ್‌ ಅವರು ಆ ನಿಷೇಧಗಳನ್ನು ತತ್‌ಕ್ಷಣದಿಂದಲೇ ಹಿಂಪಡೆಯುವಂತೆ ಆದೇಶ ಹೊರಡಿಸಿರುವುದಾಗಿ ಅವರ ಮಾಧ್ಯಮ ಕಾರ್ಯದರ್ಶಿ ಪ್ರಕಟಿಸಿದ್ದಾರೆ.

ಅಧ್ಯಕ್ಷ ಟ್ರಂಪ್‌ ಅವರು ಉತ್ತರ ಕೊರಿಯ ನಾಯಕ ಕಿಮ್‌ ಜಾಂಗ್‌ ಉನ್‌ ಅವರನ್ನು ಇಷ್ಟಪಡುತ್ತಾರೆ; ಅಂತೆಯೇ ಆ ದೇಶದ ವಿರುದ್ದ ಹೇರಲಾಗಿದ್ದ ದೊಡ್ಡ ಮಟ್ಟದ ನಿಷೇಧಗಳು ಈಗ ಅಗತ್ಯವಿಲ್ಲ ಎಂದು ತಿಳಿದಿದ್ದಾರೆ ಎಂದು ಮಾಧ್ಯಮ ಕಾರ್ಯದರ್ಶಿ ಹೇಳಿದರು.

ವಿಯೆಟ್ನಾಮ್‌ನ ಹೆನಾಯ್‌ ನಲ್ಲಿ ಕಳೆದ ತಿಂಗಳಲ್ಲಿ ಕಿಮ್‌ ಜತೆಗೆ ನಡೆದಿದ್ದ ಎರಡನೇ ಶೃಂಗದ ಬಳಿಕದಲ್ಲಿ ಅಧ್ಯಕ್ಷ ಟ್ರಂಪ್‌ ಅವರು ಅಚ್ಚರಿಯ ವಿಲಕ್ಷಣಕಾರಿ ಹೆಜ್ಜೆ ಇಟ್ಟಿದ್ದಾರೆ ಎಂದು ತಿಳಿಯಲಾಗಿದೆ

Trump orders withdrawal of sanctions against N Korea immediately after Treasury imposes them

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ